ಕೃಷಿ ಇಲಾಖೆ: 28 ಹುದ್ದೆ ಖಾಲಿ ರೈತರ ಪರದಾಟ

7

ಕೃಷಿ ಇಲಾಖೆ: 28 ಹುದ್ದೆ ಖಾಲಿ ರೈತರ ಪರದಾಟ

Published:
Updated:

ಅಫಜಲಪುರ: ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಒಟ್ಟು 41 ಹುದ್ದೆಗಳಲ್ಲಿ 28 ಹುದ್ದೆಗಳು ಖಾಲಿ ಇದ್ದು, ರೈತರು ಪರದಾಡುವಂತಾಗಿದೆ.

ಸಹಾಯಕ ಕೃಷಿ ಅಧಿಕಾರಿಗಳ 18 ಹುದ್ದೆಗಳಲ್ಲಿ 10 ಹುದ್ದೆಗಳು ಖಾಲಿ ಇವೆ, ಕೃಷಿ ಅಧಿಕಾರಿಗಳ 5 ಹುದ್ದೆಗಳಲ್ಲಿ 3 ಖಾಲಿ ಇವೆ. ಮತ್ತು ಸಿ ಮತ್ತು ಡಿ ಹುದ್ದೆಗಳು ಖಾಲಿ ಇವೆ.ಸಹಾಯಕ ಕೃಷಿ ನಿರ್ದೇಶಕ ಈಶ್ವರ ಬ್ಯಾಡಗಿ, ಸಭೆ ಸಮಾರಂಭಗಳಿಗೆ ಹೋದರೆ, ತಾಂತ್ರಿಕ ಸಲಹೆಗಾರರಾದ  ಕೃಷಿ ಅಧಿಕಾರಿ ಅರವಿಂದಕುಮಾರ ರಾಠೋಡ ಕಚೇರಿ ಕೆಲಸ ನೋಡಿಕೊಳ್ಳುತ್ತಾರೆ.’ಈಗ ತಾಲ್ಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿ ಕೆಲಸಗಳು ಭರದಿಂದ ಸಾಗಿವೆ. ರೈತರು ಬೆಳೆ, ಬೀಜ, ಕೀಟನಾಶಕಗಳ ಬಗ್ಗೆ ಮಾಹಿತಿ ಕೇಳಲು ಕಚೇರಿಗೆ ಬಂದರೆ ಅವರಿಗೆ ಸಲಹೆ ನೀಡುವವರೇ ಇಲ್ಲ’ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಅವರು ದೂರುತ್ತಾರೆ.’ಸಿಬ್ಬಂದಿ ಕೊರತೆಯಿಂದ ರೈತರಿಗೆ ತೊಂದರೆ ಆಗುತ್ತಿದೆ. ತಾಲ್ಲೂಕಿನಲ್ಲಿ ತೊಗರಿ ಸೂರ್ಯಕಾಂತಿ, ಹತ್ತಿಗೆ ಕೀಟಗಳ ಬಾಧೆ ಮತ್ತು ನೆಟೆ ರೋಗ, ಹಿಂಗಾರು ಬಿತ್ತನೆ ಆರಂಭವಾಗಿದೆ . ರೈತರು  ಮಾಹಿತಿಗಾಗಿ ಕೃಷಿ ಇಲಾಖೆಗೆ ಬಂದರೆ ಅಲ್ಲಿ ಮಾಹಿತಿ ಕೊಡುವವರಿಲ್ಲದೇ ಪರದಾಡುತ್ತಿದ್ದಾರೆ  ಸರ್ಕಾರ ತಕ್ಷಣವೇ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಭರ್ತಿಗೆ ಕ್ರಮ ಜರುಗಿಸಬೆೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry