ಗುರುವಾರ , ಮೇ 6, 2021
31 °C

ಕೃಷ್ಣಾ ನದಿಯಲ್ಲಿ ತಗ್ಗಿದ ಪ್ರವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಲಪ್ರಭಾ ನದಿ ಉಕ್ಕಿ ಹರಿದ ಪರಿಣಾಮ ರಾಮ ದುರ್ಗ ಪಟ್ಟಣ ಸೇರಿದಂತೆ ತಾಲ್ಲೂಕಿನ 50ಕ್ಕೂ ಹೆಚ್ಚು ಮನೆ ಗಳಿಗೆ ಗುರುವಾರ ಮಧ್ಯರಾತ್ರಿ ವೇಳೆ ನೀರು ನುಗ್ಗಿದೆ.ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1,45, 916 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಕೃಷ್ಣಾ ನದಿಯಲ್ಲಿ ಶುಕ್ರ ವಾರ ಸುಮಾರು ನಾಲ್ಕು ಅಡಿಯಷ್ಟು ಪ್ರವಾಹ ಇಳಿಮುಖವಾ ಗಿದೆ.ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದಿದ್ದ ಭಾರಿ ಮಳೆ ಯಿಂದಾಗಿ ಬೆಳಗಾವಿ ತಾಲ್ಲೂಕಿನಲ್ಲಿ 20 ಹಾಗೂ ಖಾನಾಪುರ ತಾಲ್ಲೂಕಿನಲ್ಲಿ 5 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 25 ಮನೆಗಳು ಶುಕ್ರವಾರ ಭಾಗಶಃ ಕುಸಿದು ಬಿದ್ದಿವೆ. ಜುಲೈ 1ರಿಂದ ಇದುವ ರೆಗೆ ಜಿಲ್ಲೆಯಲ್ಲಿ ಒಟ್ಟು 334 ಮನೆಗಳು ಭಾಗಶಃ ಕುಸಿದು ಬಿದ್ದಿರುವುದು ವರದಿಯಾಗಿದೆ.ರಾಮದುರ್ಗ ವರದಿ: ಮಲಪ್ರಭಾ ನದಿ ಉಕ್ಕಿ ಹರಿದ ಪರಿ ಣಾಮ ರಾಮದುರ್ಗದಿಂದ ಹುಬ್ಬಳ್ಳಿ, ಬೆಳಗಾವಿ ಹಾಗೂ ಗದಗ ಸಂಪರ್ಕಿಸುವ ರಸ್ತೆಗಳ ಸಂಪರ್ಕ ಶುಕ್ರವಾರ ಬೆಳಿಗ್ಗೆ ಕಡಿತಗೊಂಡಿತು. ಇದರಿಂದಾಗಿ ಹೊರ ಊರುಗಳಿಗೆ ತೆರಳ ಬೇಕಾದ ಜನರು ಪರದಾಡಬೇಕಾಯಿತು. ರಾಮದುರ್ಗ- ಲೋಕಾಪುರ ರಸ್ತೆಯಲ್ಲಿ ಮಾತ್ರ ಸಂಚಾರ ಸುಗಮವಾಗಿತ್ತು.ಮಲಪ್ರಭಾ ಅಣೆಕಟ್ಟಿನಿಂದ ಗುರುವಾರ ಸಂಜೆಯ ವೇಳೆಗೆ 10 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿದ್ದರಿಂದ ರಾಮದುರ್ಗ ಪಟ್ಟಣದಂಚಿನ ಪ್ರದೇಶದ ಹಲವಾರು ಮನೆಗಳು ಮಧ್ಯರಾತ್ರಿ ವೇಳೆಗೆ ಜಲಾವೃತವಾದವು. ಪ್ರವಾಹ ಇನ್ನಷ್ಟು ಹೆಚ್ಚಲಿದೆ ಎಂಬ ಭಯದಿಂದ ಜನರು ರಾತ್ರಿಯೆಲ್ಲ ಜಾಗರಣೆ ಮಾಡಿದರು.ಪಟ್ಟಣದ ಕಿಲಬನೂರ, ಬಣಕಾರ ಪೇಟೆ, ಕಾಗಿ ಓಣಿ, ಪಡಕೋಟಗಲ್ಲಿಯ 30ಕ್ಕೂ ಹೆಚ್ಚು ಮನೆಗಳು ಜಲಾವೃತವಾ ಗಿವೆ. ತಾಲ್ಲೂಕಿನ ಸುನ್ನಾಳ ಗ್ರಾಮದ 20ಕ್ಕೂ ಹೆಚ್ಚು ಮನೆಗ ಳಿಗೆ ನೀರು ನುಗ್ಗಿದ್ದು, ಅಲ್ಲಿನ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಹಸೀಲ್ದಾರ ಗೀತಾ ಕೌಲಗಿ `ಪ್ರಜಾವಾಣಿ~ಗೆ ತಿಳಿಸಿದರು.ಗೋವಿನಜೋಳ, ಜೋಳ ಹಾಗೂ ಕಬ್ಬು ಬೆಳೆಗಳು ನೀರಿ ನಲ್ಲಿ ಮುಳುಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಖಾನಾಪುರ ತಾಲ್ಲೂಕಿನಲ್ಲಿ ಮಳೆ ಕಡಿಮೆಯಾದ ಕಾರಣ ಶುಕ್ರ ವಾರ ಸಂಜೆಯ ವೇಳೆಗೆ ಮಲಪ್ರಭಾ ಅಣೆಕಟ್ಟಿನಿಂದ ಬಿಡುವ ನೀರಿನ ಪ್ರಮಾಣವನ್ನು 3 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ. ಮಧ್ಯಾಹ್ನದ ವೇಳೆಗೆ ರಾಮದುರ್ಗ-ಹುಬ್ಬಳ್ಳಿ ರಸ್ತೆ ಸಂಚಾರಕ್ಕೆ ಮುಕ್ತವಾಗಿತ್ತು.ಚಿಕ್ಕೋಡಿ ವರದಿ: ನೆರೆಯ ಮಹಾರಾಷ್ಟ್ರದಲ್ಲಿ ಎಡೆಬಿಡದೇ ಸುರಿಯುತ್ತಿದ್ದ ಮಳೆಯ ಆರ್ಭಟ ತಗ್ಗಿರುವ ಪರಿಣಾಮ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ಪ್ರವಾಹ ಇಳಿಮುಖ ವಾಗಿದ್ದು, ನದಿ ತೀರದ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.ಶುಕ್ರವಾರ ಮಹಾರಾಷ್ಟ್ರದಿಂದ ದೂಧಗಂಗಾ ಮತ್ತು ರಾಜಾಪುರ ಬ್ಯಾರೇಜುಗಳ ಮೂಲಕ ಒಟ್ಟು 1.56 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕೃಷ್ಣಾ ಪ್ರವಾಹದಲ್ಲಿ ಸುಮಾರು ನಾಲ್ಕುವರೆ ಅಡಿ ಇಳಿಕೆ ದಾಖ ಲಾಗಿದೆ. ದೂಧಗಂಗಾ ಪ್ರವಾಹವೂ ಇಳಿಮುಖವಾಗಿದ್ದು, ಯಕ್ಸಂಬಾ-ದಾನವಾಡ ಸೇತುವೆ ಸಂಚಾರಕ್ಕೆ ಮುಕ್ತಗೊಂಡಿದೆ. ಮಹಾರಾಷ್ಟ್ರದ ಕೋಯ್ನಾದಲ್ಲಿ 4 ಮಿ.ಮೀ, ನವಜಾದಲ್ಲಿ 8 ಮಿ.ಮೀ. ಮತ್ತು ವಾರಣಾದಲ್ಲಿ 4 ಮಿ.ಮೀ. ಮಳೆ ದಾಖಲಾಗಿದೆ. ಕೃಷ್ಣಾ ನದಿಯ ಉಗಮ ಸ್ಥಾನ ಮಹಾಬಳೇಶ್ವರದಲ್ಲಿ ಗುರುವಾರ ರಾತ್ರಿಯಿಂದ ಮಳೆ ಪ್ರಮಾಣ ತೀರಾ ಕಡಿಮೆ ಯಾಗಿದೆ. ತಾಲ್ಲೂಕಿನಲ್ಲಿಯೂ ಶುಕ್ರವಾರ ಮಳೆ ಸಂಪೂರ್ಣ ನಿಂತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.