ಕೃಷ್ಣಾ ತೀರ್ಪು ಅಧಿಸೂಚನೆಗೆ ನಿರ್ಬಂಧ

ಬುಧವಾರ, ಮೇ 22, 2019
29 °C

ಕೃಷ್ಣಾ ತೀರ್ಪು ಅಧಿಸೂಚನೆಗೆ ನಿರ್ಬಂಧ

Published:
Updated:

ನವದೆಹಲಿ: ಕೃಷ್ಣಾ ನದಿಯ ಹೆಚ್ಚುವರಿ ನೀರು ಹಂಚಿಕೆ ಕುರಿತಂತೆ ನ್ಯಾಯಮಂಡಳಿ ತೀರ್ಪು ಕುರಿತು ಅಂತಿಮ ಅಧಿಸೂಚನೆ ಹೊರಡಿಸದೇ ಇರುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.ಆದರೆ ನ್ಯಾಯಮಂಡಳಿಯ ತೀರ್ಮಾನಕ್ಕೆ ತಡೆಯಾಜ್ಞೆ ನೀಡಲು ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಆರ್.ಎಂ.ಲೋಧಾ ಅವರನ್ನು ಒಳಗೊಂಡ ನ್ಯಾಯಪೀಠ ನಿರಾಕರಿಸಿತು. ನ್ಯಾಯಮಂಡಳಿಯ ತೀರ್ಪಿಗೆ ವಿವರಣೆ ಕೋರುವುದು ಇಲ್ಲವೇ ಸಲಹೆ ಮಾಡುವ ಕುರಿತು ಮಾಡಲಾಗಿದ್ದ ಮನವಿಯನ್ನೂ ಪೀಠ ಮಾನ್ಯ ಮಾಡಲಿಲ್ಲ.ಸುಪ್ರೀಂ ಕೋರ್ಟಿನ ಈ ಸೂಚನೆಯಿಂದಾಗಿ ಕರ್ನಾಟಕ ಭಾಗದ ಕೃಷ್ಣಾ ಕೊಳ್ಳದಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳಿಗೆ ಅಡಚಣೆ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಅಂತರರಾಜ್ಯ ಜಲ ವಿವಾದ ಕಾಯಿದೆ ಅನ್ವಯ ನ್ಯಾಯಮಂಡಳಿ ನೀಡುವ ತೀರ್ಪನ್ನು ಕೇಂದ್ರ ಸರ್ಕಾರ ಅಧಿಸೂಚನೆ ಮೂಲಕ ಪ್ರಕಟಿಸಿದರೆ ಅದೇ ಅಂತಿಮವಾಗುತ್ತದೆ.ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿಯ ಪ್ರಸ್ತುತತೆಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಪ್ರಶ್ನಿಸಿದ್ದವು. ಆಂಧ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ಈಗಾಗಲೇ ನ್ಯಾಯಮಂಡಳಿಯ ಮುಂದೆ ಇತ್ಯರ್ಥಕ್ಕೆ ಬಾಕಿ ಇದೆ ಎಂದು ವಾದ ಮಂಡಿಸಿದ್ದವು.ಆಂಧ್ರ ಪ್ರದೇಶ ಸರ್ಕಾರ ನ್ಯಾಯಮಂಡಳಿ ಮುಂದೆ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿ ಇತ್ಯರ್ಥವಾದ ನಂತರವೇ ಅಂತಿಮ ತೀರ್ಪು ಹೊರಬೀಳುವುದರಿಂದ, ಸುಪ್ರೀಂ ಕೋರ್ಟಿನಲ್ಲಿ ಆ ಸರ್ಕಾರ (ಆಂಧ್ರ) ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡುವಂತೆ ಕೋರಿದ್ದವು.ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ಹೆಚ್ಚುವರಿ ನೀರು ನಿಗದಿ ಮಾಡುವ ನ್ಯಾಯಮಂಡಳಿಯ ತೀರ್ಮಾನ ಏಕಪಕ್ಷೀಯ ಮತ್ತು ಅಕ್ರಮವಾಗಿತ್ತು. ಇದರಿಂದಾಗಿ 2010ರ ಡಿಸೆಂಬರ್ 30ರಂದು ನೀಡಲಾದ ತೀರ್ಪಿನಿಂದ ನಮ್ಮ ಪಾಲಿನ 130 ಟಿಎಂಸಿ ನೀರು ಪಡೆಯುವುದು ತಪ್ಪಿ ಹೋಯಿತು ಎಂದು  ಆಂಧ್ರ ಪ್ರದೇಶ ತನ್ನ ಅರ್ಜಿಯಲ್ಲಿ ವಾದಿಸಿತ್ತು.ಈ ತೀರ್ಪಿನಿಂದಾಗಿ ಸುಮಾರು 190 ಟಿಎಂಸಿಗಿಂತ ಹೆಚ್ಚುವರಿ ನೀರನ್ನು ಪಡೆದರೂ ಸಹ, ತಾನು ಇನ್ನೂ ಸುಮಾರು 130ಕ್ಕೂ ಹೆಚ್ಚು ಟಿಎಂಸಿ ನೀರನ್ನು ಕಳೆದುಕೊಳ್ಳಬೇಕಾಗಿದೆ ಎಂದು ವಾದಿಸಿತ್ತು.ನ್ಯಾಯಮಂಡಳಿ ತೀರ್ಪಿಗಿಂತ ಮೊದಲು ಆಂಧ್ರ ಪ್ರದೇಶ 320 ಟಿಎಂಸಿ ನೀರನ್ನು ಬಳಸಿಕೊಳ್ಳುತ್ತಿತ್ತು. ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಮಂಡಳಿ ಹೆಚ್ಚುವರಿ ನೀರನ್ನು ಮೂರು ರಾಜ್ಯಗಳಿಗೆ ಹಂಚಿಕೆ ಮಾಡಿ ಆಂಧ್ರ ಪ್ರದೇಶಕ್ಕೆ 190, ಕರ್ನಾಟಕಕ್ಕೆ 177 ಹಾಗೂ ಮಹಾರಾಷ್ಟ್ರಕ್ಕೆ 81 ಟಿಎಂಸಿ ನೀರನ್ನು ನೀಡಿತ್ತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry