ಕೃಷ್ಣ ಫೌಂಡೇಷನ್ ನೆರವು

7

ಕೃಷ್ಣ ಫೌಂಡೇಷನ್ ನೆರವು

Published:
Updated:

ಕಟ್ಟಿನಮನೆ (ನರಸಿಂಹರಾಜಪುರ): ಗ್ರಾಮೀಣ ಭಾಗದ ಮಕ್ಕಳ ವಿದ್ಯಾ ಭ್ಯಾಸಕ್ಕೆ ಕೃಷ್ಣ ಫೌಂಡೇಷನ್ ವತಿಯಿಂದ ನೆರವು ನೀಡಲಾಗುವುದು ಎಂದು ಸಾಗರೋತ್ತರ ಸಚಿವಾಲಯದ ವಿದೇಶಿ ಸಲಹೆಗಾರ್ತಿ ಆರತಿ ಕೃಷ್ಣ ತಿಳಿಸಿದರು.ತಾಲ್ಲೂಕಿನ ಕಟ್ಟಿನಮನೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳು ಮತ್ತು ಪೋಷಕರೊಂದಿಗೆ ಸೋಮವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಟ್ಟಿನಮನೆ ಗ್ರಾಮದ ಪ್ರೌಢಶಾಲೆ ಯಲ್ಲಿ ವ್ಯಾಸಂಗ ಮಾಡುತ್ತಿರುವರು ಬಹುತೇಕ ಕೂಲಿ ಕಾರ್ಮಿಕರ ಮಕ್ಕಳು. ಇವರಿಗೆ ಸರ್ಕಾರದಿಂದ ನೀಡುವ ಸಮವಸ್ತ್ರ ಮಾತ್ರ ಇದೆ. ಹಾಗಾಗಿ ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಶೀಘ್ರದಲ್ಲೇ ಸಮವಸ್ತ್ರ ವಿತರಿಸಲಾ ಗುವುದು. ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನೋಟ್ ಪುಸ್ತಕವನ್ನೊಳಗೊಂಡ ಕಿಟ್ ನೀಡಲಾಗುವುದು. ಅಲ್ಲದೆ ಶಾಲೆಯಲ್ಲಿ ಉತ್ತಮ ಹಾಜರಾತಿ ಹೊಂದಿರುವ ಮಕ್ಕಳಿಗೆ ಪ್ರೋತ್ಸಾಹಧನ ಹಾಗೂ ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದು ಹೇಳಿದರು.ಪೋಷಕರಾದ ಶಾರದಮ್ಮ ಮಾತ ನಾಡಿ, ಮಲೆನಾಡಿನ ಭಾಗದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲು ಮುಂದೆ ಬಂದಿರುವುದು ಬಡ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಂಕರನಾರಾಯಣ ಮಾತನಾಡಿ, ಕಟ್ಟಿನ ಮನೆ ಗ್ರಾಮದಲ್ಲಿ ಶಾಸಕರ ಪ್ರಯತ್ನ ದಿಂದ ಪ್ರೌಢಶಾಲೆ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾ ಭ್ಯಾಸಕ್ಕೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.ಶಾಲಾ ಮುಖ್ಯೋಪಾಧ್ಯಾಯ ಪುಟ್ಟ ನಾಯಕ್, ಶಿಕ್ಷಕ ನಟರಾಜ್, ಎಸ್‌ಡಿಎಂಸಿ ಸದಸ್ಯರಾದ ಆನಂದ ಕುಮಾರ್, ಪ್ರಭಾಕರ್ ಗೌಡ, ಪದ್ಮಾವತಿ, ವಿನಯ, ದಿಕ್ಷಿತ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry