ಕೃಷ್ಣ ವಿರುದ್ಧ ಟೀಕೆಗೆ ಆಕ್ಷೇಪ

ಶುಕ್ರವಾರ, ಜೂಲೈ 19, 2019
24 °C

ಕೃಷ್ಣ ವಿರುದ್ಧ ಟೀಕೆಗೆ ಆಕ್ಷೇಪ

Published:
Updated:

ಬೆಂಗಳೂರು: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರ ಬಗ್ಗೆ ಬಿಜೆಪಿ ಸದಸ್ಯರೊಬ್ಬರು ಬಳಸಿದ ಪದ ಶುಕ್ರವಾರ ನಡೆದ ಪಾಲಿಕೆ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಕೆಲಕಾಲ ವಾಗ್ವಾದಕ್ಕೆ ಕಾರಣವಾಯಿತು.2012-13ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾಜಿ ಉಪ ಮೇಯರ್ ಎಸ್. ಹರೀಶ್ ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿದ ಚಿಕ್ಕಪೇಟೆ ವಾರ್ಡ್‌ನ ಬಿಜೆಪಿ ಸದಸ್ಯ ಎ.ಎಲ್. ಶಿವಕುಮಾರ್, ಕೇಂದ್ರ ಸಚಿವ ಎಸ್.ಎಂ. ಕೃಷ್ಣ ಕುರಿತು ಬಳಸಿದ ಪದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರನ್ನು ಕೆರಳಿಸಿತು.ಒಮ್ಮೆಲೇ ಎದ್ದು ನಿಂತ ಕಾಂಗ್ರೆಸ್ ಸದಸ್ಯರು ಶಿವಕುಮಾರ್ ವಿರುದ್ಧ ತಿರುಗಿ ಬಿದ್ದರು. ಅತ್ತ ಬಿಜೆಪಿ ಸದಸ್ಯರು ಶಿವಕುಮಾರ್ ಬೆಂಬಲಕ್ಕೆ ನಿಂತರು. ಇದರಿಂದ ಕೆಲಕಾಲ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.ಸದಸ್ಯ ಶಿವಕುಮಾರ್ ಬಳಸಿದ ಪದವನ್ನು ಕಡತದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಲು ಮುಂದಾದಾದರು. `ಈ ಸದನದ ಸದಸ್ಯರಲ್ಲದವರ ಬಗ್ಗೆ ಯಾರೇ ಆಗಲಿ ಟೀಕೆ ಮಾಡುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸಚಿವರ ಬಗ್ಗೆ ಬಳಸಿದ ಪದವನ್ನು ಕಡತದಿಂದ ತೆಗೆದು ಹಾಕಿ~ ಎಂದು ಮೇಯರ್ ಸಿಬ್ಬಂದಿಗೆ ಸೂಚಿಸಿದರು.ಬಿಜೆಪಿ ಸದಸ್ಯರ ಆಕ್ಷೇಪ: ಸದಸ್ಯ ಶಿವಕುಮಾರ್ ಬಳಸಿದ ಪದವನ್ನು ಕಡತದಿಂದ ವಾಪಸು ತೆಗೆದುಕೊಳ್ಳಲು ಮೇಯರ್ ಡಿ. ವೆಂಕಟೇಶಮೂರ್ತಿ ಆದೇಶಿಸಿದ ಕ್ರಮದ ಬಗ್ಗೆ ಬಿಜೆಪಿಯ ಹಿರಿಯ ಸದಸ್ಯ ಹಾಗೂ ಮಾಜಿ ಮೇಯರ್ ಎಸ್.ಕೆ. ನಟರಾಜ್ ಆಕ್ಷೇಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry