ಕೃಷಿ ಭೂಮಿ ದತ್ತಿಗೆ ವಿರೋಧ

7

ಕೃಷಿ ಭೂಮಿ ದತ್ತಿಗೆ ವಿರೋಧ

Published:
Updated:

ಬಂಗಾರಪೇಟೆ: ವಾಜಪೇಯಿ ಕೃಷಿ ವಿಕಾಸ ಯೋಜನೆಯಡಿ ದಲಿತರ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ದಲಿತರ ಭೂಮಿಯನ್ನು ದತ್ತು ಪಡೆಯುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಅಭಿವೃದ್ಧಿ ಸಮಿತಿ ಸದಸ್ಯರು ಮಂಗಳವಾರ ಶಿರಸ್ತೇದಾರ್ ಮುನಿನಾರಾಯಣಪ್ಪ ಅವರಿಗೆ ಮನವಿ ಸಲ್ಲಿಸಿದರು.ರಾಜ್ಯದಲ್ಲಿ

ಈವರೆವಿಗೂ ಆಡಳಿತಕ್ಕೆ ಬಂದ ಪ್ರತಿಯೊಂದು ಆಡಳಿತ ಸರ್ಕಾರವೂ ದಲಿತರ ಅಭ್ಯುದಯವನ್ನು ಕೋರಿ ಕೃಷಿ ಭೂಮಿ, ವಸತಿ ನೀಡಿತ್ತು.ಕೇಂದ್ರ ಸರ್ಕಾರವು ಉಳುವವನಿಗೆ ಭೂಮಿ ಎಂಬ ಕ್ರಾಂತಿಕಾರಕ ಕಾಯಿದೆ ಜಾರಿಗೆ ತಂದು ಜೀತದಾಳುಗಳ ಪುನಃಶ್ಚೇತನಕ್ಕೆ ಪ್ರಯತ್ನಪಟ್ಟಿತು. ಆದರೆ ರಾಜ್ಯ ಸರ್ಕಾರ ಈಚೆಗೆ ದಲಿತರ ಭೂಮಿಯನ್ನು ತಾನು ದತ್ತು ಪಡೆಯುವ ಯೋಜನೆಯೊಂದನ್ನು ಪ್ರಕಟಿಸಿದೆ. ಇದರಿಂದ ಬಹಳಷ್ಟು ದಲಿತ ಕೃಷಿಕರಿಗೆ ಆತಂಕ ಶುರುವಾಗಿದೆ ಎಂದು ವಿವರಿಸಿದರು.ಸಮಿತಿ ಸದಸ್ಯರಾದ ಆಜಂ ಷರೀಫ್, ಕುಪ್ಪನಹಳ್ಳಿ ಆನಂದ್, ಎಂ.ಎನ್.ಭಾರದ್ವಾಜ್, ಅಕ್ಬರ್, ನಿಸಾರ್, ಸರ್ದಾರ್ ಖುರೇಷಿ, ಅಪ್ಸರ್, ಗೋಪಿ, ನಾಗರಾಜ್, ಶ್ರೀನಿವಾಸ್, ಮಂಜುಳಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry