ಕೆಆರ್‌ಎಸ್ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣ

ಬುಧವಾರ, ಜೂಲೈ 24, 2019
24 °C

ಕೆಆರ್‌ಎಸ್ ಗೇಟ್ ಅಳವಡಿಕೆ ಕಾಮಗಾರಿ ಪೂರ್ಣ

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯದಲ್ಲಿ ರೂ.684 ಲಕ್ಷ ವೆಚ್ಚದಲ್ಲಿ ಕೈಗೊಂಡ ಪ್ಲಸ್ 80 ಅಡಿ ಮಟ್ಟದ 16 ಗೇಟ್‌ಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ.`ಜಲಾಶಯದ ಪ್ಲಸ್ 80 ಅಡಿ ಮಟ್ಟದ ಗೇಟ್‌ಗಳು ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮ ಟೆಂಡರ್ ಕರೆದಿತ್ತು. 2009ರ ಜನವರಿಯಲ್ಲಿ ಕಾಮಗಾರಿ ಶುರುವಾಗಿತ್ತು. ಹೊಸಪೇಟೆ ಮೂಲದ ಎಸ್.ಎಸ್.ನಾರಾಯಣ್ ಎಂಜಿನಿಯರ್ಸ್‌ ಕಾಮಗಾರಿ ಕೈಗೆತ್ತಿಕೊಂಡು ಇದೀಗ ಉದ್ದೇಶಿತ ಕಾಮಗಾರಿ ಪೂರ್ಣಗೊಳಿಸಿದೆ. ಗೇಟ್‌ಗಳ ಚಾಲನೆಗೆ ಅಗತ್ಯವಾದ ವಿದ್ಯುತ್ ಸಂಪರ್ಕ ಸೇರಿದಂತೆ 16 ಗೇಟ್‌ಗಳನ್ನು ಅಳವಡಿಸುವ ಯೋಜನೆಗೆ ಒಟ್ಟು ರೂ.720 ಲಕ್ಷ ವೆಚ್ಚವಾಗಿದೆ~ ಎಂದು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ತಿಳಿಸಿದ್ದಾರೆ.ಜಲಾಶಯದ ಪ್ಲಸ್ 60 ಅಡಿ ಮಟ್ಟದ, ವಿ.ಸಿ.ನಾಲೆಗೆ ನೀರು ಹರಿಯುವ 3 ಗೇಟ್‌ಗಳನ್ನು ಬದಲಿಸುವ ಯೋಜನೆ ಸಿದ್ದಗೊಂಡಿದೆ. ಜತೆಗೆ ಪ್ಲಸ್ 50 ಅಡಿ ಮಟ್ಟದಲ್ಲೂ 3 ಗೇಟ್‌ಗಳನ್ನು (ಸ್ಕವರಿಂಗ್ ಸ್ಲೂಯಿಸ್) ಬದಲಿಸಲು ಟೆಂಡರ್ ಕರೆಯಲಾಗಿದೆ. ಅಣೆಕಟ್ಟೆಯ 114 ಅಡಿ ಮಟ್ಟದಲ್ಲಿರುವ 48 ಸ್ವಯಂ ಚಾಲಿತ ಗೇಟ್‌ಗಳು ಸುಸ್ಥಿತಿಯಲ್ಲಿವೆ. ಪ್ಲಸ್ 80 ಅಡಿ ಮಟ್ಟದ ಗೇಟ್‌ಗಳ ಬದಲಾವಣೆಯಿಂದ ಸೋರಿಕೆ ತಪ್ಪಿದಂತಾಗಿದೆ.ಬದಲಾಯಿಸಿರುವ ಗೇಟ್‌ಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry