ಸೋಮವಾರ, ಮಾರ್ಚ್ 8, 2021
24 °C

ಕೃಷಿ ಇಲಾಖೆಯಿಂದಲೇ ರೈತರಿಗೆ ಮೋಸ: ಗಡಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ಇಲಾಖೆಯಿಂದಲೇ ರೈತರಿಗೆ ಮೋಸ: ಗಡಾದ

ಬೆಳಗಾವಿ: ‘ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವ ಲಘು ಪೋಷಕಾಂಶಗಳು ಕಳಪೆ ಗುಣಮಟ್ಟದಿಂದ ಕೂಡಿವೆ’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಶುಕ್ರವಾರ ಇಲ್ಲಿ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, ‘ಕೆಲವು ಕಂಪೆನಿಗಳು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಉತ್ಪನ್ನಗಳನ್ನು ಖರೀದಿಸಿದ ರೈತರು ಮೋಸ ಹೋಗಿದ್ದು, ಆಯಾ ಉತ್ಪನ್ನಗಳನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಹಾಗೂ ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ’ ಎಂದರು.‘ಕಳೆದ ನವೆಂಬರ್‌ 21ರಂದು ಈ ಕುರಿತು ಕೃಷಿ ಇಲಾಖೆಯ ಬೆಳಗಾವಿ ಜಂಟಿ ನಿರ್ದೆಶಕರಿಗೆ ದೂರು ಸಲ್ಲಿಸಿ ಲಘು ಪೋಷಕಾಂಶಗಳ ಮಾದರಿಯನ್ನು ಒದಗಿಸಿ, ಪರಿಶೀಲನೆ ಹಾಗೂ ಸೂಕ್ತ ಮಾಹಿತಿಗೆ ಅರ್ಜಿ ಸಲ್ಲಿಸಿದರೆ ಉತ್ತರ ನೀಡಲೂ ವಿಳಂಬ ನೀತಿ ಅನುಸರಿಸಲಾಯಿತು. ಅಲ್ಲದೆ, ಇಲಾಖೆಯು ಸರ್ಕಾರಿ ಸ್ವಾಮ್ಯದ ಪ್ರಯೋಗಾಲಯಗಳಲ್ಲಿ ಆ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿ,  ಗುಣಮಟ್ಟದ ಬಗ್ಗೆ ನೀಡಿರುವ ವರದಿಗೂ, ಖಾಸಗಿ ಹಾಗೂ ಕೇಂದ್ರ ಸರ್ಕಾರಿ ಪ್ರಯೋಗಾಲಯಗಳಲ್ಲಿ ನೀಡಿರುವ ವರದಿಗೂ ವ್ಯತ್ಯಾಸ ಕಂಡುಬಂದಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.