ಕೃಷಿ ತಜ್ಞರ ಮಾರ್ಗದರ್ಶನ ಪಡೆಯಲು ಸಲಹೆ

7

ಕೃಷಿ ತಜ್ಞರ ಮಾರ್ಗದರ್ಶನ ಪಡೆಯಲು ಸಲಹೆ

Published:
Updated:

ಅರಸೀಕೆರೆ: ಕೃಷಿ ತಜ್ಞರ ಸಲಹೆ, ಮಾರ್ಗದರ್ಶನ ಪಡೆದು ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಂಡರೆ ಉತ್ತ ಮ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ರಾಜಣ್ಣ ಸಲಹೆ ನೀಡಿದರು.ಕೃಷಿ ಇಲಾಖೆ ವತಿಯಿಂದ ಆತ್ಮ ಯೋಜನೆಯಡಿ ಪಟ್ಟಣದ ಕೃಷಿ ಇಲಾಖೆಯ ಸಭಾಂಗಣದಲ್ಲಿ ಈಚೆಗೆ ಆಯೋಜಿಸಿದ್ದ ಕಿಸಾನ್‌ಗೋಷ್ಠಿ ಮತ್ತು ರೈತ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭೂಮಿಯ ಫಲವತ್ತತೆ ರಕ್ಷಣೆ, ಸಾವಯವ ಗೊಬ್ಬರ, ಉತ್ತಮ ತಳಿಯ ಬಿತ್ತನೆ ಬೀಜ, ಬೇಸಾಯ ವಿಧಾನ, ಬೆಳೆಗಳಿಗೆ ರೋಗಬಾಧೆ ಇತ್ಯಾದಿ ಕುರಿತು ಕೃಷಿ ತಜ್ಞರಿಂದ ಮಾಹಿತಿ ಪಡೆದು ಒಕ್ಕಲುತನ ಕೈಗೊಂಡರೆ ಉತ್ತಮ ಫಸಲು ಪಡೆಯಬಹುದು ಎಂದು ತಿಳಿಸಿದರು.  ಕೃಷಿ ಸಂಶೋಧನಾ ಕೇಂದ್ರದ ತಜ್ಞ ಡಾ.ಬೋರಯ್ಯ, ಡಾ.ಪ್ರಶಾಂತ್, ಪಶು ವೈದ್ಯಾಧಿಕಾರಿ ಡಾ.ಮಂಜು ನಾಥ್ ಮಾತನಾಡಿದರು.ಆತ್ಮ ಯೋಜನೆಯ ತಾಂತ್ರಿಕ ವ್ಯವ ಸ್ಥಾಪಕ ಗೊಮಟೇಶ್ ನಾಯಕ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry