ಶುಕ್ರವಾರ, ಡಿಸೆಂಬರ್ 13, 2019
20 °C

ಕೆಂಪು ಪಾಳೇಗಾರ ಪ್ರಚಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಪು ಪಾಳೇಗಾರ ಪ್ರಚಂಡ

ಕಠ್ಮಂಡು (ಪಿಟಿಐ): ನೇಪಾಳ ರಾಜಸತ್ತೆಯ ವಿರುದ್ಧ ದಶಕದ ಕಾಲ ಗೆರಿಲ್ಲಾ ಹೋರಾಟ ನಡೆಸಿದ್ದ ಮಾವೋವಾದಿ ನಾಯಕ ಪ್ರಚಂಡ ಕಠ್ಮಂಡು ಹೃದಯಭಾಗದಲ್ಲಿರುವ ಐಷಾರಾಮಿ ಬಂಗಲೆಗೆ ಸ್ಥಳಾಂತರಗೊಂಡಿದ್ದು, ನೇಪಾಳ ಮಾಧ್ಯಮಗಳು ಪ್ರಚಂಡ ಅವರ ಈ ನಡೆಯನ್ನು ತೀವ್ರವಾಗಿ ಖಂಡಿಸಿವೆ.

ಪ್ರಚಂಡ ಅವರ ಮೇಲೆ ವಾಗ್ದಾಳಿ ನಡೆಸಿರುವ ಸ್ಥಳೀಯ ಮಾಧ್ಯಮಗಳು ಇದು `ಕೆಂಪು ಪಾಳೇಯಗಾರಿಕೆ~ಗೆ ಅತ್ಯುತ್ತಮ ಉದಾಹರಣೆ ಎಂದು ಜರಿದಿವೆ.

23.1 ಲಕ್ಷ ಡಾಲರ್ ಮೌಲ್ಯದ ಈ ಬಂಗಲೆ 1,500 ಚ. ಮೀ. ವಿಸ್ತಾರ ಹೊಂದಿದೆ. ಕಠ್ಮಂಡುವಿನ ಮಹಾರಾಜ್‌ಗಂಜ್ ಪ್ರದೇಶದಲ್ಲಿರುವ ಈ ಮನೆ  ನೇಪಾಳದ ರಾಷ್ಟ್ರಪತಿ ಭವನ, ಪ್ರಧಾನಿ ನಿವಾಸ ಹಾಗೂ ಮಾಜಿ ದೊರೆ ಗ್ಯಾನೇಂದ್ರ ಅವರ ನಿರ್ಮಲ್ ನಿವಾಸಗಳಿಂದ ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ.

ಪ್ರತಿಕ್ರಿಯಿಸಿ (+)