ಕೃಷ್ಣನ ಹಾಡು

7

ಕೃಷ್ಣನ ಹಾಡು

Published:
Updated:

ಈ ಜನ್ಮ ಒಂದೇ ಸಾಲದೆ ನಿನ್ನ ಪ್ರೀತಿ ಪಡೆದು ಋಣವ ತೀರದು...’ ಜಯಕುಮಾರ್ ನಿರ್ಮಾಣದ ಕೃಷ್ಣನ ಮ್ಯಾರೇಜ್ ಸ್ಟೋರಿ’ಯ ಹಾಡಿನ ಚಿತ್ರೀಕರಣ ರಾಕ್‌ಲೈನ್ ಸ್ಟುಡಿಯೋದಲ್ಲಿ ನಡೆಯಿತು. ಸಂಭ್ರಮ್ ಬರೆದಿರುವ ಈ ಗೀತೆಗೆ ಸಂಗೀತ ಶ್ರೀಧರ್, ನೃತ್ಯ ನಿರ್ದೇಶನ ಹರ್ಷ ಅವರದ್ದು. ಅಜಯ್ ರಾವ್ ಮತ್ತು ನಿಧಿ ಸುಬ್ಬಯ್ಯ ಈ ಹಾಡಿಗೆ ಹೆಜ್ಜೆ ಹಾಕಿದರು.    

ಸಿಲಿಕಾನ್‌ನಲ್ಲಿ ‘ಡೂಪ್ಲಿಕೇಟ್’

ಕಶ್ಯಪ್ ಡಕೊಜು ನಿರ್ಮಾಣದ ‘ಮಿಸ್ಟರ್ ಡೂಪ್ಲಿಕೇಟ್’ ಚಿತ್ರೀಕರಣ ಮಂಗಳೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಗಿದೆ. ಪ್ರಜ್ವಲ್, ದಿಗಂತ್ ಈ ಚಿತ್ರದ ನಾಯಕರು. ಶೀತಲ್  ನಾಯಕಿ. ದೇವರಾಜ್, ರಮೇಶ್‌ಭಟ್, ಸುಧಾ ಬೆಳವಾಡಿ, ಶಂಕರಣ್ಣ, ತುಳಸಿ, ಆನಂದ್ ಮುಂತಾದವರ ತಾರಾಗಣವಿದೆ. ಕೂಡ್ಲು ರಾಮಕೃಷ್ಣ ಚಿತ್ರಕಥೆ- ನಿರ್ದೇಶನ, ದ್ವಾರ್ಕಿರಾಘವ್ ಕಥೆ-ಸಂಭಾಷಣೆ, ನವೀನ್ ಸುವರ್ಣ ಛಾಯಾಗ್ರಹಣ, ಮನೋಮೂರ್ತಿ ಸಂಗೀತ, ಶಿವು ಸಂಕಲನ, ಡಿರೆಂಟ್ ಡ್ಯಾನಿ ಸಾಹಸ ನಿರ್ದೇಶನವಿದೆ.‘ಜಾನಿ’ ಮಾತು

ಹಾಡುಗಳ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದ್ದ ಜಯಣ್ಣ, ಭೋಗೇಂದ್ರ ನಿರ್ಮಾಣದ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಚಿತ್ರಕ್ಕೆ ಆಕಾಶ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಅಲ್ಲದೆ ಸದ್ಯದಲ್ಲೇ ಹಿನ್ನೆಲೆ ಸಂಗೀತ ಜೋಡಿಸಲಾಗುತ್ತದೆ. ಕಥೆ, ಚಿತ್ರಕಥೆ, ನಿರ್ದೇಶನ ಪ್ರೀತಂ ಗುಬ್ಬಿ. ನಾಯಕ ವಿಜಯ್, ನಾಯಕಿ ರಮ್ಯಾ. ಎಸ್.ಕೃಷ್ಣ ಛಾಯಾಗ್ರಹಣ, ವಿ.ಹರಿಕೃಷ್ಣರ ಸಂಗೀತ, ಹರ್ಷ ನೃತ್ಯ ನಿರ್ದೇಶನ, ದೀಪು. ಎಸ್ ಕುಮಾರ್ ಸಂಕಲನವಿದೆ. ತಾರಾಬಳಗದಲ್ಲಿ ರಂಗಾಯಣ ರಘು, ದತ್ತಣ್ಣ, ಅಚ್ಯುತಕುಮಾರ್, ಸಾಧುಕೋಕಿಲಾ, ಶರಣ್ ಮುಂತಾದವರಿದ್ದಾರೆ.‘ಶಬ್ದಮಣಿ’ಗೆ ಮಾತು

