ಶುಕ್ರವಾರ, ನವೆಂಬರ್ 22, 2019
22 °C
ಚುನಾವಣಾ ನೀತಿ ಸಂಹಿತೆ

ಕೆಆರ್‌ಎಸ್‌ನಲ್ಲಿ ಕಾಮಗಾರಿಗೆ ತಡೆ

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಚುನಾವಣಾ ಅಧಿಕಾರಿಗಳು ಕಾಮಗಾರಿ ಮುಂದುವರೆಸದಂತೆ ತಾಕೀತು ಮಾಡಿದರು.ಕೆಆರ್‌ಎಸ್‌ನ ಒಂದನೇ ವಾರ್ಡ್‌ನಲ್ಲಿ, ವಿಶೇಷ ಘಟಕ ಯೋಜನೆಯಡಿ ನಡೆಯುತ್ತಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಚುನಾವಣಾಧಿಕಾರಿಗಳಾದ ಜಾಗೃತ ದಳದ ಬಿ.ಡಿ.ರಾಜೇಂದ್ರ ಹಾಗೂ ಸೆಕ್ಟರಲ್ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ನಿಲ್ಲಿಸಿದರು. ಭೂ ಸೇನಾ ನಿಗಮದಿಂದ ರೂ.5 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿತ್ತು.ಚುನಾವಣಾ ನೀತಿಸಂಹಿತೆ ಇದ್ದರೂ ಭೂ ಸೇನಾ ನಿಗಮದಿಂದ ಉಪ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ರಸ್ತೆ ಕಾಮಗಾರಿ ನಡೆಸುತ್ತಿದ್ದರು. ಆ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಹಾಗಾಗಿ ಕಾಮಗಾರಿ ನಿಲ್ಲಿಸುವಂತೆ ಸಂಬಂಧಿಸಿದವರಿಗೆ ಸೂಚಿಸಿದ್ದೇವೆ.ಚುನಾವಣಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಕಾಮಗಾರಿ ನಡೆಸದಂತೆ ಎಚ್ಚರಿಕೆ ನೀಡಲಿದ್ದೇವೆ ಎಂದು ಸೆಕ್ಟರಲ್ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಹೇಳಿದರು.

ಪ್ರತಿಕ್ರಿಯಿಸಿ (+)