ಕೃಷಿ ವಿವಿಯ ಶಿಕ್ಷಕೇತರ ನೌಕರರ ಸಂಘದಿಂದ ಮನವಿ

7

ಕೃಷಿ ವಿವಿಯ ಶಿಕ್ಷಕೇತರ ನೌಕರರ ಸಂಘದಿಂದ ಮನವಿ

Published:
Updated:

ರಾಯಚೂರು:  ಎಲ್ಲ ವಿಶ್ವವಿದ್ಯಾಲಯಗಳ ಶಿಕ್ಷಕ ನೌಕರರಿಗೆ ಯುಜಿಸಿ ವೇತನ ನೀಡಿರುವಂತೆ  ಶಿಕ್ಷಕೇತರ ನೌಕರರಿಗೆ ಯುಜಿಸಿ ವೇತನ ಮಂಜೂರು ಮಾಡಬೇಕು ಎಂದು ಕೃಷಿ ವಿಶ್ವವಿದ್ಯಾಲಯ ಶಿಕ್ಷಕೇತರ ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಶುಕ್ರವಾರ ಮಧ್ಯಾಹ್ನ ಕೃಷಿ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಪ್ರತಿಭಟನಾ ರ‌್ಯಾಲಿ ನಡೆಸಿದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಸಿಂಡಿಕೇಟ್ ಮತ್ತು ಶೈಕ್ಷಣಿಕ ಪರಿಷತ್ತುಗಳಲ್ಲಿ ಶಿಕ್ಷಕೇತರ ನೌಕರರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು, ನೇರ ನೇಮಕಾತಿ ಹುದ್ದೆಗಳನ್ನು ಅರ್ಹ ನೌಕರರಿಗೆ ಮುಂಬಡ್ತಿ ಮೂಲಕ ಭರ್ತಿ ಮಾಡಲು ಅನುಮತಿ ನೀಡಬೇಕು, ನೂತನ ಹುದ್ದೆಗಳನ್ನು ಸೃಷ್ಟಿಸಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಶಿಕ್ಷಕೇತರ ವೇತನ ಮತ್ತು ಸೇವಾ ನಿಯಮಾವಳಿಯನ್ನು ರೂಪಿಸಬೇಕು, ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ದಿನಗೂಲಿ ಹಾಗೂ ಮಾಸಿಕ ವೇತನ ನೌಕರರನ್ನು ಕೂಡಲೇ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.ಸರ್ಕಾರದ ಆದೇಶದ ಪ್ರಕಾರ ವಿಶ್ವವಿದ್ಯಾಲಯಯಗಳಲ್ಲಿ ಕೆಲಸ ಮಾಡುತ್ತಿರುವ  ಗುತ್ತಿಗೆ ಆಧಾರಿತ ನೌಕರರಿಗೆ ಸಂಚಿತ ವೇತನ ನೀಡಬೇಕು, ವಿಶ್ವವಿದ್ಯಾಲಯದಲ್ಲಿ ಮಹಿಳಾ ನೌಕರರಿಗೆ ಕೆಲಸ ಮಾಡುವ ಸ್ಥಳದಲ್ಲಿ ಎಲ್ಲ ಮೂಲ ಸೌಲಭ್ಯಗಳನ್ನು ನೀಡಬೇಕು ಕ್ಯಾಂಪಸ್‌ನಲ್ಲಿ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.ವಿವಿಯ ನೌಕರರ ಮಕ್ಕಳಿಗೆ  ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ಉಚಿತ ಪ್ರವೇಶಕ್ಕೆ ಪ್ರತಿ ವಿಭಾಗದಲ್ಲಿ ಒಂದು ಸೀಟು ಕಾಯ್ದಿರಿಸಬೇಕು, ನೌಕರರಿಗೆ ಐದು ವರ್ಷಗಳಿಗೊಮ್ಮೆ ಎಲ್‌ಟಿಸಿ ಸೌಲಭ್ಯ ಕಲ್ಪಿಸಬೇಕು, ಅನ್ಯ ಉದ್ದೇಶಗಳಿಗೆ ವಿಶ್ವವಿದ್ಯಾಲಯದ ಜಮೀನು ಸ್ವಾಧೀನಪಡಿಸಿಕೊಳ್ಳವುದು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.ಎಲ್ಲ ವಿಶ್ವವಿದ್ಯಾಲಯಗಳು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಅಗತ್ಯ ತಕ್ಕಂತೆ ಸಕಾಲದಲ್ಲಿ ಹಣ ಬಿಡುಗಡೆ ಮಾಡಿ, ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ನೌಕರರ ಸಂಘದ ಅಧ್ಯಕ್ಷ ಶಂಕರ,  ಪ್ರಧಾನ ಕಾರ್ಯದರ್ಶಿ ಅಂಬಣ್ಣ ಅವರು ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.ಸಂಘದ  ಉಪಾಧ್ಯಕ್ಷ ಅಂಬಣ್ಣ, ಖಜಾಂಚಿ ಬಸಪ್ಪ ಅರಿ, ಸೋಮಶೇಖರ ವೈ.ಎಂ, ವೀರಣ್ಣ, ಈರಣ್ಣ ಯಂಕಪ್ಪ, ಮಾರೆಮ್ಮ, ಹೀರಾ ಚವ್ಹಾಣ, ಶಾಂತಪ್ಪ, ನಾಗರಾಜ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry