ಶುಕ್ರವಾರ, ಮೇ 7, 2021
26 °C

ಕೃಷಿ: ಹೊಸ ತಂತ್ರಜ್ಞಾನ ಬಳಕೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಔರಾದ್: ತಾಲ್ಲೂಕಿನ ಸುಂದಾಳ ಗ್ರಾಮದಲ್ಲಿ ಈಚೆಗೆ ರೈತರಿಗಾಗಿ ಹೋಬಳಿ ಮಟ್ಟದ ಭೂಚೇತನ ಕಾರ್ಯಾಗಾರ ನಡೆಯಿತು.

ಜಿಪಂ ಸದಸ್ಯ ಕಾಶಿನಾಥ ಜಾಧವ್ ಕಾರ್ಯಾಗಾರ ಉದ್ಘಾಟಿಸಿ, ರೈತರು ಹೊಸ ಹೊಸ ತಾಂತ್ರಿಕ ವಿಧಾನ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಸಾಕಷ್ಟು ರೈತರು ಇನ್ನೂ ಸಾಂಪ್ರದಾಯಿಕ ಪದ್ಧತಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದಾರೆ. ಈ ಕಾರಣ ರೈತರು ಆರ್ಥಿಕವಾಗಿ ಸಬಲರಾಗುತ್ತಿಲ್ಲ ಎಂದು ಹೇಳಿದರು.ಕೃಷಿ ತಜ್ಞ ಮೋಹನರಾವ ಮಾತನಾಡಿ, ಕೃಷಿಯಲ್ಲಿ ನಿತ್ಯ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ರೈತರು ಇವುಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಬೇಕು. ಸರ್ಕಾರ ಕೃಷಿ ವಲಯ ಆದ್ಯತೆ ವಲಯವಾಗಿ ಪರಿಗಣಿಸಿ ರೈತರಿಗೆ ಹೆಚ್ಚು ಹೆಚ್ಚು ಅವಕಾಶ ಸಿಗುವಂತೆ ಮಾಡುತ್ತಿದೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ ಭೂಚೇತನ ಯೋಜನೆಯಡಿ ಸಿಗುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು.

ರೈತರು ಜಿಪ್ಸಮ್ ಮತ್ತು ಬೊರ‌್ಯಾಕ್ಸ್ ಕಡ್ಡಾಯವಾಗಿ ಉಪಯೋಗಿಸಿದರೆ ಶೇ 10ರಿಂದ 15ರಷ್ಟು ಇಳುವರಿ ಹೆಚ್ಚುತ್ತದೆ ಎಂದು ಹೇಳಿದರು.ಬೀಜೋಪಚಾರದ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಆತ್ಮ ಯೋಜನೆ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಪಾಂಡುರಂಗ ಪಾಟೀಲ ಸ್ವಾಗತಿಸಿದರು.

ಗ್ರಾಮದ ಪ್ರಮುಖ ಗುರುನಾಥರಾವ ಭಾಲ್ಕೆ, ವಿಠಲರಾವ ಶೆಟಕಾರ, ದಯಾನಂದ ಹಳ್ಳಿಖೇಡೆ, ಕಾಮಶೆಟ್ಟಿ ಭಾಲ್ಕೆ, ಶರಣಪ್ಪ ಪಾಟೀಲ, ಶಂಕರರಾವ ಪಾಟೀಲ, ಬಾಬುರಾವ ಪಾಟೀಲ, ಕೃಷಿ ಅಧಿಕಾರಿ ಚಂದ್ರಕಾಂತ, ನಾಮದೇವ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.