ಶನಿವಾರ, ಫೆಬ್ರವರಿ 27, 2021
29 °C

ಕೃಷಿ ಇಲಾಖೆ: ಜಾಗೃತಿ ಬೈಕ್‌ ರ್‍ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ಇಲಾಖೆ: ಜಾಗೃತಿ ಬೈಕ್‌ ರ್‍ಯಾಲಿ

ಕಾರಟಗಿ: ಬೀಜೋಪಚಾರದ ಬಗೆಗೆ ರೈತರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ ಶುಕ್ರವಾರ ಬೈಕ್‌ ರ್‍ಯಾಲಿ ನಡೆಸಿ, ಗಮನ ಸೆಳೆಯಿತು.ಕೃಷಿ ಇಲಾಖೆಯಿಂದ ಭೂ ಚೇತನ ಯೋಜನೆಯಡಿ ಮರಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಂಗಾವತಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ನಾಯಕ ಚಾಲನೆ ನೀಡಿದರು.ಮರಳಿ, ಸಿದ್ದಾಪುರ ಹಾಗೂ ಕಾರಟಗಿಯಲ್ಲಿ ಬೈಕ್‌ ರ್‍ಯಾಲಿ ನಡೆಸಿ, ರೈತ ಸಂಪರ್ಕ ಕೇಂದ್ರದ ಬಳಿ ಬೀಜೋ­ಪ­ಚಾರದ ಪ್ರಾತ್ಯಕ್ಷಿಕೆ ನಡೆಸಲಾಯಿತು.ಸಹಾಯಕ ಕೃಷಿ ನಿರ್ದೇಶಕ ನಾಗರಾಜ್ ಸಜ್ಜನ್ ಮಾತನಾಡಿ, ಭೂ ಚೇತನ ಯೋಜನೆ ಸೇರಿದಂತೆ ಇಲಾ­ಖೆಯ ಇತರ ಯೋಜನೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಎಂದರು.ಕೃಷಿ ಅಧಿಕಾರಿಗಳಾದ ನಿಂಗಪ್ಪ, ಎಲ್.ಎಚ್.ಹನುಮಂತಪ್ಪ, ನಾಗ­ರಾಜ್ ಸಜ್ಜನ್, ನಾಗರಾಜ್ ಕೊಟಗಿ, ಎಂ.ಡಿ.ಅಕಾನಿ, ಶರಣಪ್ಪ ನಿಡಗುಂದಿ ಸೇರಿದಂತೆ ರೈತರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.