ಕೃಷಿ ಹೂಡಿಕೆದಾರರ ಸಮಾವೇಶ

7

ಕೃಷಿ ಹೂಡಿಕೆದಾರರ ಸಮಾವೇಶ

Published:
Updated:
ಕೃಷಿ ಹೂಡಿಕೆದಾರರ ಸಮಾವೇಶ

ಹುಬ್ಬಳ್ಳಿ: `ರೈತರು ಮತ್ತು ವ್ಯಾಪಾರಸ್ಥರ ಹಿತ ಕಾಪಾಡುವ ನಿಟ್ಟಿನಲ್ಲಿ ಜಾಗತಿಕ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಏರ್ಪಡಿಸಲಾಗುತ್ತದೆ~ ಎಂದು ಸಹಕಾರ ಹಾಗೂ ಕೃಷಿ ಮಾರುಕಟ್ಟೆ ಸಚಿವ ಲಕ್ಷ್ಮಣ ಸವದಿ ಪ್ರಕಟಿಸಿದರು.ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಜಮೀನು ನೀಡಿದ ರೈತರಿಗೆ ಹೆಚ್ಚುವರಿ ಭೂ ಪರಿಹಾರ ನೀಡುವ ಸಂಬಂಧ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸಿದ ಸಚಿವರಿಗೆ ವ್ಯಾಪಾರಸ್ಥರ ಸಂಘವು ಎಪಿಎಂಸಿಯಲ್ಲಿ ಸೋಮವಾರ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.`ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹಾಗೆಯೇ ಕೃಷಿ ಬಂಡವಾಳ ಹೂಡಿಕೆದಾರರ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಈ ಸಂಬಂಧ ಬೆಂಗಳೂರಿನಲ್ಲಿ ಭಾನುವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ರೈತರು ಬೆಳೆದ ಬೆಳೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೆಲೆ ಸಿಗಬೇಕು ಎನ್ನುವ ಪ್ರಸ್ತಾಪವೂ ಸೇರಿದಂತೆ ಏಳು ಯೋಜನೆಗಳನ್ನು ರೂಪಿಸಲಾಗಿದೆ~ ಎಂದು ಅವರು ತಿಳಿಸಿದರು.`ರಾಜ್ಯದ ರೈತರಿಗೆ ಶೇಕಡ ಒಂದರ ಬಡ್ಡಿ ದರದಲ್ಲಿ ಸಾಲ ಸಿಗುತ್ತಿದೆ. ಪ್ರತಿ ರೈತ ಮೂರು ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಒಂದು ವರ್ಷದೊಳಗೆ ಸಾಲ ಕಟ್ಟಿದರೆ ಕೇವಲ ಮೂರು ಸಾವಿರ ರೂಪಾಯಿ ಮಾತ್ರ ಬಡ್ಡಿ ಕಟ್ಟಬಹುದು. ಇದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಅವರ ಖಾತೆಗೆ ಶೇಕಡ ಎರಡರ ಬಡ್ಡಿ ದರವನ್ನು ಕಟ್ಟುತ್ತದೆ. ಇದರಿಂದ ರೈತರಿಗೆ ಶೇಕಡ ಒಂದರ ಬಡ್ಡಿ ದರ ಲಾಭವಾಗುತ್ತದೆ~ ಎಂದು ಅವರು ಹೇಳಿದರು.`ರಾಜ್ಯದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ

ಇದೇ ಸಂದರ್ಭದಲ್ಲಿ ಸನ್ಮಾನಿತರಾದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, `ಭೂ ಪರಿಹಾರ ಸಮಸ್ಯೆಯಿಂದಾಗಿ 10 ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಇದರಿಂದ ಎಪಿಎಂಸಿ ವ್ಯಾಪಾರಸ್ಥರಿಂದ 15-16 ಕೋಟಿ ರೂಪಾಯಿ ಸಂಗ್ರಹವಾಗುತ್ತದೆ~ ಎಂದರು.`ರೈತರು ತಮ್ಮ ಜಮೀನನ್ನು ಎಪಿಎಂಸಿಗೆ ನೀಡಿದ್ದಾರೆ. ಆದರೆ ಇದನ್ನು ದಾಟಿಕೊಂಡು ತಮ್ಮ ಹೊಲಗಳಿಗೆ ಹೋಗಲು ದಾರಿಯಿಲ್ಲ ಎನ್ನಬಾರದು. ಇಂಥ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಜೊತೆಗೆ ಏಷ್ಯಾದಲ್ಲೇ ದೊಡ್ಡದಾದ ಹುಬ್ಬಳ್ಳಿ ಎಪಿಎಂಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ.ಮೂಲಸೌಕರ್ಯಗಳನ್ನು ಒದಗಿಸುವ ಸಾಕಷ್ಟು ಕೆಲಸಗಳು ಈಗಾಗಲೇ ಇಲ್ಲಿ ನಡೆದಿವೆ~ ಎಂದು ಅವರು ಹೇಳಿದರು.ಮುಖ್ಯ ಅತಿಥಿಯಾದ ಜೆಡಿಎಸ್ ಮುಖಂಡ ಪಿ.ಸಿ. ಸಿದ್ಧನಗೌಡ್ರು ಮಾತನಾಡಿ, `ಎಪಿಎಂಸಿ ಮೂಲಕ ಕೇವಲ ತೆರಿಗೆ ಸಂಗ್ರಹಿಸುವಂತೆ ಆಗಬಾರದು. ಅಭಿವೃದ್ಧಿಯೂ ಆಗಬೇಕು. ಜೊತೆಗೆ ಜಗಜ್ಯೋತಿ ಬಸವೇಶ್ವರ ಯಾರ್ಡ್ ಎಂದಿದೆ. ಇಲ್ಲಿ ಬಸವೇಶ್ವರ ಮೂರ್ತಿ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ~ ಎಂದು ಅವರು ಆಗ್ರಹಿಸಿದರು.ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಚಂದ್ರಕಾಂತ ಬೆಲ್ಲದ, ಮೋಹನ ಲಿಂಬಿಕಾಯಿ, ವೀರಭದ್ರಪ್ಪ ಹಾಲಹರವಿ, ಎಪಿಎಂಸಿ ಸದಸ್ಯರಾದ ಶಂಕ್ರಪ್ಪ ಬಿಜವಾಡ, ಮಂಜುನಾಥ ಮುದರಡ್ಡಿ, ದೊಡ್ಡೇಶಪ್ಪ ನಲವಡಿ, ರಾಜಶೇಖರ ಮೆಣಸಿನಕಾಯಿ, ಸಹಕಾರಿ ಮತ್ತು ಕೃಷಿ ಮಾರುಕಟ್ಟೆ ಪ್ರಧಾನ ಕಾರ್ಯದರ್ಶಿ ವಿ. ಉಮೇಶ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry