ಕೃಷಿ ಜತೆಗೆ ಹೈನುಗಾರಿಕೆ ಕೈಗೊಳ್ಳಲು ಸಲಹೆ

7

ಕೃಷಿ ಜತೆಗೆ ಹೈನುಗಾರಿಕೆ ಕೈಗೊಳ್ಳಲು ಸಲಹೆ

Published:
Updated:

ಹಾವೇರಿ:  `ಗ್ರಾಮೀಣ ರೈತ ಮಹಿಳೆಯರು ಕೃಷಿ ಚಟುವಟಿಕೆ ಜತೆಗೆ ಹೈನುಗಾರಿಕೆಯನ್ನು ಉಪಕಸಬನ್ನಾಗಿ ಮಾಡಿಕೊಂಡು ಕುಟುಂಬದ ಆರ್ಥಿಕ ಅಭಿವೃದ್ಧಿಗೆ ನೆರವಾಗಬೇಕು' ಎಂದು ಧಾರವಾಡ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ವಿರೂಪಾಕ್ಷ ಬಿಜಾಪುರ ಸಲಹೆ ಮಾಡಿದರು.ಜಿಲ್ಲೆಯ ಸವಣೂರು ತಾಲ್ಲೂಕಿನ ಮೆಳ್ಳಗಟ್ಟಿ ಗ್ರಾಮದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಹೈನುಗಾರಿಕೆ ಲಾಭದಾಯಕ ಉದ್ಯೋಗ. ಆದ್ದರಿಂದ ರೈತರು, ಕೃಷಿ ಕಾರ್ಮಿಕರು ವ್ಯವಸಾಯದ ಜತೆಗೆ ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡಬೇಕು ಎಂದರು.ರೈತರು ಸಹಕಾರಿ ಸಂಘ ಸಂಸ್ಥೆಗಳಿಂದ ಹಾಗೂ ಬ್ಯಾಂಕ್‌ಗಳಿಂದ ಆರ್ಥಿಕ ಸಹಾಯಧನ ಪಡೆದು ಹಸು, ಎಮ್ಮೆಗಳನ್ನು ಕೊಂಡುಕೊಂಡು ಹೈನುಗಾರಿಕೆಯ ಮೂಲಕ ಹಾಲು ಉತ್ಪಾದನೆಗೆ ಒತ್ತು ನೀಡಬೇಕು ಎಂದ ಅವರು, ನೂತನ ಸಂಘಕ್ಕೆ ಕೆಎಂಎಫ್ ಹಾಗೂ ಸರ್ಕಾರ ವತಿಯಿಂದ ವಿವಿಧ ಸೌಲಭ್ಯಗಳ ಒದಗಿಸಿಕೊಡುವ ಬರವಸೆ ನೀಡಿದರು.ಉತ್ಪಾದಕರ ಸಂಘದ ಗ್ರಾಮೀಣ ಘಟಕದ ಅಧ್ಯಕ್ಷೆ ಪಾರ್ವತಿ ಮರೆಮ್ಮನವರ ಮಾತನಾಡಿ, ಗ್ರಾಮದಲ್ಲಿ ಹಾಲು ಉದ್ಪಾದಕರ ಹೊಸ ಸಂಘವನ್ನು ಆರಂಭಿಸಲಾಗಿದೆ. ಕೆಎಂಎಫ್ ನೀಡುವ ಸಲಹೆ, ಸೂಚನೆಯಂತೆ ನಡೆದು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಇದೇ ಸಂದರ್ಭದ್ಲಲಿ ಸಂಘದ ವತಿಯಿಂದ ಧಾರವಾಡ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ವಿರೂಪಾಕ್ಷ ಬಿಸಜಾಪುರ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಹಾಲು ವಿಸ್ತರಣಾಧಿಕಾರಿ ಶಂಭಣ್ಣ, ಸಂಘದ ಸದಸ್ಯರಾದ ಗೀತಾ ಬಸುನಾಯ್ಕರ, ಲಕ್ಷಮ್ಮ ಹಾಲಗಿ, ಗಿರಿಜವ್ವ ಬಸುನಾಯ್ಕರ, ಶೋಭಾ ಹವಳ್ಳೆಮ್ಮನವರ, ಈರವ್ವ ತಿರಕನಗೌಡ್ರ, ಧ್ಯಾಮವ್ವ ಪಾಟೀಲ . ಬಸವರಾಜ ಬಸುನಾಯ್ಕರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry