ಕೃಷಿ ಸಾಲ ರೂ 1.36 ಲಕ್ಷ ಕೋಟಿ ವಿತರಣೆ

7

ಕೃಷಿ ಸಾಲ ರೂ 1.36 ಲಕ್ಷ ಕೋಟಿ ವಿತರಣೆ

Published:
Updated:

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದ 1ನೇ ತ್ರೈಮಾಸಿಕ ಅವಧಿಯಲ್ಲಿ ರೂ 1.36 ಲಕ್ಷ ಕೋಟಿ ಕೃಷಿ ಸಾಲ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.2012-13ರಲ್ಲಿ ಒಟ್ಟು ರೂ 5.75 ಲಕ್ಷ ಕೋಟಿ ಕೃಷಿ ಸಾಲ ವಿತರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಜೂನ್ ವೇಳೆಗಾಗಲೇ ರೂ 1,35,956 ಕೋಟಿ ಸಾಲ ನೀಡಲಾಗಿದೆ.2011-12ರಲ್ಲಿ ರೂ 4.75 ಲಕ್ಷ ಕೋಟಿ ಕೃಷಿ ಸಾಲ ವಿತರಣೆ ಗುರಿಯನ್ನೂ ಮೀರಿ ರೂ 5.11 ಲಕ್ಷ ಕೋಟಿ ವಿತರಿಸಲಾಗಿದ್ದಿತು  ಎಂದು ಇಲ್ಲಿ ನಡೆಯುತ್ತಿರುವ `ಆರ್ಥಿಕ ಸಂಪಾದಕರ ಸಮ್ಮೇಳನ~ದ ಹಿನ್ನೆಲೆಯಲ್ಲಿ ಸಿದ್ಧಪಡಿಸಲಾದ ವರದಿಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry