ಕೃಷ್ಣೆಗೆ ಒಳ ಹರಿವು ಹೆಚ್ಚಳ

ಮಂಗಳವಾರ, ಜೂಲೈ 16, 2019
28 °C

ಕೃಷ್ಣೆಗೆ ಒಳ ಹರಿವು ಹೆಚ್ಚಳ

Published:
Updated:

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರದಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಭಾನುವಾರದಿಂದ ಆಲಮಟ್ಟಿ ಜಲಾಶಯದ ಹೊರಹರಿವನ್ನು ಹೆಚ್ಚಿಸಲಾಗಿದೆ.ಜಲಾಶಯಕ್ಕೆ ಭಾನುವಾರ ಬೆಳಿಗ್ಗೆ 1,00,186 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅದು ಸಂಜೆಯವರೆಗೆ ಹೆಚ್ಚಾಗುವ ಸಾಧ್ಯತೆ ಇದ್ದದ್ದರಿಂದ ಜಲಾಶಯದ 26 ಗೇಟ್‌ಗಳ ಪೈಕಿ 23 ಗೇಟ್‌ಗಳನ್ನು ತೆಗೆದು 87,499 ಕ್ಯೂಸೆಕ್ ಹಾಗೂ ಬಲಭಾಗದ ಕೆಪಿ ಸಿಎಲ್ ಮೂಲಕ 42,000 ಕ್ಯೂಸೆಕ್ ಸೇರಿದಂತೆ ಒಟ್ಟಾರೇ 1,29,499 ಕ್ಯೂಸೆಕ್ ನೀರನ್ನು ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಬಿಡಲಾ ಯಿತು. ಅಲ್ಲದೇ 515 ಕ್ಯೂಸೆಕ್ ನೀರನ್ನು ಕಾಲುವೆಗೆ ಬಿಡಲಾಗುತ್ತಿದೆ. ಒಟ್ಟಾರೇ ಹೊರ ಹರಿವು 1,30,014 ಕ್ಯೂಸೆಕ್ ಇದೆ.ಶನಿವಾರದಿಂದ ಜಲಾಶಯದ 11 ಗೇಟ್‌ಗಳನ್ನು ತೆಗೆದು ನೀರು ಬಿಡಲಾಗುತ್ತಿತ್ತು. ಭಾನುವಾರ ಮಧ್ಯಾಹ್ನದಿಂದ 23 ಗೇಟ್‌ಗಳನ್ನು 0.8 ಮೀ.ಎತ್ತರಿಸಿ ನೀರು ಬಿಡಲಾಯಿತು.ಮಹಾರಾಷ್ಟ್ರ ರಾಜ್ಯ ಕೊಯ್ನೊ ನದಿಯಿಂದ 20 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಅಲ್ಲದೇ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಾಳೆ ಒಳಗೆ ಒಳಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂಬ ಮುನ್ಸೂಚನೆಯ ಹಿನ್ನಲೆಯಲ್ಲಿ ಹೊರಹರಿವನ್ನು ಹೆಚ್ಚಿಸ ಲಾಗಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೇ ಪ್ರಮಾಣದ ನೀರನ್ನು ನಾರಾಯಣಪುರ ಕ್ಕೆ ಬಿಡಲಾಗುತ್ತಿದ್ದರಿಂದ ಆಲಮಟ್ಟಿ ಮುಂಭಾಗದ ಕೃಷ್ಣಾ ತಟದ ಜಮೀನಿಗೆ ಪ್ರವಾಹದ ಭೀತಿ ಕಡಿಮೆ   ಎನ್ನಲಾಗಿದೆ.519.6 ಮೀಟರ್ ಎತ್ತರದ ಆಲಮಟ್ಟಿ ಜಲಾಶಯದಲ್ಲಿ ಭಾನುವಾರ 518.45 ಮೀಟರ್ ವರೆಗೆ ನೀರು ಸಂಗ್ರಹವಾಗಿದ್ದು, 123 ಗರಿಷ್ಠ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 105 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದೆ.ನೀರು ಧುಮ್ಮಕ್ಕಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತಿದೆ.  ಜಲಾಶಯದ ಮುಂಭಾಗದ ಕೃಷ್ಣಾ ನದಿಯಲ್ಲಿ ಈಗ ಎಲ್ಲಿ ನೋಡಿದರೂ ನೀರೆ ನೀರು ಪುಟಿ ಯುವ ಸುಂದರ ದೃಶ್ಯ ಕಾಣುತ್ತಿದೆ.ವಿದ್ಯುತ್ ಉತ್ಪಾದನೆ: 290 ಮೆಗಾ ವಾಟ್ ಗರಿಷ್ಠ ಉತ್ಪಾದನೆಯ ಆಲ ಮಟ್ಟಿ ವಿದ್ಯುತ್ ಉತ್ಪಾದನಾ ಘಟಕಕ್ಕೆ 42,000 ಕ್ಯೂಸೆಕ್ ನೀರು ಹರಿದು ಬಿಟ್ಟಿದ್ದರಿಂದ ಅಲ್ಲಿನ ಎಲ್ಲಾ ಆರು ಘಟಕಗಳು ಕಾರ್ಯಾರಂಭ ಮಾಡು ತ್ತಿದ್ದು, ಅಲ್ಲಿಂದ 266 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.ಆಲಮಟ್ಟಿ ಜಲಾಶಯದ ಗರಿಷ್ಠ ಎತ್ತರ 519.6 ಮೀಟರ್ ಎತ್ತರದಿಂದ ಸುಮಾರು 45,000 ಕ್ಯೂಸೆಕ್ ನೀರು ಹರಿಸಿದಾಗ ಮಾತ್ರ ಇದರ ಗರಿಷ್ಠ 290 ಮೆಗಾವಾಟ್ ವಿದ್ಯುತ್ ಉತ್ಪಾದಿಸ ಬಹುದು, ಆದರೇ ಜಲಾಶಯ ಎತ್ತರ ಸದ್ಯ 518.45 ಮೀಟರ್ ಇರುವುದರಿಂದ ವಿದ್ಯುತ್ ಉತ್ಪಾದನೆ ಸ್ವಲ್ಪ ಕಡಿಮೆಯಾಗಿದೆ ಎಂದು ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಬಿಸ್ಲಾಪುರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry