ಮಂಗಳವಾರ, ಮೇ 11, 2021
25 °C

ಕೃಷಿ, ಕೈಗಾರಿಕೆ ನಿರ್ಲಕ್ಷ್ಯ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರೀಕೆರೆ: ರಾಜ್ಯದ ಒಟ್ಟಾರೆ ಆರ್ಥಿಕ ಬೆಳವಣಿಗೆ ಕುಂಠಿತ ಗೊಂಡಿರುವುದಕ್ಕೆ ಕೈಗಾರಿಕೆ ಮತ್ತು ಕೃಷಿಕ್ಷೇತ್ರ ಕಡೆಗಣಿಸಿರು ವುದು ಮುಖ್ಯ ಕಾರಣ ಎಂದು  ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್) ಪ್ರಾಧ್ಯಾಪಕ ಪ್ರೊ. ಅಬ್ದುಲ್ ಅಜೀಜ್ ಹೇಳಿದರು.ಪಟ್ಟಣದ ಎಸ್‌ಜೆಎಂ ಕಾಲೇಜಿನಲ್ಲಿ ಶನಿವಾರ ಕುವೆಂಪು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರ ಸಂಘ ಏರ್ಪಡಿಸಿದ್ದ  ರಾಜ್ಯ ಬಜೆಟ್ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.ಕೃಷಿಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ ಮಂಡಿಸುವುದನ್ನು ವಿರೋಧಿಸಿದ ಅವರು, ಬಜೆಟ್‌ನ ಗುರಿ ಒಂದು ಲಕ್ಷ ಕೋಟಿ ಮೀರಬೇಕು ಎಂಬ ಉದ್ದೇಶ ದಿಂದ ಅವಸರವಾಗಿ ಮಂಡಿಸಲಾಗಿದೆ ಎಂದು ಆಪಾದಿಸಿದರು.ರೈತರಿಗೆ ಸಕಾಲದಲ್ಲಿ ಗೊಬ್ಬರ ಮತ್ತು ಬಿತ್ತನೆ ಬೀಜ ನೀಡುವಿಕೆ, ತೊಗರಿ, ಜೋಳ ಮತ್ತು ತೆಂಗು ಅಭಿವೃದ್ಧಿ ಪಡಿಸಲು ಕ್ರಮವಾಗಿ ಗುಲ್ಬರ್ಗ, ರಾಣಿಬೆನ್ನೂರು ಮತ್ತು ತಿಪಟೂರಿನಲ್ಲಿ ಟೆಕ್ನಾಲಜಿ ಪಾರ್ಕ್ ನಿರ್ಮಾಣ ಮಾಡುವ ಕ್ರಮವನ್ನು ಸ್ವಾಗತಿಸಿದ ಅವರು, ಸರ್ಕಾರ ಕೃಷಿ ಕ್ಷೇತ್ರದ  ಆದಾಯ ನಿರೀಕ್ಷಿಸದೆ ಕೇವಲ  ವ್ಯಯ  ಮಾಡುತ್ತಿರುವ ಕ್ರಮವನ್ನು ಖಂಡಿಸಿದರು.ಬಜೆಟ್ ಪೂರ್ವ ಆರ್ಥಶಾಸ್ತ್ರ ತಜ್ಞರ ಜತೆ ಚರ್ಚಿಸದೆ, ಅವರ ಸಲಹೆ ಸಹಕಾರ ತೆಗೆದುಕೊಳ್ಳದೆ ಮಂಡಿಸಿದ ಬಜೆಟ್‌ನಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಮಠ, ಮಂದಿರ ಮತ್ತು ಗುರುಪೀಠಗಳಿಗೆ ಹಣ ವನ್ನು ಮೀಸಲಿಡಲಾಗಿದೆ ಎಂದರು.ಕುವೆಂಪು ವಿಶ್ವವಿದ್ಯಾಲಯದ (ಆಡಳಿತ) ಕುಲಸಚಿವ  ಪ್ರೊ. ಟಿ.ಆರ್.ಮಂಜುನಾಥ್ ಮಾತನಾಡಿ, ಸಾಕಷ್ಟು ಸಂಪನ್ಮೂಲವನ್ನು ರಾಜ್ಯ ಹೊಂದಿ ್ದದರೂ, ದಕ್ಷಿಣ ಭಾರತದಲ್ಲಿ ಮಧ್ಯಮ ಕ್ರಮಾಂಕದ ರಾಜ್ಯ ಎಂದು ಕರ್ನಾಟಕ ಬಿಂಬಿತವಾಗಿರುವುದು ದುರದೃಷ್ಟ. ಶೇ 3ರಷ್ಟು ಹೆಚ್ಚಳವಾಗಿರುವ ವಿತ್ತೀಯ ಕೊರತೆಯನ್ನು ನೀಗಿಸಲು ಮತ್ತಷ್ಟು ವೇಗವಾಗಿ ಅಭಿವೃದ್ಧಿಯತ್ತ ಸಾಗಬೇಕಿದೆ ಎಂದರು.ಕಾಲೇಜಿನ ಪ್ರಾಚಾರ್ಯ ಪ್ರೊ. ಟಿ.ಎಚ್. ಕೃಷ್ಣಮೂರ್ತಿ, ಕುವೆಂಪು ವಿವಿ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ವೆಂಕಟೇಶ್, ಕಾರ್ಯ ದರ್ಶಿ ಮಂಜುನಾಥ್, ಪ್ರಗತಿಪರ ಕೃಷಿಕ ಆರ್.ದೇವಾನಂದ್, ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಕುಮಾರಪ್ಪ ಮತ್ತು ಪ್ರೊ. ಹೆಗಡಾಳ ಹಾಗೂ ವಿವಿಧೆಡೆ ಯಿಂದ ಆಗಮಿಸಿದ್ದ ಅರ್ಥಶಾಸ್ತ್ರ ಉಪನ್ಯಾಸಕರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.