ಚಂದ್ರವತಿ ನಿರ್ಮಾಣದ ‘ಶಬ್ದಮಣಿ’ ಚಿತ್ರಕ್ಕೆ ರೇಣು ಸ್ಟುಡಿಯೋದಲ್ಲಿ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯುತ್ತಿದೆ. ಸಂಗೀತ ನಿರ್ದೇಶಕ ರೇಣುಕುಮಾರ್ ಪ್ರಥಮ ಬಾರಿಗೆ ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಶ್ರೀನಿವಾಸ್ ಛಾಯಾಗ್ರಹಣ, ಶ್ಯಾಂ ಶಿವಮೊಗ್ಗ ಸಂಭಾಷಣೆ, ಫೈವ್ ಸ್ಟಾರ್ ಗಣೇಶ್ ನೃತ್ಯ ನಿರ್ದೇಶ, ರಾಮ್ ನಾರಾಯಣ್, ರೇಣುಕುಮಾರ್ ಸಾಹಿತ್ಯ, ನಂಜುಂಡಿ ನಾಗರಾಜ್ ಸಾಹಸ, ಕೆ.ಡಿ.ರವಿ’ ಸಂಕಲನವಿದೆ. ಹರ್ಷ, ಸುಷ್ಮ, ಗಿರೀಶ್ ಕಾರ್ನಾಡ್, ಶೃತಿ, ಸಂಕೇತ್ ಕಾಶಿ, ಮೋಹನ್ ಜುನೇಜಾ, ಮಾ. ಶಿತಿಲ್ ಸೋಮಣ್ಣ, ವಿ’ಜಯಸಾರಥಿ, ನಿಶಾ ಅಯ್ಯರ್ ಹರಿರಾಯಪ್ಪ ಮುಂತಾದವರು ತಾರಾಗಣದಲ್ಲಿದ್ದಾರೆ.

ಚಿತ್ರತಂಡದಿಂದ ಷೂ ವಿತರಣೆ

‘106 ಕನಸು’ ಮಕ್ಕಳ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಇದೇ ತಿಂಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ನಿರ್ಮಾಪಕ ಪುನೀತ್ ಹೇಳಿದ್ದಾರೆ.ಅವಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆಯಿದೆ. ನಿರ್ದೇಶಕ ಅವಿರಾಮ್ ತಾವು ಓದಿದ್ದ ಮಾಗಡಿ ರಸ್ತೆಯ ಪೊಲೀಸ್ ಕಾಲೊನಿಯ ಸರ್ಕಾರಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಷೂ ವಿತರಿಸಿದರು. ಶಾಸಕ ಎಂ.ಕೃಷ್ಣಪ್ಪ, ಸಾಯಿಪ್ರಕಾಶ್, ನಟ ವಾಸು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ತಾರಾಬಳಗದಲ್ಲಿ ಬಿರಾದಾರ್, ಫ್ರೆಂಡ್ಸ್ ವಾಸು, ಮಾ.ಭರತ್, ಮಾ.ಶ್ರೇಯಸ್, ಮಾ.ಮನೋಜ್, ಮಾ.ಗಣೇಶ್, ಮಾ.ಜಯಂತ್ ಇದ್ದಾರೆ.‘ಸ್ವಯಂಕೃಷಿ’ಗೆ ಮಾತು

ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ‘ಸ್ವಯಂಕೃಷಿ’ ಚಿತ್ರಕ್ಕೆ ಮಾತಿನ ಜೋಡಣೆ ನಡೆಯುತ್ತಿದೆ.

ನಾಯಕನಟರಾಗಿ ಅಭಿನಯಿಸುತ್ತಿರುವ ವೀರೇಂದ್ರಬಾಬು ಈ ಚಿತ್ರದ ನಿರ್ದೇಶಕರು ಕೂಡ. ಅಭಿಮಾನ್‌ರಾಯ್  ಸಂಗೀತ, ಸುಧಾಕರ್ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ಕೆ.ಎಂ.ಇಂದ್ರ ಸಂಭಾಷಣೆ, ವಿಜಯ್‌ಚಂಡೂರ್ ನಿರ್ದೇಶನ-ಸಹಕಾರ, ಆರ್.ಜನಾರ್ದನ್ ತಾಂತ್ರಿಕ ಪ್ರಧಾನ ನಿರ್ವಹಣೆ ಹಾಗೂ ಅಚ್ಯುತ್‌ರಾವ್ ನಿರ್ಮಾಣ ನಿರ್ವಹಣೆಯಿದೆ. ತಮನ್ನಾ, ಚರಣ್‌ರಾಜ್, ಬಿಯಾಂಕ ದೇಸಾಯಿ, ಜೀವನ್, ವಿಜಯ್, ಜನಾರ್ದನ್, ಉಮಾಶ್ರೀ, ರಂಗಾಯಣರಘು, ಕೃಷ್ಣೇಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.ಸದ್ಯದಲ್ಲೇ ‘ಗನ್’

