ಶುಕ್ರವಾರ, ನವೆಂಬರ್ 22, 2019
26 °C

`ಕೆಂಟ್ ಆರ್‌ಒ' ಸುಪ್ರೀಂ

Published:
Updated:

ಬೆಂಗಳೂರು: ನೀರು ಶುದ್ಧೀಕರಣ ಸಾಧನ ತಯಾರಿಸುವ `ಕೆಂಟ್ ಆರ್‌ಒ ಸಿಸ್ಟಂ ಲಿ.' ಸ್ವಲ್ಪ ನೀರನ್ನೂ ಪೋಲಾಗಿಸದ `ಕೆಂಟ್ ಸುಪ್ರೀಂ'  ಉಪಕರಣವನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿದೆ.ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ನೂತನ ಉಪಕರಣ ಬಿಡುಗಡೆ ಮಾಡಿದ `ಕೆಂಟ್' ಅಧ್ಯಕ್ಷ ಮಹೇಶ್ ಗುಪ್ತಾ, ಈ ಶುದ್ಧೀಕರಣ ಸಾಧನ `ಸುಪ್ರೀಂ' ನಮ್ಮದೇ ಸಂಸ್ಥೆಯ ಸಂಶೋಧನೆ ಫಲ. ಇದಕ್ಕೆ ಹಕ್ಕುಸ್ವಾಮ್ಯವನ್ನೂ ಪಡೆಯಲಾಗಿದೆ. ಈ ಉಪಕರಣ ನೀರಿನಲ್ಲಿರುವ ಅರ್ಸೆನಿಕ್ ಮೊದಲಾದ ಹಾನಿಕಾರಕ ರಾಸಾಯನಿಕಗಳನ್ನು ಪೂರ್ಣವಾಗಿ ಶೋಧಿಸುತ್ತದೆ. ಜತೆಗೆ ಸ್ವಲ್ಪ(ಶೇ 0ರಷ್ಟು) ನೀರೂ ವ್ಯರ್ಥವಾಗದಂತೆ ನೋಡಿಕೊಳ್ಳುತ್ತದೆ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)