ಶನಿವಾರ, ಮೇ 8, 2021
27 °C

ಕೃಷಿ ಸಮ್ಮೇಳನಕ್ಕೆ ನಂದೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕಾರಿಪುರ: ಸಾವಯಕ ಕೃಷಿ ಪದ್ಧತಿ ಮೂಲಕ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯುವ ಮೂಲಕ ರೈತರಿಗೆ ಮಾದರಿ ಆಗಿರುವ ತಾಲ್ಲೂಕಿನ ಚುರ್ಚಿಗುಂಡಿ ಗ್ರಾಮದ ಸಾವಯಕ ಯುವ ಕೃಷಿಕ ಬಿ.ಎನ್. ನಂದೀಶ್ ದಕ್ಷಿಣ ಕೋರಿಯ ದೇಶದ ಸಿಯೋಲ್‌ನಲ್ಲಿ ಸೆ. 26ರಿಂದ ಅ. 5ರವರೆಗೆ ನಡೆಯಲಿರುವ 17ನೇ ಅಂತರರಾಷ್ಟ್ರೀಯ ಸಾವಯವ ಕೃಷಿ ಸಮ್ಮೇಳನದಲ್ಲಿ `ಉತ್ತಮ ಕೃಷಿ ಪದ್ಧತಿ~ ವಿಭಾಗದಲ್ಲಿ ಆಯ್ಕೆಗೊಂಡಿದ್ದಾರೆ.ಅಂತರರಾಷ್ಟ್ರೀಯ ಸಾವಯವ ಕೃಷಿ ಸಮ್ಮೇಳನದಲ್ಲಿ ತಾವು ಈವರೆಗೆ ಭತ್ತ ಕೃಷಿಯಲ್ಲಿ ಅನುಸರಿಸಿಕೊಂಡು ಬಂದಿರುವ `ಲೆಗ್ಯೂಮ್ ಪದ್ಧತಿ~ ಕುರಿತು ಮಾಹಿತಿ ನೀಡಲಿದ್ದಾರೆ. ಗೋವದಲ್ಲಿ ಮುಖ್ಯ ಕಚೇರಿ ಹೊಂದಿರುವ ಭಾರತೀಯ ಸಾವಯವ ಕೃಷಿಕರ ಒಕ್ಕೂಟದ ವತಿಯಿಂದ ಈ ಆಯ್ಕೆ ನಡೆಯಲಿದ್ದು, ಭಾರತದಿಂದ ನಾಲ್ವರು ಸಾವಯವ ಕೃಷಿ ಸಾಧಕರನ್ನು ಆಯ್ಕೆ ಮಾಡಿದ್ದು, ಸಮ್ಮೇಳನ ಸಂಘಟಕರು ಇವರನ್ನು ಆಮಂತ್ರಿಸಿದ್ದಾರೆ.ಕಳೆದ  ಹನ್ನೊಂದು  ವರ್ಷದಿಂದ  ತಾಲ್ಲೂಕಿನ  ಚುರ್ಚಿಗುಂಡಿ  ಗ್ರಾಮದಲ್ಲಿ  ಯುವರೈತ  ನಂದೀಶ್ ಭತ್ತ, ತೋಟಗಾರಿಕೆ ಬೆಳೆಯನ್ನು ಸಾವಯವ ಪದ್ಧತಿಯಲ್ಲಿ ಕೈಗೊಂಡಿದ್ದಾರೆ. ಬೇಸಿಗೆ ಬೆಳೆಯಾಗಿ ಉದ್ದು, ಹೆಸರು ಬೆಳೆಯುವುದರ ಜತೆಗೆ ಹರಳು, ಪುಂಡಿ, ಸೆಣಬು, ರಸ್ತೆ ಬದಿಯಲ್ಲಿ ಬೆಳೆಯುವ ಕಾಡು ಜಾತಿಯ ದ್ವಿದಳ ಗಿಡಗಳನ್ನು 6ತಿಂಗಳ ಕಾಲ ಬೆಳೆಸುವ ಮೂಲಕ ಮಣ್ಣು ಅಭಿವೃದ್ಧಿ ಪಡಿಸುವ ಮೂಲಕ ಉತ್ತಮ ಇಳುವರಿ ಪಡೆಯುತ್ತಾರೆ.ರಸಗೊಬ್ಬರ ಬಳಕೆ ಮಾಡದೇ, ತೋಟಗಾರಿಕೆಯಲ್ಲಿ ಸ್ವಚ್ಚ ಕೃಷಿ ಪದ್ಧತಿ ಅಳವಡಿಸಿಕೊಳ್ಳದೇ, ಅಡಿಕೆ ಕೊಯ್ಯುವಾಗ ಮಾತ್ರ ತೋಟದಲ್ಲಿನ ಕಾಡು ಜಾತಿಯ ಗಿಡ, ಬಳ್ಳಿಗಳನ್ನು ಬೆಳೆಸುವ ಮೂಲಕ ಹಸಿರು ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು, ಇಂತಹ ಕೃಷಿಯಲ್ಲಿ ಖರ್ಚು ಕಡಿಮೆಯಾಗಿ, ಇಳುವರಿ ಹೆಚ್ಚಾಗಿದೆ. ಇದನ್ನು  ಹಲವರು ಅಳವಡಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.