ಗುರುವಾರ , ಜೂನ್ 17, 2021
23 °C

ಕೃಷಿ ಬಜೆಟ್: 19,660 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಈ ವರ್ಷ ಕೂಡ ಸಾಮಾನ್ಯ ಬಜೆಟ್ ಜತೆಗೆ ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡಿಸಲಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ 1803 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಅನುದಾನ ಒದಗಿಸಲಾಗಿದೆ.`2011-12ನೇ ಸಾಲಿನಲ್ಲಿ ರೂ 17,857 ಕೋಟಿ ತೆಗೆದಿರಿಸಲಾಗಿತ್ತು. ಈ ವರ್ಷ ರೂ 19,660 ಕೋಟಿ ಮೀಸಲಿಟ್ಟಿದ್ದು, ಇತ್ತೀಚಿನ ವರ್ಷಗಳಲ್ಲಿಯೇ ಅತಿ ಹೆಚ್ಚಿನ ಅನುದಾನ ಇದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಹೇಳಿದರು.ಕೃಷಿ, ತೋಟಗಾರಿಕೆ, ಕೃಷಿ ಮಾರುಕಟ್ಟೆ, ಪಶುಸಂಗೋಪನೆ ಮತ್ತು ಜಲಸಂಪನ್ಮೂಲ ಇಲಾಖೆಗಳ ವ್ಯಾಪ್ತಿಯ ವಿವಿಧ ಯೋಜನೆಗಳಿಗೆ ಈ ಹಣ ತೆಗೆದಿರಿಸಲಾಗಿದೆ.ಒಟ್ಟು 39 ಪುಟಗಳ ಕೃಷಿ ಬಜೆಟ್ ಅನ್ನು ಮುಖ್ಯಮಂತ್ರಿಯವರು ಒಂದು ಗಂಟೆ ಕಾಲ ಓದಿದರು. ಅದರ ನಂತರವೇ ಅವರು ಸಾಮಾನ್ಯ ಬಜೆಟ್ ಮಂಡಿಸಿದ್ದು. 
ಕೃಷಿ ಇಲಾಖೆಗೆ ರೂ 2921 ಕೋಟಿ ಅನುದಾನ ಒದಗಿಸಲಾಗಿದೆ. ಸುವರ್ಣ ಭೂಮಿ ಯೋಜನೆಯನ್ನು ಮರುವಿನ್ಯಾಸಗೊಳಿಸಿ ಜಾರಿ ಮಾಡಲು ನಿರ್ಧರಿಸಲಾಗಿದೆ. `ಭೂಚೇತನ~ ಯೋಜನೆ ಎಲ್ಲ ಜಿಲ್ಲೆಗಳ ಒಟ್ಟು 50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ವಿಸ್ತರಣೆ. 45 ಲಕ್ಷ ರೈತ ಫಲಾನುಭವಿಗಳನ್ನು ಒಳಗೊಂಡ ಈ ಯೋಜನೆಗೆ ರೂ 110 ಕೋಟಿ ಮೀಸಲು.`ಆಧಾರ್~ ಯೋಜನೆಯನ್ನು `ಭೂಮಿ~ ಯೋಜನೆಯೊಂದಿಗೆ ಒಗ್ಗೂಡಿಸಿ ರೈತರ ಸಮಗ್ರ ಮಾಹಿತಿಗಳನ್ನೊಳಗೊಂಡ (ಭೂ ಹಿಡುವಳಿ, ವರ್ಗ, ವಿಳಾಸ ಇತ್ಯಾದಿ) ಮಾಹಿತಿ ಕೋಶವನ್ನು ಸೃಷ್ಟಿಸುವುದು. ಇದರ ಆಧಾರದ ಮೇಲೆ ಯಾವ ವರ್ಗದ ರೈತರಿಗೆ ಎಂತಹ ಸವಲತ್ತುಗಳನ್ನು ಒದಗಿಸಲಾಗಿದೆ ಹಾಗೂ ಯಾವ ವಲಯಕ್ಕೆ ಹೆಚ್ಚು ಸವಲತ್ತುಗಳನ್ನು ನೀಡಲಾಗಿದೆ ಎಂಬುದನ್ನು ವಿಶ್ಲೇಷಿಸಬಹುದು.ಕೃಷಿ ಸಂಬಂಧಿತ ನೀತಿ ರೂಪಿಸುವಲ್ಲಿ ಈ ಮಾಹಿತಿಯು ಪೂರಕವಾಗಿರುತ್ತದೆ. ಈ ಕಾರ್ಯವನ್ನು ಪ್ರಾಯೋಗಿಕವಾಗಿ ಆಧಾರ್ ಯೋಜನೆ ಪೂರ್ಣಗೊಂಡ ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಜಾರಿ ಮಾಡಲಾಗುವುದು. ಇದಕ್ಕೆ ರೂ 10 ಕೋಟಿ ಒದಗಿಸಲಾಗಿದೆ.ತೋಟಗಾರಿಕೆ

* ಒಟ್ಟು ರೂ 867 ಕೋಟಿ ಮೀಸಲು* ತೋಟಗಾರಿಕೆ ಉತ್ಪನ್ನಗಳಿಗೆ ಅಗತ್ಯ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಕ್ರಮ. ಈ ಸಲುವಾಗಿ ರೈತರ ಗುಂಪುಗಳು/ಸಂಘಗಳನ್ನು ರಚಿಸಲಾಗುವುದು. ಪರೀಕ್ಷಾರ್ಥವಾಗಿ 4 ಜಿಲ್ಲೆಗಳಲ್ಲಿ ಜಾರಿ.* ಹಾಪ್‌ಕಾಮ್ಸ ಮತ್ತು ಕರ್ನಾಟಕ ತೋಟಗಾರಿಕೆ ಮಹಾಮಂಡಲವನ್ನು ಪುನರ್‌ರಚಿಸಿ, ಅವುಗಳನ್ನು ಹಂತಹಂತವಾಗಿ ಬಲಪಡಿಸಲಾಗುವುದು.* ಕರ್ನಾಟಕ ರಾಜ್ಯ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಜಾರಿ. 28 ಸಾವಿರ ಹೆಕ್ಟೇರ್ ಪ್ರದೇಶವನ್ನು ಮೌಲ್ಯವರ್ಧಿತ ತೋಟಗಾರಿಕೆ ಬೆಳೆಗಳ ವ್ಯಾಪ್ತಿಗೆ ಸೇರಿಸುವುದು. ಇದರಿಂದ 50 ಸಾವಿರ ರೈತರಿಗೆ ಅನುಕೂಲ. ಇದಕ್ಕೆ ರೂ 305 ಕೋಟಿ ಒದಗಿಸಲಾಗಿದೆ.* ಇಸ್ರೇಲ್ ತಂತ್ರಜ್ಞಾನದ ಸಹಯೋಗದೊಂದಿಗೆ ಬೆಳಗಾವಿ ಜಿಲ್ಲೆಯಲ್ಲಿ ತರಕಾರಿ ಬೆಳೆಗಳ ಅಭಿವೃದ್ಧಿಗಾಗಿ, ಬಾಗಲಕೋಟೆಯಲ್ಲಿ ದಾಳಿಂಬೆ ಹಾಗೂ ಕೋಲಾರ ಜಿಲ್ಲೆಯಲ್ಲಿ ಮಾವು ಅಭಿವೃದ್ಧಿಗಾಗಿ ಉನ್ನತ ತಂತ್ರಜ್ಞಾನ ಪರಿಣಿತ ಕೇಂದ್ರಗಳ ಸ್ಥಾಪನೆ* ಹನಿ ನೀರಾವರಿಗೆ ನೀಡುತ್ತಿದ್ದ ಶೇ 75ರಷ್ಟು ಸಹಾಯಧನವನ್ನು ಶೇ 80ಕ್ಕೆ ಹೆಚ್ಚಳ* ಅಡಿಕೆಗೆ ಹಳದಿ ಎಲೆ ರೋಗ ಇದ್ದು, ಈ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಈ ವರ್ಷವೂ ಸಹಾಯಧನ

ಪಶುಸಂಗೋಪನೆ* ಒಟ್ಟು ರೂ 989 ಕೋಟಿ ಅನುದಾನ ಒದಗಿಸಲಾಗಿದೆ.* 300 ಕೋಟಿ ಅಂದಾಜು ಮೊತ್ತದ ಹಾಲು ಸಹಾಯಧನ ಯೋಜನೆ ಮುಂದುವರಿಕೆ* ರಾಜ್ಯದ 4,110 ಪಶುವೈದ್ಯಕೀಯ ಸಂಸ್ಥೆಗಳು ಹಾಗೂ ರಾಜ್ಯ ಮಟ್ಟದ ಕಚೇರಿಗಳ ನಡುವೆ ನೇರ ಸಂಪರ್ಕ ಜಾಲ. ಇದಕ್ಕೆ ರೂ 20 ಕೋಟಿ.* ತುಮಕೂರು ಜಿಲ್ಲೆಯ ಕೋನೇಹಳ್ಳಿಯಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ.* ಗೋ ಸಂರಕ್ಷಣೆ ಯೋಜನೆ ಅಡಿಯಲ್ಲಿ ಸರ್ಕಾರೇತರ ಸಂಸ್ಥೆಗಳಿಗೆ ಸಹಾಯಧನ. 10 ಎಕರೆ ಭೂಮಿ; 50 ಸ್ಥಳೀಯ ಗೋವುಗಳನ್ನು ಸಾಕಾಣಿಕೆ ಮಾಡುತ್ತಿದ್ದಲ್ಲಿ ಅಂತಹ ಸಂಸ್ಥೆಗಳಿಗೆ ಸಹಾಯಧನ.* ಪುತ್ತೂರು, ಅಥಣಿ ಮತ್ತು ಗದಗದಲ್ಲಿ ಹೊಸ ಪಶುವೈದ್ಯಕೀಯ ಕಾಲೇಜು ಸ್ಥಾಪನೆ. ಇದಕ್ಕೆ ರೂ 60 ಕೋಟಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.