ಕೆ.ಆರ್.ಪುರ: ಮನೆಗೆ ನುಗ್ಗಿದ ಮಳೆ ನೀರು

7

ಕೆ.ಆರ್.ಪುರ: ಮನೆಗೆ ನುಗ್ಗಿದ ಮಳೆ ನೀರು

Published:
Updated:

ಕೃಷ್ಣರಾಜಪುರ: ಮಂಗಳವಾರ ರಾತ್ರಿ ಸುರಿದ ಸತತ ಮಳೆಯಿಂದಾಗಿ ವಿವಿಧ ಬಡಾವಣೆಗಳ ನೂರಕ್ಕೂ ಹೆಚ್ಚು ಮನೆ ಮತ್ತು ಅಂಗಡಿಗಳಿಗೆ ಮಳೆ ನೀರಿನ ಜತೆಗೆ ಚರಂಡಿಯ ಕೊಳಚೆ ನೀರು ನುಗ್ಗಿ ಜನ ಜೀವನಕ್ಕೆ ತೊಂದರೆಯಾಯಿತು.`ಮುಖ್ಯರಸ್ತೆ ಮತ್ತು ಸಂಪರ್ಕ ರಸ್ತೆಯ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ನಿಂತು. ಅಲ್ಲಲ್ಲಿ ಚರಂಡಿ ಮೇಲಿನ ಕಲ್ಲುಚಪ್ಪಡಿಗಳನ್ನು ತೆಗೆದು ಅಡ್ಡಾದಿಡ್ಡಿಯಾಗಿ ಸರಿಸಿದ್ದಾರೆ. ಸಾಲದು ಎಂಬಂತೆ ಮುಖ್ಯರಸ್ತೆಯ ಬದಿ ರಾಜಕಾಲುವೆ ಮೇಲೆ ಸಿಮೆಂಟ್ ಕಾಂಕ್ರೆಟ್ ಚಪ್ಪಡಿಗಳನ್ನು ಜೋಡಿಸಿದ್ದಾರೆ.ಈ ರೀತಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೊಳಚೆ ನೀರು ಸರಾಗವಾಗಿ ಹರಿಯದೆ ರಸ್ತೆಗೆ ಮತ್ತು ಅಂಗಡಿಯೊಳಗೆ ನುಗ್ಗುತ್ತಿದೆ~ ಎಂದು ಸಾಮಾಜಿಕ ಕಾರ್ಯಕರ್ತ ರಮೇಶ್ ದೂರಿದರು.`ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯ ಮೈದಾನವು ಮಳೆ ಬಂದಾಗಲೆಲ್ಲ ಜಲಾವೃತಗೊಳ್ಳುತ್ತದೆ. ತಗ್ಗು ಪ್ರದೇಶದಲ್ಲಿರುವುದರಿಂದ ಈ ಸಮಸ್ಯೆ ಮರುಕಳಿಸುತ್ತಲೇ ಇದೆ~ ಎಂದು ಅಧಿಕಾರಿಗಳು ತಮ್ಮ ಅಸಹಾಯಕತೆ  ಪ್ರದರ್ಶಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry