ಶುಕ್ರವಾರ, ಮೇ 7, 2021
19 °C

ಕೆಂಪೇಗೌಡ ಪ್ರಶಸ್ತಿ ಪ್ರಕಟ: ವಿದ್ವಾನ್ ಶ್ರೀನಿವಾಸ್ ಸೇರಿ 45 ಮಂದಿಗೆ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಡಪ್ರಭು ಕೆಂಪೇಗೌಡ ದಿನಾಚರಣೆ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನೀಡಲಿರುವ ವಾರ್ಷಿಕ ಕೆಂಪೇಗೌಡ ಪ್ರಶಸ್ತಿಗೆ ಚಿಂತಲಪಲ್ಲಿ ಆಸ್ಥಾನ ವಿದ್ವಾನ್ ಶ್ರೀನಿವಾಸ್ ಸೇರಿದಂತೆ ವಿವಿಧ ಕ್ಷೇತ್ರದ 45 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ.ಇದೇ 6ರಂದು ಪಾಲಿಕೆಯಲ್ಲಿ ನಡೆಯುವ ನಾಡಪ್ರಭು ಕೆಂಪೇಗೌಡ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ರೂ 25 ಸಾವಿರ, ಕೆಂಪೇಗೌಡ ಸ್ಮರಣಿಕೆ, ಪ್ರಶಸ್ತಿ ನೀಡಲಾಗುವುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.ಪ್ರಶಸ್ತಿ ಪುರಸ್ಕೃತರ ವಿವರ ಇಲ್ಲಿದೆ;

ಸಮಾಜಸೇವೆ: ಎಂ.ಕೆ. ರಾಮಪ್ಪ, ಕೆ.ಟಿ. ಚಂದ್ರು, ಎಂ. ಕಾಶಿ, ಸಿ.ಎಸ್. ರಾಧಾಕೃಷ್ಣ, ಬಿ.ಎ. ರಾಮಯ್ಯ, ಎಚ್. ಕೋದಂಡರಾಮಯ್ಯ, ಮಾಸ್ಟರ್ ನಟರಾಜ್, ಪಿ.ಕೆ.ಪಾಲ್.ಕ್ರೀಡೆ: ರಘು, ಕುಸ್ತಿಪಟು ಮಹಮ್ಮದ್ ಫಯಾಜ್ ಅಹ್ಮದ್, ಎ.ವಿ. ಶ್ರೀನಿವಾಸ ಗೌಡ, ಪೂರ್ವಿತಾ ಎಸ್. ರಾಮ್, ರಾಮಚಂದ್ರ ರಾವ್ ಸುಧಾಕರ್, ಧನಲಕ್ಷ್ಮಿ ಎಸ್.ಪಿ., ಪ್ರೊ.ಎಂ.ಜೆ. ಸುಂದರ್ ರಾಮ್, ಎನ್. ವಜ್ರಪ್ಪ, ಮಾಸ್ಟರ್ ನಿಖಿಲ್.ಶಿಕ್ಷಣ: ಡಾ. ಪಟೇಲ್ ಅಹ್ಮದ್ ಇಲಿಯಾಸ್, ಜೈನ್ ಶಿಕ್ಷಣ ಸಮೂಹದ ಅಧ್ಯಕ್ಷ ಚೆನ್‌ರಾಜ್ ಜೈನ್. ವೈದ್ಯಕೀಯ: ಡಾ.ಟಿ.ಎಚ್. ಅಂಜನಪ್ಪ, ಡಾ.ಎಂ. ಜಗದೀಶ್.ರಂಗಭೂಮಿ/ ಕಿರುತೆರೆ: ಎಸ್.ರಾಜು, ಶಂಕರ್ ಭಟ್, ಎನ್. ಮುನಿ ಕೆಂಪಣ್ಣ.ಪರಿಸರ: ಆರ್.ಚಂದ್ರಶೇಖರ್.   ಬಾಲಪ್ರತಿಭೆ: ಪೂಜಿತ, ದಿಯಾ, ಸೋಹನ್ ರಾಜಶೇಖರ್.ಸಂಗೀತ/ ಸಾಂಸ್ಕೃತಿಕ: ವಿದ್ವಾನ್ ಶ್ರೀನಿವಾಸ್, ಡಾ. ಸುಪರ್ಣ ರವಿಶಂಕರ್, ವಿ.ಎಂ. ರಾಮಯ್ಯ.ವಾಸ್ತುತಜ್ಞ: ರಮೇಶ್ ಕಾಮತ್.ಮಹಿಳಾ ಸಬಲೀಕರಣ: ಡಾ.ಜಿ.ಎಸ್. ಸಂಗೀತ.ಶಿಲ್ಪಕಲೆ: ರಘುರಾಮ್ ಯಾದವ್.ಕಲೆ (ಅಕ್ಕಿಕಾಳು ವಿಶಿಷ್ಟ ಕಲೆ): ಶಿವಣ್ಣ ಎನ್.ಜಾನಪದ: ಡಾ.ಎಂ.ಬೈರೇಗೌಡ, ನಿರಂಜನಮೂರ್ತಿ.ಸಾಹಿತ್ಯ: ಸವಿತಾ ಶ್ರೀನಿವಾಸ್.ದೇಹದಾರ್ಢ್ಯ: ಶಂಕರ್ ಎಸ್.ವಕೀಲ ವೃತ್ತಿ: ಜಯಪ್ರಕಾಶ್.ಪೊಲೀಸ್ ಸೇವೆ: ಇನ್ಸ್‌ಪೆಕ್ಟರ್‌ಗಳಾದ ಬಾಬು ನರೋನ, ರವಿಶಂಕರ್.ಮಾಧ್ಯಮ: ಕೆ.ಎಸ್. ಜಗನ್ನಾಥ್, ಆರ್.ಟಿ. ವಿಠಲಮೂರ್ತಿ, ಆರ್.ಎಚ್. ನಟರಾಜ್.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.