ಗುರುವಾರ , ಫೆಬ್ರವರಿ 25, 2021
30 °C
ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಅಭಿಮತ

ಕೃಷ್ಣನ ಕೃಪೆಯಿಂದ ಯಶಸ್ವಿ ಪರ್ಯಾಯ

ಪ್ರದೀಶ್‌ ಎಚ್‌ Updated:

ಅಕ್ಷರ ಗಾತ್ರ : | |

ಕೃಷ್ಣನ ಕೃಪೆಯಿಂದ ಯಶಸ್ವಿ ಪರ್ಯಾಯ

ಉಡುಪಿ: ‘ಕಾಣಿಯೂರು ಮಠದ ಪರ್ಯಾಯ ಯಶಸ್ವಿಯಾದ ಬಗ್ಗೆ ಎಲ್ಲೆಡೆ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ. ಆದರೆ, ಅದು ನಾನು ಮಾಡಿದ ಕಾರ್ಯವಲ್ಲ. ಬದಲಾಗಿ, ನನ್ನ ಮೂಲಕ ಕೃಷ್ಣ ಮಾಡಿಸಿದ್ದಾನೆ’ ಹೀಗೆಂದವರು ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ.ಉಡುಪಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಭಾನುವಾರ ಪೇಜಾವರ ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.‘ಅಷ್ಟಮಠಾಧೀಶರ ಮತ್ತು ಲಕ್ಷಾಂತರ ಭಕ್ತರ ಸ್ಫೂರ್ತಿಯ ಸೆಲೆಯಾಗಿರುವ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರದು ಅದ್ಭುತ ವ್ಯಕ್ತಿತ್ವ. ಅವರ ಪಂಚಮ ಪರ್ಯಾಯವು ಉಡುಪಿಯ ಕೀರ್ತಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದರು.ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ, ‘ಕಾಣಿಯೂರು ಸ್ವಾಮೀಜಿಯವರದು ವಿಶಾಲವಾದ ದೃಷ್ಟಿ, ಉದಾರವಾದ ಮನಸ್ಸಿನ ಕಾರ್ಯದಿಂದ ಪರ್ಯಾಯ ಯಶಸ್ವಿಯಾಗಿದೆ. ಒಂದು ಪರ್ಯಾಯ ಯಶಸ್ವಿಯಾದಾಗ ಅದರ ನಂತರದ ಪರ್ಯಾಯದಲ್ಲಿ ಭಕ್ತರು ಭಾರಿ ನಿರೀಕ್ಷೆ ಮಾಡುತ್ತಾರೆ.ಹೀಗಾಗಿ, ನಮ್ಮ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ. ಕಾಣಿಯೂರು ಸ್ವಾಮೀಜಿ ಅಜಾತಶತ್ರುವಾಗಿದ್ದು, ಯಾರಿಗೂ ಬೇಸರವಾಗದಂತೆ ಪರ್ಯಾಯ ನಡೆಸಿದ್ದಾರೆ’ ಎಂದು ಹೇಳಿದರು.ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ‘ಕಾಣಿಯೂರು ಸ್ವಾಮೀಜಿಯವರು ಪರ್ಯಾಯ ಅವಧಿಯಲ್ಲಿ ಗೋಸಂರಕ್ಷಣೆಗೆ ವಿಶೇಷವಾದ ಪ್ರೋತ್ಸಾಹವನ್ನು ನೀಡಿದ್ದಾರೆ’ ಎಂದು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್‌ ಸೊರಕೆ, ಉಡುಪಿ ನಗರಸಭೆ  ಪಿ. ಯುವರಾಜ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್‌, ಎಂ.ಬಿ. ಪುರಾಣಿಕ್‌, ಪ್ರದೀಪ್‌ ಕುಮಾರ್ ಕಲ್ಕೂರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.