ಸೋಮವಾರ, ಜೂನ್ 21, 2021
30 °C

ಕೃಷಿ ಇಲಾಖೆ: 122 ಹುದ್ದೆ ಖಾಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಸಂಖ್ಯೆ ಬರೋಬ್ಬರಿ 122! ಮೈಸೂರು ಸೇರಿದಂತೆ ಏಳು ತಾಲ್ಲೂಕುಗಳಿಗೆ ಒಟ್ಟು 323 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ ಕೇವಲ 201 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸಹಾಯಕ ಕೃಷಿ ನಿರ್ದೇಶಕ-1, ಕೃಷಿ ಅಧಿಕಾರಿ-37, ಕೃಷಿ ಅಧಿಕಾರಿ (ರೈತ ಮಹಿಳೆ)-2, ಸಹಾಯಕ ಕೃಷಿ ಅಧಿಕಾರಿ-33, ಕೃಷಿ ಸಹಾಯ ಕರು-37, ಆಡಳಿತಾಧಿಕಾರಿ-1, ದ್ವಿತೀಯ ದರ್ಜೆ ಸಹಾಯಕ-1, ಬೆರಳಚ್ಚುಗಾರರು-3, ವಾಹನ ಚಾಲಕರು-1, `ಡಿ~ ದರ್ಜೆ ನೌಕರರು-5 ಹಾಗೂ ಬಾಣಸಿಗರ 1 ಹುದ್ದೆ ಖಾಲಿ ಉಳಿದಿವೆ.ಜಂಟಿ ನಿರ್ದೇಶಕ-1, ಉಪ ಕೃಷಿ ನಿರ್ದೇಶಕ-1, ಆಡಳಿತ ಸಹಾಯಕ-1, ಅಧೀಕ್ಷಕರು-9, ಪ್ರಥಮ ದರ್ಜೆ ಸಹಾಯಕರು-15, ಶೀಘ್ರ ಲಿಪಿಗಾರರು-1, ಹಿರಿಯ ಬೆರಳಚ್ಚುಗಾರರು-1, ಅಕ್ಷರ ಜೋಡಣೆ ಗಾರರು-1, ಬೈಂಡರ್-1, ಕೃಷಿ ಉಪಕರಣ ಮೇಲ್ವಿಚಾರಕು-3, ಪ್ರಯೋಗಶಾಲಾ ಸಹಾಯ ಕರು-3 ಹಾಗೂ ಪ್ರಯೋಗಶಾಲಾ ಪರಿಚಾರಕ 1 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.ಬಹುತೇಕ ಹುದ್ದೆಗಳು ಖಾಲಿ ಇರುವುದರಿಂದ ಮೈಸೂರು, ನಂಜನಗೂಡು, ಕೆ.ಆರ್.ನಗರ, ಹುಣಸೂರು, ತಿ.ನರಸೀಪುರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ತಾಲ್ಲೂಕುಗಳ ರೈತರು ಅಗತ್ಯ ಮಾಹಿತಿ ಪಡೆಯಲು ಪರದಾಡುವಂತಾಗಿದೆ. ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹಾಗೂ ಕೃಷಿ ಸಹಾಯಕರ ಹುದ್ದೆಗಳು ಶೇ 50ಕ್ಕಿಂತಲೂ ಹೆಚ್ಚು ಖಾಲಿ ಇರುವುದರಿಂದ ರೈತರು ತೊಂದರೆ ಅನುಭವಿ ಸುವಂತಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.ಗೊಬ್ಬರ, ಬಿತ್ತನೆ ಬೀಜ ಲಭ್ಯ ಕಳೆದ ವರ್ಷ ಹತ್ತಿ ಬಿತ್ತನೆ ಬೀಜಕ್ಕಾಗಿ ಪರದಾಡಿದ್ದ ರೈತರ ಬವಣೆಯನ್ನು ತಪ್ಪಿಸಲು ಕೃಷಿ ಇಲಾಖೆ ಭರದ ಸಿದ್ಧತೆ ನಡೆಸಿದ್ದು ಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡುವತ್ತ ಚಿತ್ತ ಹರಿಸಿದೆ. ಅಲ್ಲದೆ, ಯೂರಿಯಾ ಸೇರಿದಂತೆ 17 ಸಾವಿರ ಟನ್ ರಸಗೊಬ್ಬರವನ್ನು ಸಂಗ್ರಹಿಸಿ ಇಟ್ಟುಕೊಂಡಿದೆ. ಈ ಬಾರಿ ಮುಂಗಾರು ಆರಂಭಕ್ಕೂ ಮುನ್ನವೇ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಲು ಇಲಾಖೆ ತೀರ್ಮಾನಿಸಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾ ಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಆರ್.ಕೃಷ್ಣಯ್ಯ, `ಮೈಸೂರು ಸೇರಿದಂತೆ ಜಿಲ್ಲೆಯ ಏಳು ತಾಲ್ಲೂಕುಗಳಲ್ಲಿ ಒಟ್ಟು 122 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ನೇಮಕಾತಿ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಜಿಲ್ಲೆಯ ರೈತರ ಬೇಡಿಕೆಯನ್ನು ಆಧರಿಸಿ ಬಿತ್ತನೆಬೀಜ ಹಾಗೂ ರಸಗೊಬ್ಬರವನ್ನು ಈ ಬಾರಿ ಮುಂಚಿತವಾಗಿಯೇ ಸಂಗ್ರಹಿಸಿ ಇಡಲಾಗಿದ್ದು, ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ~ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.