ಕೆಂಬಣ್ಣದ ಮಳೆ ನೀರು...!

7

ಕೆಂಬಣ್ಣದ ಮಳೆ ನೀರು...!

Published:
Updated:
ಕೆಂಬಣ್ಣದ ಮಳೆ ನೀರು...!

ಮಡಿಕೇರಿ: ನಗರದಲ್ಲಿ ಮಂಗಳವಾರ ಬೆಳಿಗ್ಗೆ ಸುರಿದ ಮಳೆಯ ನೀರು ಕೆಂಬಣ್ಣ ಮಿಶ್ರಿತವಾಗಿದ್ದು, ನಾಗರಿಕರಲ್ಲಿ ಕುತೂಹಲ ಸೃಷ್ಟಿಸಿತು.ನಗರದ ಹೊಸಬಡಾವಣೆ, ಭಗವತಿ ನಗರ, ಆಜಾದ್‌ನಗರ, ಮಹದೇವಪೇಟೆ, ಜಿಲ್ಲಾ ಸಶಸ್ತ್ರ ಪೊಲೀಸರ ವಸತಿ ಗೃಹ ಪ್ರದೇಶ, ಮುಂತಾದ ಕಡೆಗಳಲ್ಲಿ ಮಳೆಯ ನೀರು ಕೆಂಬಣ್ಣದ್ದಾಗಿತ್ತೆಂದು ಸ್ಥಳೀಯರು ತಿಳಿಸ್ದ್ದಿದಾರೆ.ತಮಗಾದ ಅನುಭವವನ್ನು ಜನರು ಸ್ನೇಹಿತರಿಗೆ, ಪರಿಚಯಸ್ಥರಿಗೆ ಮೊಬೈಲ್ ಮೂಲಕ ತಿಳಿಸುತ್ತಿದ್ದುದು ಕಂಡುಬಂದಿತು.ಹೀಗಾಗಿ ಕೆಲ ಸಮಯದಲ್ಲಿಯೇ ಬಹುತೇಕ ನಗರವಾಸಿಗಳಿಗೆ ಈ ವಿಷಯ ತಲುಪಿ, ಹಲವಾರು ಜನರು ಈ ನೀರನ್ನು ಬಾಟಲುಗಳಲ್ಲಿ ತುಂಬಿಸಿಟ್ಟುಕೊಂಡರು.ಮಡಿಕೇರಿ ಸೇರಿದಂತೆ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿಯೂ ಇಂತಹದ್ದೇ ಮಳೆ ನೀರು ಸುರಿದಿದೆ ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry