ಶುಕ್ರವಾರ, ಜೂನ್ 18, 2021
24 °C
ಹೈಕೋರ್ಟ್‌ನಲ್ಲಿ ‘ಸಿವಿಕ್‌’ ದೂರು

ಕೃಷಿ ಕೂಲಿಕಾರ ಮಕ್ಕಳೇಕೆ ಬಾಲಕಾರ್ಮಿಕರಲ್ಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೈಗಾರಿಕಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಮಾತ್ರ ಬಾಲ ಕಾರ್ಮಿಕರು ಎಂದು ಕಾನೂ­ನಿನ ಅಡಿ ವ್ಯಾಖ್ಯಾನಿಸಲಾಗು­ತ್ತಿದೆ. ಆದರೆ ಕುರಿ ಮೇಯಿಸುವುದು ಸೇರಿ­ದಂತೆ ಕೃಷಿ ಕ್ಷೇತ್ರದಲ್ಲಿ ದುಡಿಯುತ್ತಿ­ರುವ ಮಕ್ಕಳನ್ನು ಕಾನೂನು ಬಾಲ­ಕಾರ್ಮಿ­ಕರು ಎನ್ನುವುದಿಲ್ಲ’ ಎಂದು ‘ಸಿವಿಕ್‌’ ಸಂಸ್ಥೆಯ ಮುಖ್ಯಸ್ಥೆ ಕಾತ್ಯಾ­ಯಿನಿ ಚಾಮರಾಜ್‌ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿದರು.ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಇಟಿ) ಕಾಯ್ದೆ ಜಾರಿಯಾದ ವರ್ಷಗಳ ನಂತರವೂ ರಾಜ್ಯದಲ್ಲಿ ದೊಡ್ಡ ಸಂಖ್ಯೆಯ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಮಾಧ್ಯಮಗ­ಳಲ್ಲಿ ಪ್ರಕಟವಾದ ವರದಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಭಾ­ಗೀಯ ಪೀಠ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.ಅರ್ಜಿಗೆ ಸಂಬಂಧಿಸಿದಂತೆ ‘ಸಿವಿಕ್‌’ ಸಂಸ್ಥೆ ಕೂಡ ಮಧ್ಯಾಂತರ ಅರ್ಜಿ ಸಲ್ಲಿಸಿದೆ. ‘ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಲ್ಲಿ ಶಾಲೆಯಿಂದ ಹೊರಗುಳಿದಿ­ರುವ ಮಕ್ಕಳ ಪ್ರಮಾಣ ಶೇಕಡ 3ರಷ್ಟು ಎಂದು ಮೊದಲು ಹೇಳಲಾಗುತ್ತಿತ್ತು. ಆದರೆ ಅದರ ಪ್ರಮಾಣ ಹೆಚ್ಚಿದೆ ಎಂಬುದು ಇತ್ತೀಚೆಗೆ ನಡೆಸಿದ ಸಮೀಕ್ಷೆ­ಯಿಂದ ಗೊತ್ತಾಗಿದೆ’ ಎಂದು ಅವರು ನ್ಯಾಯಪೀಠಕ್ಕೆ ವಿವರಣೆ ನೀಡಿದರು.‘ಬಾಲಕಾರ್ಮಿಕರನ್ನು ನೇಮಕ ಮಾಡಿ­­ಕೊಂಡ ಎಷ್ಟು ಜನರ ವಿರುದ್ಧ ಕ್ರಮ ಜರುಗಿಸಲಾಗಿದೆ? ಎಷ್ಟು ಮಂದಿ ಬಾಲ­ಕಾರ್ಮಿಕರನ್ನು ಮರಳಿ ಶಾಲೆಗೆ ಕರೆ­ತರ­ಲಾಗಿದೆ? ಇಂಥ ಮಕ್ಕಳಿಗೆ ವಿದ್ಯಾ­ರ್ಥಿವೇತನ ನೀಡಲು ಎಷ್ಟು ಹಣ ನಿಗದಿ ಮಾಡಲಾಗಿದೆ? ಈ ಕುರಿತು ನಮಗೆ ಮಾಹಿತಿ ನೀಡಿ’ ಎಂದು ಪೀಠ ಸರ್ಕಾ­ರಕ್ಕೆ ಮೌಖಿಕವಾಗಿ ಸೂಚನೆ ನೀಡಿತು.‘ಮಕ್ಕಳಿಗೆ ರುಚಿಯಾದ ಬಿಸಿಯೂಟ ನೀಡಿ. ಇದರಿಂದ ಅಪೌಷ್ಟಿಕತೆ ತುಸು ದೂರವಾಗುತ್ತದೆ. ಮಕ್ಕಳ ಹಾಜರಾತಿ­ಯೂ ಹೆಚ್ಚುತ್ತದೆ’ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ ಪೀಠ, ವಿಚಾರಣೆ­ಯನ್ನು ಇದೇ 17ಕ್ಕೆ ಮುಂದೂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.