ಸೋಮವಾರ, ಜನವರಿ 20, 2020
20 °C

ಕೆಂಪು ದೀಪ ತೆಗೆಸಿದ ಕಾಶ್ಮೀರ ಡಿಜಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು (ಐಎಎನ್‌ಎಸ್‌): ಸರ್ಕಾರಿ ವಾಹನಗಳ ಮೇಲಿನ ಕೆಂಪು ದೀಪ ದುರ್ಬಳಕೆಯಾಗುತ್ತಿರುವ ಕುರಿತು ಸುಪ್ರೀಂಕೋರ್ಟ್ ತೀವ್ರ ಅಸಮಾ­ಧಾನ­ ವ್ಯಕ್ತಪಡಿಸಿದ ಮರುದಿನವೇ ಜಮ್ಮು ಕಾಶ್ಮೀರ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ)  ಅಶೋಕ್‌ ಪ್ರಸಾದ್‌ ತಮ್ಮ ವಾಹ­ನದ ಮೇಲಿನ ಕೆಂಪು ದೀಪವನ್ನು ತೆಗೆಸುವ ಮೂಲಕ ಮಾದರಿ ಎನಿಸಿದ್ದಾರೆ.ರಾಜ್ಯಗಳಲ್ಲಿನ ಪೊಲೀಸ್‌ ವಾಹನಗಳ ಮೇಲೆ ಅಳವಡಿಸಿರುವ ಕೆಂಪು ದೀಪಗಳನ್ನೂ ತೆಗೆಯಲು ಡಿಜಿಪಿ  ಆದೇಶ ನೀಡಿದ್ದಾರೆ.

ಸುಪ್ರೀಂಕೋರ್ಟ್ ಮಂಗಳವಾರ ಆದೇಶಿಸಿದ್ದರ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

 

ಪ್ರತಿಕ್ರಿಯಿಸಿ (+)