ಗುರುವಾರ , ಮೇ 13, 2021
16 °C

ಕೃಷ್ಣಾ ಪ್ರವಾಹ ಯಥಾಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೃಷ್ಣಾ ನದಿ ಹರಿವಿನಲ್ಲಿ ಬುಧವಾರ ಯಥಾಸ್ಥಿತಿ ಮುಂದುವರಿ ದಿ ದೆ. ನೆರೆಯ ಮಹಾರಾಷ್ಟ್ರ ದಿಂದ 2.27 ಲಕ್ಷ ಕ್ಯೂಸೆಕ್ ಹರಿದು ಬರುತ್ತಿದೆ.ಮಂಗಳವಾರ ಮಹಾರಾಷ್ಟ್ರದಲ್ಲಿ ಕಡಿಮೆಯಾಗಿದ್ದ ಮಳೆ, ಬುಧವಾರ ಮತ್ತೆ ಹೆಚ್ಚಾಗಿದೆ. ಕೊಯ್ನಾದಲ್ಲಿ 111 ಮಿ.ಮೀ, ನವಜಾದಲ್ಲಿ 151 ಮಿ.ಮೀ, ಮಹಾ ಬಳೇಶ್ವರದಲ್ಲಿ 172 ಮಿ.ಮೀ ಹಾಗೂ ವಾರಣಾದಲ್ಲಿ 78 ಮಿ.ಮೀ. ಮಳೆಯಾಗಿದೆ. ಇದು ಆತಂಕಕ್ಕೆ ಕಾರಣ ವಾಗಿದೆ.ಮಲಪ್ರಭಾ ಹಾಗೂ ಹಿರಣ್ಯಕೇಶಿ ನದಿ ನೀರಿನ ಹರಿವಿನಲ್ಲಿ ಕಡಿಮೆಯಾದ ಪರಿ ಣಾಮ ಹುಕ್ಕೇರಿ ತಾಲ್ಲೂಕಿನ ಮೂರು ಸೇತುವೆಗಳು ಸಂಚಾರಕ್ಕೆ ಮುಕ್ತ ವಾಗಿವೆ. ಇನ್ನೂ 18 ಸೇತುವೆಗಳು ನೀರಿನಲ್ಲಿ ಮುಳುಗಿವೆ.ಚಿಕ್ಕೋಡಿ ತಾಲ್ಲೂಕಿನ ಒಂಬತ್ತು, ಅಥಣಿ ತಾಲ್ಲೂಕಿನ ಐದು, ರಾಯಬಾಗ ತಾಲ್ಲೂಕಿನ ಎರಡು, ಖಾನಾಪುರ ಹಾಗೂ ಗೋಕಾಕ ತಾಲ್ಲೂಕಿನ ತಲಾ ಒಂದು ಸೇತುವೆ ನೀರಿನಲ್ಲಿವೆ. ಎರಡು ದಿನ ಬಿಡುವು ನೀಡಿದ್ದ ಮಳೆ ಬುಧ ವಾರ ಮತ್ತೆ ಜಿಲ್ಲೆಯ ಖಾನಾಪುರ ಹಾಗೂ ಬೆಳಗಾವಿ ತಾಲ್ಲೂಕಿನಲ್ಲಿ ಸುರಿಯತೊಡಗಿದೆ.ಚಿಕ್ಕೋಡಿ ವರದಿ: ಕೃಷ್ಣಾ ಹಾಗೂ ಅದರ ಉಪನದಿಗಳ ನೀರಿನ ಮಟ್ಟದಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ. ಮಹಾ ರಾಷ್ಟ್ರದಲ್ಲಿ ಮಳೆ ಹೆಚ್ಚಳವಾ ಗಿರುವುದರಿಂದ ನೀರಿನ ಮಟ್ಟದಲ್ಲಿ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಆದ್ದ ರಿಂದ ನದಿ ತೀರದ ವಸತಿ ಪ್ರದೇಶಗಳ ಜನರು ಸುರ ಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ತಹಸೀಲ್ದಾರ ರಮೇಶ ದೇಸಾಯಿ ಸೂಚಿಸಿದ್ದಾರೆ.ಗೋಕಾಕ ತಾಲ್ಲೂಕಿಗೆ ಕಳಿಸಲಾಗಿದ್ದ, ಕಾರವಾರ ದಿಂದ ಕರೆಯಲಾಗಿದ್ದ ನಾವಿಕರನ್ನು ಕರೆಸಿಕೊಂಡು ಚಿಕ್ಕೋಡಿ ತಾಲ್ಲೂಕಿನಲ್ಲಿ ನಿಯೋಜಿಸಲಾಗಿದೆ. ನ್ಯಾಯ ಬೆಲೆ ಅಂಗಡಿಗಳ ಪಡಿತರ ಧಾನ್ಯಗಳನ್ನು ಮುಂಗಡ ವಾರಿ ಸರಬರಾಜು ಮಾಡಲಾಗುತ್ತಿದೆ.ಉಪ ವಿಭಾಗಾಧಿಕಾರಿ ಪ್ರಿಯಾಂಕಾ ಮೇತಿ ಫಾನ್ಸಿಸ್ ಹಾಗೂ ತಹಸೀಲ್ದಾರ ರಮೇಶ ದೇಸಾಯಿ, ತಾಲ್ಲೂಕಿನ ಕಲ್ಲೋಳ, ಯಕ್ಸಂಬಾ, ಮಾಂಜರಿ, ಇಂಗಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರಾಯಬಾಗ ವರದಿ: ರಾಯಬಾಗ ತಾಲ್ಲೂಕಿನಲ್ಲಿ ಕೃಷ್ಣಾ ನದಿಯು ಅಪಾ ಯದ ಮಟ್ಟದಲ್ಲಿ ಹರಿಯುತ್ತಿದೆ.

ನೀರಿನ ಮಟ್ಟದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಕುಡಚಿ ಸೇತುವೆ ನೀರಿ ನಲ್ಲಿ ಮುಳುಗಿದೆ. ನದಿ ತೀರದ ಗ್ರಾಮಗಳಲ್ಲಿ ಸಂಚರಿಸಿದ ತಹಸೀಲ್ದಾರ ಪ್ರವೀಣ ಬಾಗೇವಾಡಿ, ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ರು. ತಾಲ್ಲೂಕಿನ ಏಳು ಗ್ರಾಮಗಳಲ್ಲಿ ಬೋಟುಗಳನ್ನು ಈಜು ಪರಿಣಿತರ ಸಮೇತ ಸುವ್ಯವಸ್ಥೆಯಲ್ಲಿ ಇಡಲಾಗಿದೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಗ್ಗು ಪ್ರದೇಶದ ಜನರಿಗೆ ತಹಸೀಲ್ದಾರ ಮನವಿ ಮಾಡಿಕೊಂಡಿದ್ದಾರೆ.ಮಲಪ್ರಭಾ ಆಣೆಕಟ್ಟು ಪೂರ್ಣ ಭರ್ತಿ

ಮುನವಳ್ಳಿ (ತಾ.ಸವದತ್ತಿ):
ಮಲಪ್ರಭಾ ನದಿಯ ನವಿಲುತೀರ್ಥ ಆಣೆಕಟ್ಟು ಪೂರ್ಣ ಪ್ರಮಾಣದಲ್ಲಿ ಭರ್ತಿಯಾ ಗಿದ್ದು, ಖಾನಾಪೂರ ತಾಲೂಕಿನಲ್ಲಿ ಸತತ ವಾಗಿ ಮಳೆ ಬೀಳುತ್ತಿರುವುದರಿಂದ 5.5 ಸಾವಿರ ಕ್ಯೂಸೆಕ್ ಒಳಹರಿವು ಬರುತ್ತಿದೆ. ಹೆಚ್ಚುವರಿಯಾದ 5.5 ಸಾವಿರ ಕ್ಯೂಸೆಕ್ ನೀರನ್ನು ಮೂರು ಗೇಟುಗಳ ಮೂಲಕ ಮತ್ತು ಎಡದಂಡೆ ಬಲದಂಡೆ ಕಾಲುವೆ ಗಳಿಂದ ಹೊರಬಿಡಲಾಗುತ್ತಿದ್ದು, ಮುನವಳ್ಳಿಯ ಸೇತುವೆ ಮೇಲೆ ನೀರು ಹರಿದು ಹೋಗುತ್ತಿದೆ.ಒಳಹ ರಿವು ಹೆಚ್ಚಾದಲ್ಲಿ ಮುನವಳ್ಳಿಯ ಸೇತುವೆ ನೀರಿನಿಂದ ಮುಳುಗಿ ರಾಜ್ಯ ಹೆದ್ದಾರಿ ಸಂಚಾರ ಬಂದ್ ಆಗುವ ಸಾಧ್ಯತೆ ಇದ್ದು, ಯಾವು ದೇ ಕಾರಣಕ್ಕೂ ನದಿಯ ದಡದ ಮೇಲೆ ಇರುವ ಎಲ್ಲ ಹಳ್ಳಿಗಳ ನಿವಾಸಿಗಳು ಸುರ ಕ್ಷಿತ ಸ್ಥಳಕ್ಕೆ ಹೋಗಲು ಸೂಚನೆ ನೀಡಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.