ಕೃಷಿ, ಜಾನುವಾರು ತೋಟಗಾರಿಕೆ ಮೇಳ 29ರಿಂದ

7

ಕೃಷಿ, ಜಾನುವಾರು ತೋಟಗಾರಿಕೆ ಮೇಳ 29ರಿಂದ

Published:
Updated:

ಬೀದರ್: ಕೃಷಿ ಕ್ಷೇತ್ರದ ಈಚಿನ ಪ್ರಗತಿ, ಬೇಸಾಯ ಕಾರ್ಯದಲ್ಲಿ ಅಳವಡಿಸ ಬಹುದಾದ ಹೊಸ ಕಾರ್ಯತಂತ್ರಗಳು, ಬಿಡುಗಡೆ ಆದ ನೂತನ ತಳಿಗಳು, ಅಧಿಕ ಇಳುವರಿ ಪಡೆಯಲು ಅನುಸರಿಸ ಬೇಕಾದ ಕ್ರಮ, ನೀರಿನ ಬಳಕೆ ಕುರಿತು ಸಮಗ್ರ ಮಾಹಿತಿ ಒದಗಿಸುವ 3 ದಿನಗಳ ಕೃಷಿ ಮೇಳ ಇದೇ 29ರಂದು ಜನವಾಡ ಬಳಿಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ  ಆರಂಭವಾಗಲಿದೆ.ರಾಯಚೂರಿನ ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯ, ಬೀದರ್‌ನ ಪಶುವೈದ್ಯಕೀಯ ವಿಶ್ವವಿದ್ಯಾಲಯ ಜಂಟಿಯಾಗಿ ಈ ಮೇಳ ಆಯೋಜಿಸಿಸುತ್ತಿದ್ದು, ವಿವಿಧ ಸಂಸ್ಥೆಗಳು, ಇಲಾಖೆಗಳು ಕೃಷಿ ಸಂಬಂಧಿತ ಕಾರ್ಯಕ್ರಮಗಳನ್ನು ಪರಿಚಯಿಸಲಿವೆ.ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ರವಿ ದೇಶಮುಖ ಅವರು, ಮೂರು ದಿನ ಆಸಕ್ತರು ಆಗಮಿಸಲು ಅನುವಾಗುವಂತೆ ಹೆಚ್ಚಿನ ಬಸ್‌ಗಳನ್ನು ಬೀದರ್‌ನಿಂದನಿಯೋಜಿಸಲು ಕೋರಲಾಗಿದೆ.

ಜೊತೆಗೆ, ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.29ರಂದು ಕೃಷಿ, ತೋಟಗಾರಿಕೆ, ಜಾನುವಾರುಮೇಳವನ್ನು ಸಚಿವ ರೇವುನಾಯಕ ಬೆಳಮಗಿ ಉದ್ಘಾಟಿಸಲಿದ್ದು, ಅದೇ ದಿನ ಬಗದಲ್‌ನ ಜನಾಬ ಅಲ್ ಹಾಜ ಶಾಹ ಖಲೀಫಾ ಮಹಮ್ಮದ್ ಇಂದ್ರೀಸ್ ಅಹ್ಮದ್‌ಸಾಬ್ ಖಾದ್ರಿ ಅವರಿಗೆ ಕೃಷಿ ಋಷಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.ಖುಷ್ಕಿ ಬೇಸಾಯದ ಉತ್ಪಾದನಾ ತಾಂತ್ರಿಕತೆ, ಮಳೆ ನೀರುಕೊಯ್ಲು, ಸಾವಯವ ಕೃಷಿ ಪದ್ಧತಿ, ಸಮಗ್ರ ಕೃಷಿ ಪದ್ಧತಿ, ಸುಧಾರಿತ ತಳೀ ಬೀಜ, ನವೀನ ಕೃಷಿ ತಂತ್ರಜ್ಞಾನ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ, ಸಮಗ್ರ ಕೀಟ, ರೋಗ ನಿರ್ವಹಣಾ ಮಾಹಿತಿ, ಸುಧಾರಿ ಪಶು, ಮೀನುಗಾರಿಕೆ, ಮೇವಿನ ಬೆಳೆಗಳು ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ ವಸ್ತು ಪ್ರದರ್ಶನ ಇರುತ್ತದೆ ಎಂದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿ.ಟಿ.ಪುಥ್ರಾ, ವಿಶ್ವವಿದ್ಯಾಲಯದ ಅಧಿಕಾರಿ ಪ್ರಭುದೇವ ಅವರೂ ಸುದ್ದಿಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry