ಬುಧವಾರ, ಜೂನ್ 16, 2021
21 °C

ಕೆಂಗೇರಿಯಲ್ಲಿ ಶೃಂಗೇರಿ ಶಾರದಾಂಬೆ, ಚಂದ್ರಮೌಳೀಶ್ವರ ವಿಗ್ರಹ ಪ್ರತಿಷ್ಠಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಂಕರಾಚಾರ್ಯರ ಸೇವಾ ಸಮಿತಿಯ ವತಿಯಿಂದ ನಗರದ ಕೆಂಗೇರಿ ಉಪನಗರದಲ್ಲಿರುವ ಶಂಕರಮಠದಲ್ಲಿ ಶಾರದಾಂಬಾ, ಚಂದ್ರಮೌಳೀಶ್ವರ ಮತ್ತು ಶಕ್ತಿಗಣಪತಿ ವಿಗ್ರಹದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಮಹೋತ್ಸವವು ಸೋಮವಾರ ನಡೆಯಿತು.ಮಹೋತ್ಸವವನ್ನು ನೆರವೇರಿಸಿ ಮಾತನಾಡಿದ ಶೃಂಗೇರಿಯ ಭಾರತೀತೀರ್ಥ ಸ್ವಾಮೀಜಿ, `ಪ್ರಸ್ತುತ ಭಾರತದಲ್ಲಿ ವೇದಾಧ್ಯಯನ ಮತ್ತು ಸನಾತನ ಸಂಸ್ಕೃತಿ ಉಳಿದುಕೊಂಡಿದ್ದರೆ ಅದಕ್ಕೆ ಶಂಕರಾಚಾರ್ಯರ ಪರಿಶ್ರಮವೇ ಕಾರಣ. ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿರುವುದು ಬಹಳ ಸಂತೋಷದ ವಿಚಾರ~ ಎಂದು ಹೇಳಿದರು.`ಧರ್ಮವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಶಂಕರಾಚಾರ್ಯರ ಪ್ರಯತ್ನ ಸದಾ ನೆನಪಿನಲ್ಲಿಡುವಂಥದ್ದು. ಅವರೊಂದಿಗೆ ಶಾರದೆ ಮತ್ತು ಶಕ್ತಿಗಣಪತಿಯ ವಿಗ್ರಹಗಳು ಪ್ರತಿಷ್ಠಾಪನೆಗೊಂಡಿವೆ. ಈ ರೀತಿಯ ಶಕ್ತಿಯುತ ದೇವಳದಲ್ಲಿ ಆಸ್ತಿಕರಿಗೆ ರಕ್ಷಣೆ ದೊರೆಯಲಿದೆ~ ಎಂದರು.`ದೇವಸ್ಥಾನದ ಪ್ರತಿಷ್ಠಾನ ಮತ್ತು ಶಕ್ತಿ ದೇವತೆಗಳ ಸ್ಥಾಪನೆಯು ಹಿಂದೂ ಧರ್ಮವನ್ನು ಮರುಸ್ಥಾಪಿಸಲು ಅವಕಾಶ ಮಾಡಿಕೊಡುತ್ತದೆ. ಶಾರದೆ ಮತ್ತು ಶಕ್ತಿ ಗಣಪತಿಯ ವಿಗ್ರಹಗಳು ಒಂದೇ ಕಡೆ ಸ್ಥಾಪನೆಗೊಂಡಿರುವುದು ಈ ಭಾಗದ ಜನರ ಅದೃಷ್ಟವೇ ಸರಿ~ ಎಂದರು.

 

ಸಚಿವೆ ಶೋಭಾ ಕರಂದ್ಲಾಜೆ, ಪಾಲಿಕೆ ಸದಸ್ಯರಾದ ರಾಜಣ್ಣ, ವೀಣಾ ನಾಗರಾಜು, ಕರ್ನಾಟಕ ವಸತಿ ಮಹಾಮಂಡಳಿಯ ಅಧ್ಯಕ್ಷ ಎಚ್.ಟಿ.ಸೋಮಶೇಖರ್ ಇತರರು ಉಪಸ್ಥಿತರಿದ್ದರು. ಶೃಂಗೇರಿ ಶಾರದಾಂಬಾ, ಚಂದ್ರಮೌಳೀಶ್ವರ ಮತ್ತು ಶಕ್ತಿಗಣಪತಿ ವಿಗ್ರಹದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

 
ನಿವೇಶನದ ಮೌಲ್ಯ ರೂ.1 ಕೋಟಿ

ಕ್ಯಾಪ್ಟನ್ ಅನ್ನಪೂರ್ಣ ಅವರು ಕೆಂಗೇರಿ ಉಪನಗರದಲ್ಲಿರುವ ಶಂಕರಮಠದ ಸ್ಥಾಪನೆಗೆ 50/80 ಅಡಿ ನಿವೇಶನವನ್ನು ದಾನ ಮಾಡಿದ್ದಾರೆ. ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, `ನಿವೇಶನದ ಅಂದಾಜು ಬೆಲೆ ಒಂದು ಕೋಟಿ ರೂಪಾಯಿ ಇರಬಹುದು. ದೇವರಲ್ಲಿ ನಂಬಿಕೆ ಮತ್ತು ಈ ಭಾಗದಲ್ಲಿ ಶಂಕರ ಮಠ ಸ್ಥಾಪನೆಯಾಗಬೇಕೆಂಬ ಉದ್ದೇಶದಿಂದ ದಾನ ಮಾಡಿದ್ದೇನೆ~ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.