ಕೃಷಿ ವಿವಿ: ತೇಗದ ಸಸಿ ನೆಡುವ ಕಾರ್ಯ ಶುರು

ಗುರುವಾರ , ಜೂಲೈ 18, 2019
24 °C

ಕೃಷಿ ವಿವಿ: ತೇಗದ ಸಸಿ ನೆಡುವ ಕಾರ್ಯ ಶುರು

Published:
Updated:

ರಾಯಚೂರು: ವನಮಹೋತ್ಸವ ಅಂಗವಾಗಿ ಇಲ್ಲಿನ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕವು ಬೀಜೋತ್ಪಾದನೆ ಕಾರ್ಯಕ್ಕೆ ಬಳಸುವ 25 ಎಕರೆ ಪ್ರದೇಶದ ಸುತ್ತಲೂ ಶುಕ್ರವಾರ ತೇಗದ (ಸಾಗವಾನಿ) 960 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಕೃಷಿ ವಿವಿ ಕುಲಪತಿ ಡಾ.ಬಿ.ವಿ ಪಾಟೀಲ್ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.ಕೃಷಿ ವಿವಿ ವಿವಿಧ ವಿಭಾಗ, ಘಟಕಗಳ ಆವರಣದಲ್ಲಿ ಹೆಚ್ಚು ಕೃಷಿ ಅರಣ್ಯ ಗಿಡಗಳನ್ನು ಬೆಳೆಸಲು ಆಯಾ ವಿಭಾಗದ ಮುಖ್ಯಸ್ಥರು ಆಸಕ್ತಿ ವಹಿಸಬೇಕು. ಇದರಿಂದ ಪರಿಸರ ಸಂರಕ್ಷಣೆ ಜತೆಗೆ ವಿಶ್ವವಿದ್ಯಾಲಯಕ್ಕೂ ಆದಾಯ ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ವೈ ಚಕ್ರಪಾಣಿ, ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.ಎಸ್ ಜನಗೌಡರ್, ಬೀಜ ಘಟಕ ವಿಶೇಷಾಧಿಕಾರಿ ಡಾ.ಬಸವೇಗೌಡ, ಸಹ ಸಂಶೋಧನಾ ನಿರ್ದೇಶಕ ಡಾ.ಐ ಶಂಕರಗೌಡ, ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಎನ್ ಹಂಚಿನಾಳ, ಹಿರಿಯ ಕೀಟ ತಜ್ಞ ಡಾ.ಎಂ ಭೀಮಣ್ಣ, ಕಾರ್ಯಕ್ರಮ ಸಂಯೋಜಕ ಡಾ ಪ್ರಮೋದ ಕಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry