ಕೃಷ್ಣಾ ನೀರಿನ ಮೇಲೆ ನಮ್ಮ ಹಕ್ಕಿದೆ: ಎಸ್‌ಆರ್‌ಪಿ

7

ಕೃಷ್ಣಾ ನೀರಿನ ಮೇಲೆ ನಮ್ಮ ಹಕ್ಕಿದೆ: ಎಸ್‌ಆರ್‌ಪಿ

Published:
Updated:

ಇಂಡಿ: `ಕೃಷ್ಣಾ ಕೊಳ್ಳದ ಬಗ್ಗೆ ವರದಿ ನೀಡಿದ ಬ್ರಿಜೇಶ್ ಅವರ ಸೂಚನೆಯ ಮೇರೆಗೆ ಕೃಷ್ಣಾ ಕೊಳ್ಳದಲ್ಲಿಯ 177 ಟಿಎಂಸಿ ಅಡಿ ನೀರಿನ ಮೇಲೆ ನಮ್ಮ (ಕರ್ನಾಟಕದ) ಹಕ್ಕಿದೆ. ಇದರ ಬಗ್ಗೆ ಕನ್ನಡಿಗರಾದ ನಾವು ಹೆಚ್ಚಿನ ಲಕ್ಷ ವಹಿಸಬೇಕು' ಎಂದು ವಿಧಾನಪರಿಷತ್  ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮನವಿ ಮಾಡಿಕೊಂಡರು.ಅವರು ಸೋಮವಾರ ಇಂಡಿ ಪಟ್ಟಣದಲ್ಲಿ ನ್ಯೂ ಕರ್ನಾಟಕ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದರು.ಬೆಳಗಾವಿ ನಗರದಲ್ಲಿಯ ಸುರ್ಣಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಕೃಷ್ಣಾ ವಿಚಾರವಾಗಿ ಪ್ರಮುಖ ವಿಚಾರಗಳನ್ನು ಚರ್ಚೆ ಮಾಡುವುದಾಗಿ ಭರವಸೆ ನೀಡಿದ ಅವರು ಕೃಷ್ಣಾ ಕೊಳ್ಳದ ಅಡಿಯಲ್ಲಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರವನ್ನು ಒತ್ತಾಯಿಸುವಲ್ಲಿ ಎಲ್ಲಾ ಶಾಸಕರು ಪಕ್ಷಬೇಧ ಮರೆತು ಸಹಕಾರ ನೀಡಬೇಕು. ಇದಕ್ಕೆಲ್ಲ ಕರ್ನಾಟಕದ ಜನತೆ ಒಕ್ಕೋರಲಿನಿಂದ ಸಹಾಯ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.ನಮ್ಮ ದೇಶದಲ್ಲಿ ಸಹಕಾರಿ ರಂಗ ಮಹತ್ವ ಪಡೆದುಕೊಂಡಿದೆ. ಇದರಿಂದಲೇ ನಮ್ಮ ದೇಶದ ಕಟ್ಟಕಡೆಯ ಮನುಷ್ಯನಿಗೆ ಸಹಾಯಹಸ್ತ ನೀಡಲು ಸಾಧ್ಯವಾಗಿದೆ. ಇದಕ್ಕೆ ನಡೆದಾಡುವ ದೇವರೆನಿಸಿಕೊಂಡ ಸಿದ್ಧೇಶ್ವರ ಸ್ವಾಮೀಜಿ ಮೂರು ಸೂತ್ರಗಳನ್ನು ಹೇಳಿದ್ದಾರೆ. ಸಹಕಾರಿ ರಂಗದಲ್ಲಿ ರಾಜಕೀಯ ತರಬಾರದು, ಜಾತಿ ಇರಬಾರದು ಮತ್ತು ಸಾಲಗಾರನನ್ನು ಗೌರವದಿಂದ ಕಾಣಬೇಕು, ಆಗ ಮಾತ್ರ ಸಹಕಾರಿ ರಂಗ ಬೆಳೆಯುತ್ತದೆ ಎಂದು ಹೇಳಿದ್ದಾರೆ.ಅವರ ಹೇಳಿಕೆಯಂತೆ ನಾನು ಸಹಕಾರಿ ರಂಗದಲ್ಲಿ ಅಳವಡಿಸಿಕೊಂಡಿದ್ದೇನೆ, ಅದರಿಂದ ಪ್ರಗತಿ ಕಂಡಿದ್ದೇನೆ ಎಂದರು. ಕಳೆದ ಒಂದು ಶತಮಾನದ ಹಿಂದೆ ಸಹಕಾರಿ ರಂಗ ಪ್ರಾರಂಭಿಸಿದ ಎಸ್.ಎಸ್.ಪಾಟೀಲರ ಕನಸು ಇಂದು ನನಸಾಗಿದೆ ಎಂದು ನೆನಪಿಸಿಕೊಂಡರು.

ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಸರಕಾರ ಕೆಲವು ಪ್ರಮುಖ ಇಲಾಖೆಗಳನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ಸ್ಥಾಪಿಸಬೇಕೆಂದು ಅವರು ಆಗ್ರಹಿಸಿದರು.ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕಾಂಗ್ರೆಸ್ ಮುಖಂಡ ಯಶವಂತ್ರಾಯಗೌಡ ಪಾಟೀಲ ಮಾತನಾಡಿ, ಇಂಡಿ ತಾಲ್ಲೂಕಿನಲ್ಲಿ 127 ಗ್ರಾಮಗಳಲ್ಲಿ ಕೇವಲ 34 ಗ್ರಾಮಗಳು ಮಾತ್ರ ನೀರಾವರಿಗೆ ಒಳಪಟ್ಟಿವೆ. ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳು ಜಾರಿಯಾದರೆ ಮಾತ್ರ ಇಂಡಿ ತಾಲ್ಲೂಕು ಸಂಪೂರ್ಣ ನೀರಾವರಿಯಾಗುತ್ತದೆ. ಆದರೆ ಬಿಜೆಪಿ ಸರ್ಕಾರ ನೀರಾವರಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.ಡಾ. ಸಂತೋಷ ಬಗಲಿ ಉದ್ಘಾಟಿಸಿದರು. ನ್ಯೂ ಕರ್ನಾಟಕ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಯೂಬ್ ರಾಜೇಸಾಬ್ ಬಾಗವಾನ ಅಧ್ಯಕ್ಷತೆ ವಹಿಸ್ದ್ದಿದ್ದರು. ಅಭಿನವ ಪ್ರಭುಲಿಂಗ ಸ್ವಾಮೀಜಿ ಮತ್ತು ಶಿವಮೂರ್ತಿ ದೇವರು ಸಾನ್ನಿಧ್ಯ ವಹಿಸ್ದ್ದಿದ್ದರು.ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯಾ ದೇಸಾಯಿ, ಪುರಸಭೆಯ ಅಧ್ಯಕ್ಷ ದೇವೇಂದ್ರ ಕುಂಬಾರ, ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುಸಾಹುಕಾರ ಮೇತ್ರಿ, ಗುರನಗೌಡ ಪಾಟೀಲ, ಕಲ್ಲು ದೇಸಾಯಿ, ಅಪ್ಪು ನಾವಿ, ಶಂಕರ ತಾಂಬೆ, ರಾಮನಗೌಡ ಪಾಟೀಲ, ಲಕ್ಷ್ಮಣ ಶಿಂಧೆ, ಸುನೀಲ ಗಣಿ, ಪೀರಮಹಮ್ಮದ್ ಕುಮಸಗಿ, ರಾಜೇಂದ್ರ ಪ್ರಸಾದ ತಿವಾರಿ, ಡಿ.ಶಿರೋಮಣಿ, ಸಾಯಬಣ್ಣ ಹೊಟಗಿ, ಕೌಸರಬಾನು ಮನ್ನಾಬಾಯಿ, ಬದ್ರುನ್ನಿಸಾ ಮಿರಜಕರ ಮತ್ತು ರಮೇಶ ಗೋರೆ ಉಪಸ್ಥಿತರ್ದ್ದಿದರು. ಅಪ್ಪಾಸಾಹೇಬ್ ನಾವಿ ಸ್ವಾಗತಿಸಿದರು. ಎಸ್.ಎನ್. ಕಾಂಬಳೆ ನಿರೂಪಿಸಿದರು. ಶಂಕರ ತಾಂಬೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry