ಗುರುವಾರ , ನವೆಂಬರ್ 21, 2019
24 °C

ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನ

Published:
Updated:

ಗುಲ್ಬರ್ಗ: ಕೃಷಿ ಪಂಡಿತ ಪ್ರಶಸ್ತಿಗಾಗಿ ಕೃಷಿ ವಲಯದಲ್ಲಿ ಗಮನಾರ್ಹ/ಭಿನ್ನವಾದ ಸಾಧನೆಗೈದ, ಮಣ್ಣು, ನೀರು ಮತ್ತು ನೈಸರ್ಗಿಕ ಸಂಪನ್ಮೂಲ ಸದ್ಭಳಕೆಯಿಂದ ಸಾಗುವಳಿಯಲ್ಲಿ ಅಧಿಕ ಗುಣಮಟ್ಟದ ಉತ್ಪಾದನೆ ಬರುವಂತೆ ಬದಲಾವಣೆ ತಂದಿರುವ, ರೈತರ ಆರ್ಥಿಕ ಮತ್ತ ಸುಧಾರಣೆಗೆ ಅನುವಾಗುವಂತೆ ಸೃಜನಾತ್ಮಕ ಕಾರ್ಯದಿಂದ ರೈತ ಸಮುದಾಯದ ಶ್ರೇಯೋಭಿವೃದ್ಧಿಗೆ ಹಾಗೂ ಮಾರ್ಗದರ್ಶಕರಾಗಿ ಶ್ರಮಿಸುತ್ತಿರುವ ರಾಜ್ಯದ ವ್ಯಕ್ತಿಗಳಿಂದ 2012-13ನೇ ಸಾಲಿಗೆ ನಾಮ ನಿರ್ದೇಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಕೇಂದ್ರ/ರಾಜ್ಯ ಸರ್ಕಾರ ಅಥವಾ ಅಂಗ ಸಂಸ್ಥೆಗಳಿಂದ ಈ ಸಾಧನೆಗೆ ಈಗಾಗಲೇ ಪುರಸ್ಕೃತರಾದವರು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮತ್ತು ಸರ್ಕಾರದ ಅಂಗ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ/ ನಿವೃತ್ತರಾದವರು ಈ ಪ್ರಶಸ್ತಿಗೆ ಅರ್ಹರಲ.್ಲ ಪ್ರಶಸ್ತಿಯ ವಿವರ ಮತ್ತು ಅರ್ಜಿ ನಮೂನೆಗಳನ್ನು ಸಂಬಂಧಿತ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು/ ತಾಲೂಕು ಸಹಾಯಕ ಕೃಷಿ ನಿರ್ದೇಶಕರು/ ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದು.

ನಾಮ ನಿರ್ದೇಶನ ಪತ್ರಗಳನ್ನು ಕಡ್ಡಾಯವಾಗಿ ಆಯಾ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು/ ಕೃಷಿ ವಿಶ್ವವಿದ್ಯಾನಿಲಯಗಳ ತಜ್ಞರ ಶಿಫಾರಸ್ಸಿನೊಂದಿಗೆ ಜಂಟಿ ಕೃಷಿ ನಿರ್ದೇಶಕರು (ವಿಸ್ತರಣೆ ಮತ್ತು ತರಬೇತಿ) ಕೃಷಿ ಇಲಾಖೆ, ಶೇಷಾದ್ರಿ ರಸ್ತೆ, ಬೆಂಗಳೂರು-560 001 ಇವರಿಗೆ ಮೇ 31ರೊಳಗೆ ತಲುಪುವಂತೆ ಕಳುಹಿಸಬೇಕು.ಅರ್ಜಿ ನಮೂನೆಯನ್ನು ವೆಬ್‌ಸೈಟ್ನhttp://raitamitra.kar.nic.inಲ್ಲಿ ಕ್ಲಿಕ್ಕಿಸಿ ಟೆಂಡರ್ ಪ್ರಕಟಣೆ ಮೆನುವಿನ ಸಬ್‌ಮೆನುವಿನಲ್ಲಿ ಕೃಷಿ ಪಂಡಿತ ಪ್ರಶಸ್ತಿ ಅರ್ಜಿಗಳನ್ನು ಡೌನಲೋಡ್ ಮಾಡಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಲು ಕೋರಲಾಗಿದೆ.

ಪ್ರತಿಕ್ರಿಯಿಸಿ (+)