ಹರೀಶ್‌ರಾಜ್ ನಾಯಕನಾಗಿ ನಟಿಸಿ ನಿರ್ದೇಶಿಸಿರುವ ‘ಗನ್’ ಇದೇ ತಿಂಗಳ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

‘ಕಲಾಕಾರ್’ ಚಿತ್ರದ ನಂತರ ಹರೀಶ್‌ರಾಜ್ ನಿರ್ದೇಶನದ ಈ ಚಿತ್ರ ಕುತೂಹಲಕಾರಿ ಕಥೆಯನ್ನೊಳಗೊಂಡಿದೆ. ಚಿತ್ರದ ನಾಯಕಿಯಾಗಿ ಮಲಿಕ್ಲಾ ಕಪೂರ್ ಅಭಿನಯಿಸುತ್ತಿದ್ದಾರೆ. ರಚನಾಮೌರ್ಯ, ಕಿರಣ್ ರಾಥೋಡ್ ಮತ್ತು ನಿಖಿತಾ ಚಿತ್ರದ ಗೀತೆಗಳಿಗೆ ಹೆಜ್ಜೆ ಹಾಕಿದ್ದಾರೆ. ನಾಲ್ವರು ನಾಯಕಿಯರನ್ನು ಈ ಚಿತ್ರ ಒಳಗೊಂಡಿದೆ.ಎಚ್.ಎಮ್.ರಾಮಚಂದ್ರ ಮತ್ತು ವಿಷ್ಣುವರ್ಧನ್ ಛಾಯಾಗ್ರಹಣ, ಮಂಜು ಮಾಂಡವ್ಯ ಸಂಭಾಷಣೆ, ರಾನಿ ರಾಫೆಲ್ ಸಂಗೀತವಿದೆ. ತಾರಾಬಳಗದಲ್ಲಿ ರಂಗಾಯಣರಘು, ಸುಂದರಶ್ರೀ, ಸಂಗೀತಾ, ಮೋಹನ್‌ಜುನೆಜಾ, ಪಿ.ಎನ್.ಸತ್ಯ, ಬುಲೆಟ್‌ಪ್ರಕಾಶ್ ಮುಂತಾದವರಿದ್ದಾರೆ.ಮರಳಿದ ‘ಹೋರಿ’

ಬ್ಯಾಂಕಾಕ್‌ನಲ್ಲಿ 3 ಹಾಡುಗಳನ್ನು ಚಿತ್ರೀಕರಿಸಿಕೊಂಡು ‘ಹೋರಿ’ ಚಿತ್ರತಂಡ ತಾಯ್ನಾಡಿಗೆ ಮರಳಿದೆ. ನಾಯಕನಟ ವಿನೋದ್ ಪ್ರಭಾಕರ್, ಗೌರಿ ಮುಂಜಾಲ್ ಎರಡು ಹಾಡುಗಳಿಗೆ ಹೆಜ್ಜೆ ಹಾಕಿದರೆ ಮತ್ತೊಂದು ಹಾಡಿಗೆ ವಿನೋದ್, ಅಭಿನಯಶ್ರೀ ಕುಣಿದು ಕುಪ್ಪಳಿಸಿದರು. ನೃತ್ಯ ನಿರ್ದೇಶನ ತ್ರಿಭುವನ್ ಅವರದ್ದಾಗಿತ್ತು.ಸಾಹಸಮಯ, ಪ್ರೇಮಮಯ ಹಾಗೂ ಭಾವಾನಾತ್ಮಕ ಸನ್ನಿವೇಶಗಳನ್ನು ತುಂಬಿರುವ ‘ಹೋರಿ’ ನಿರ್ಮಾಪಕ ಲಿಂಗೇಗೌಡರ ಪ್ರಥಮ ಪ್ರಯತ್ನ. ನಾಗೇಂದ್ರ ಮಾಗಡಿ ನಿರ್ದೇಶನ, ರೇಣುಕುಮಾರ್ ಸಂಗೀತ, ಎಂ.ಆರ್. ಸೀನು ಛಾಯಾಗ್ರಹಣ, ರವಿವರ್ಮ ಸಾಹಸ, ರಾಂನಾರಾಯಣ ಸಾಹಿತ್ಯವಿದೆ. ಗೌರಿ ಮುಂಜಾಲ್, ರಮಣಿತೋ ಚೌಧರಿ, ದೊಡ್ಡಣ್ಣ, ಉಮೇಶ್ ಹಾಗೂ ಇನ್ನಿತರರು ತಾರಾಗಣದಲಿದ್ಲ್‌ರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry