ಕೆಆರ್‌ಇಡಿಎಲ್‌ನಿಂದ ಸಂಚಾರ ವಾಹನ:ಅಸಂಪ್ರದಾಯಿಕ ಇಂಧನಗಳಿಗೆ ಉತ್ತೇಜನ

7

ಕೆಆರ್‌ಇಡಿಎಲ್‌ನಿಂದ ಸಂಚಾರ ವಾಹನ:ಅಸಂಪ್ರದಾಯಿಕ ಇಂಧನಗಳಿಗೆ ಉತ್ತೇಜನ

Published:
Updated:

ಮೈಸೂರು: `ಸೌರ ಉಪಕರಣ ಬಳಸಿ ಹಣ ಮತ್ತು ಪರಿಸರ ಉಳಿಸಿ~ ಎನ್ನುವ ಘೋಷಣೆಯೊಂದಿಗೆ ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ಇಡಿ   ಎಲ್) ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸುತ್ತಿದೆ.ಅಸಾಂಪ್ರದಾಯಿಕ ಇಂಧನ ಮೂಲಗಳಾದ ಪವನಶಕ್ತಿ, ಕಿರು ಜಲಶಕ್ತಿ, ಜೈವಿಕಶಕ್ತಿ ಹಾಗೂ ಇನ್ನಿತರ ಮೂಲಗಳನ್ನು ಬಳಸಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಬಲ್ಲ ಯೋಜನೆಗಳನ್ನು ಉತ್ತೇಜಿಸುವುದು ಕೆಆರ್‌ಇಡಿಎಲ್‌ನ ಉದ್ದೇಶವಾಗಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳು, ಸಂತೆಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು `ಸಂಚಾರ  ವಾಹನ~ವೊಂದನ್ನು ಬಿಟ್ಟಿದೆ.

 

ಇದು ಪ್ರತಿನಿತ್ಯ ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ  ಸೇರಿದಂತೆ ವಿವಿಧಗಳಲ್ಲಿ ನಿಲ್ಲುತ್ತದೆ.

ಸಂಚಾರ ವಾಹನ: ಈ ವಿಶೇಷ ಸಂಚಾರ ವಾಹನದಲ್ಲಿ ಸೌರಶಕ್ತಿ ಲಾಟೀನ್, ಸೋಲಾರ್ ಮನೆದೀಪ, ಸೋಲಾರ್ ಬೀದಿದೀಪ, ಸೋಲಾರ್ ಕುಕ್ಕರ್, ಸೋಲಾರ್ ವಾಟರ್ ಹೀಟರ್, ಸೋಲಾರ್ ವಾಟರ್ ಪಂಪ್, ಸೌರಶಕ್ತಿ ಮೂಲಕ ಕಾಳು ಗಳನ್ನು ಒಣಗಿಸುವ ಯಂತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.ಆಸಕ್ತರು ಇವುಗಳ ಕಾರ್ಯಾಚರಣೆ, ಉಪಕರಣಗಳ ಬೆಲೆ, ಅವುಗಳಿಗೆ ಸಿಗುವ ಸಹಾಯಧನ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಲ್ಲದೇ ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಸೋಲಾರ್  ಉಪಕರಣಗಳ ಉತ್ಪಾದಕರ ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ವಿಳಾಸವನ್ನು ಸಹ ನೀಡಲಾಗುತ್ತದೆ.ಸಾರ್ವಜನಿಕರಿಂದ ವಿಚಾರಣೆ: ಸಂಚಾರ ವಾಹನ ಒಂದು ತಿಂಗಳಿನಿಂದ ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ ಸೇರಿದಂತೆ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಮಡಿಕೇರಿಗೂ ಹೋಗಲಿದೆ.`ಸಾರ್ವಜನಿಕರು ಸಂಚಾರ ವಾಹನವನ್ನು ವೀಕ್ಷಿಸಿ ತಮಗೆ ಅಗತ್ಯವಿರುವ  ಉಪಕರಣಗಳ ಬಗ್ಗೆ ಮಾಹಿತಿ ಪಡೆಯು ತ್ತಿದ್ದಾರೆ. ಈ ವಾಹನದಿಂದಾಗಿ  ಮೈಸೂರಿನಲ್ಲಿ ನಮ್ಮ ಕಚೇರಿ ಆರಂಭವಾಗಿರುವುದು ಜನರಿಗೆ ತಿಳಿಯುತ್ತಿದೆ. ಹೀಗಾಗಿ ಪ್ರತಿನಿತ್ಯ ಹತ್ತಾರು ದೂರವಾಣಿ ಕರೆಗಳು ಬರುತ್ತಿವೆ.ಶಾಲಾ-ಕಾಲೇಜುಗಳು ಆರಂಭಗೊಂಡ ನಂತರ ವಾಹನ ಅಲ್ಲಿಗೇ ತೆರಳಿ ಅಸಾಂಪ್ರದಾಯಿಕ ಇಂಧನ ಉತ್ಪಾದನೆ ಮತ್ತು ಉಪಕರಣಗಳ ಬಗ್ಗೆ ತಿಳಿವಳಿಕೆ ನೀಡಲಿದೆ~ ಎಂದು  ಕೆಆರ್‌ಇಡಿಎಲ್‌ನ ವಿಭಾಗೀಯ ಕಚೇರಿಯ ಯೋಜನಾ ಎಂಜಿನಿಯರ್ ಡಿ.ಕೆ.ದಿನೇಶ್‌ಕುಮಾರ್ ಹೇಳುತ್ತಾರೆ.ಉಪಕರಣಗಳು: ಸೌರಶಕ್ತಿ ಲಾಟೀನ್ ಪ್ರತಿ ಮನೆಯಲ್ಲಿಯೂ ಇರಬೇಕಾದ ಉಪಕರಣವಾಗಿದೆ. ಇದು ಸೀಮೆಎಣ್ಣೆ ಲಾಂದ್ರ, ಮೇಣದಬತ್ತಿ ಇತ್ಯಾದಿಗಳಿಗೆ ಹೋಲಿಸಿ ದಾಗ ಹೆಚ್ಚು ಉಪಯುಕ್ತವಾಗಿದೆ. ಇದನ್ನು ಹಗಲು ಕಿಟಕಿ ಪಕ್ಕ ಇಟ್ಟರೂ ಸಾಕು, ಚಾರ್ಜ್ ಆಗುತ್ತದೆ. ಸೋಲಾರ್ ಮನೆದೀಪವನ್ನು ಅಳವಡಿಸುವುದು ಮತ್ತು ಉಪಯೋಗಿಸು ವುದು ಸುಲಭ. ಒಮ್ಮೆ ಹಣ ತೊಡಗಿಸಿದರೆ ಸಾಕು.ಗುಡುಗು, ಮಿಂಚು ಬಂದಾಗ ವಿದ್ಯುತ್ ಶಾರ್ಟ್ ಸರ್ಕೀಟ್ ಆಗುವುದಿಲ್ಲ. ಸೋಲಾರ್ ಕುಕ್ಕರ್‌ನಲ್ಲಿ ಪೆಟ್ಟಿಗೆ ಮಾದರಿ ಮತ್ತು ಕೇಂದ್ರೀಕೃತ ಮಾದರಿಗಳಿವೆ. ಸಂಚಾರ ವಾಹನದಲ್ಲಿ ಹೆಚ್ಚಾಗಿ ಜನರು ವಿಚಾರಿಸುವುದು ಸೋಲಾರ್ ವಾಟರ್ ಹೀಟರ್ ಕುರಿತು. ದೈನಿಕ 100 ಮೀಟರ್ ಸಾಮರ್ಥ್ಯದ ಉಪಕರಣದ ಬೆಲೆ ಸುಮಾರು 15 ರಿಂದ 19 ಸಾವಿರ ರೂಪಾಯಿಗಳಿವೆ. ಎಂಎನ್‌ಆರ್‌ಇ ನಿಂದ ಅಂಗೀಕೃತ ಕಂಪೆನಿಯಿಂದ ಶೇಕಡಾ 30 ರಷ್ಟು ಸಹಾಯಧನವಿದೆ.ಅಸಾಂಪ್ರದಾಯಿಕ ಇಂಧನ ಮೂಲಗಳು ಹಾಗೂ ಉಪಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 0821-2421046 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry