ಶನಿವಾರ, ಮೇ 28, 2022
27 °C

ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಅಧಿಕಾರಿಗಳ ಸಮಸ್ಯೆಗೆ ಸ್ಪಂದಿಸಲು ಕೃಷ್ಣಾ ಗ್ರಾಮೀಣ ಬ್ಯಾಂಕ್ ಆಫೀಸರ್ಸ್‌ ಆರ್ಗನೈಸೇಶನ್ ಅಸ್ತಿತ್ವಕ್ಕೆ ಬಂದಿದೆ.ಭಾನುವಾರ ನಗರದಲ್ಲಿ ನಡೆದ ಸಭೆಯಲ್ಲಿ ಈ ಸಂಘ ರಚನೆಯಾಗಿದೆ.ಸಭೆಯಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಅಧಿಕಾರಿಗಳ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.ಅಧಿಕಾರಿಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಬಿ.ಎಂ.ಎಸ್ ಸಂಯೋಜಿತ ಕಾರ್ಮಿಕ ಸಂಘಟನೆ ಆರಂಭಿಸಿ ಅದಕ್ಕೆ ಕೃಷ್ಣಾ ಗ್ರಾಮೀಣ ಬ್ಯಾಂಕ್ ಆಫೀಸರ್ಸ್‌ ಆರ್ಗನೈಸೇಶನ್ ಎಂದು ನಾಮಕರಣ ಮಾಡಲು ಗೊತ್ತುವಳಿ ಮಂಡಿಸಲಾಯಿತು.ಕೃಷ್ಣಾ ಗ್ರಾಮೀಣ ಬ್ಯಾಂಕ್ ಆಫೀಸರ್ಸ್‌ ಆರ್ಗನೈಸೇಶನ್ ಸ್ಥಾಪನೆ ಮಾಹಿತಿ ಬ್ಯಾಂಕ್‌ಗೆ ತಿಳಿಸಲು, ನೋಂದಣಿ ಪ್ರಕ್ರಿಯೆ ಮತ್ತು ಬೆಳವಣಿಗೆ ಕುರಿತು ಕಾರ್ಯ ನಿರ್ವಹಿಸಲು ಸುಧೀರ ಕುಲಕರ್ಣಿ, ವಿನೋದ ಕುಲಕರ್ಣಿ, ಮನೋಹರ ಬಡಶೇಷಿ, ವಿನಾಯಕ ವೇಡಳವೇಣಿ, ಟಿ.ಎಂ. ಮಾಳಗೆ, ಮುರ್ತುಜಾ ಪಟೇಲ್, ಪಿ. ನಾಗೇಂದ್ರ ಅವರನ್ನು ಒಳಗೊಂಡ 7 ಜನರ ತಂಡ ರಚಿಸಲಾಯಿತು.ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಎಲ್ಲ ಅಧಿಕಾರಿಗಳ ಸಮಸ್ಯೆಗಳಿಗೆ ಪರಿಹಾರ ನೀಡುವ ವೇದಿಕೆಯಾಗಿ  ಆರ್ಗನೈಸೇಶನ್ ಉದಯಿಸಿದ್ದು, ಎಲ್ಲ ಅಧಿಕಾರಿಗಳು ಹೊಸ ಸಂಘಟನೆಯ ಸದಸ್ಯರಾಗಿ ನೋಂದಾಯಿಸಿಕೊಳ್ಳಲು ಕರೆ ನೀಡಲಾಯಿತು.ಸಭೆಯಲ್ಲಿ ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ಆಫೀಸರ್ಸ್‌ ಆರ್ಗನೈಸೇಶನ್ ಉಪ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಯ್ಯ ಸೊಪ್ಪಿಮಠ, ಪ್ರಗತಿ ಗ್ರಾಮೀಣ ಆಫೀಸರ್ಸ್‌ ಆರ್ಗನೈಸೇಶನ್ ಕಾರ್ಯದರ್ಶಿ ಶ್ರೀಧರ ಜೋಷಿ, ಕೆನರಾ ಬ್ಯಾಂಕ್ ವರ್ಕರ್ಸ್‌ ಆರ್ಗನೈಸೇಶನ್ ಕ್ಷೇತ್ರೀಯ ಕಾರ್ಯದರ್ಶಿ ಮಹಾದೇವಯ್ಯ ಕರದಳ್ಳಿ, ಎಸ್. ಬಿ.ಎಚ್. ವರ್ಕರ್ಸ್‌ ಆರ್ಗನೈಸೇಶನ್ ಪ್ರಧಾನ ಕಾರ್ಯದರ್ಶಿ ನರಸಿಂಹ ಮಳಖೇಡಕರ, ಜಯಪ್ರಕಾಶ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.