ಕೆಎಂಎಫ್: 4,500 ಕೋಟಿ ವ್ಯವಹಾರ

7

ಕೆಎಂಎಫ್: 4,500 ಕೋಟಿ ವ್ಯವಹಾರ

Published:
Updated:
ಕೆಎಂಎಫ್: 4,500 ಕೋಟಿ  ವ್ಯವಹಾರ

ಬೆಂಗಳೂರು: ‘ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಯು ಈ ವರ್ಷ ಒಟ್ಟು  4,500 ಕೋಟಿ   ವ್ಯವಹಾರ ನಡೆಸಿ,  30 ೀಟಿಗಿಂತಲೂ ಅಧಿಕ ಲಾಭಾಂಶ  ದಾಖಲಿಸಿದೆ. ‘ಗುಜರಾತ್‌ನ ಅಮುಲ್ ಸಂಸ್ಥೆಯನ್ನು ಹಿಂದಿಕ್ಕಿ, ಇಡೀ ರಾಷ್ಟ್ರದಲ್ಲೇ ಕೆಎಂಎಫ್ ಅನ್ನು ನಂ 1 ಮಾಡುತ್ತೇವೆ’ ಎಂದು ಮಂಡಳಿ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಘೋಷಿಸಿದರು.ನಗರದಲ್ಲಿ ಶುಕ್ರವಾರ ಮಂಡಳಿಯು ಕ್ಯಾಂಪ್ಕೊ ಸಂಸ್ಥೆಯ ಸಹಯೋಗದಲ್ಲಿ ಹೊರತಂದ ನಂದಿನಿ ಗುಡ್‌ಲೈಫ್, ಚಿಟ್‌ಚಾಟ್ ಮತ್ತು ಎಕ್ಲೇರ್ಸ್‌ ಮಾದರಿಯ ಚಾಕೊಲೇಟ್‌ಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಂಡಳಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ನನ್ನನ್ನು ಹಲವರು ಟೀಕಿಸಿದರು. ಗಣಿ ಧಣಿಗೆ ಹಾಲು ಮಂಡಳಿ ಕಾರ್ಯದ ಬಗ್ಗೆ ಏನು ಗೊತ್ತು ಎಂದು ಮಾತನಾಡಿಕೊಂಡರು. ಆದರೆ ಪ್ರತಿ ಲೀಟರ್ ಹಾಲಿಗೆ ರೈತರಿಗೆ ನೀಡಲಾಗುತ್ತಿದ್ದ    12.10 ಪೈಸೆ ದರವನ್ನು  20ಕ್ಕೆ ಹೆಚ್ಚಿಸಲಾಗಿದೆ. ಮಂಡಳಿ ಇತಿಹಾಸದಲ್ಲಿ ಇದೊಂದು ದಾಖಲೆ. ಮಂಡಳಿಯ ಯಶಸ್ಸಿನ ಕುರಿತು ರೀಡರ್ಸ್‌ ಡೈಜೆಸ್ಟ್ ಪತ್ರಿಕೆ ಗುರುತಿಸಿ ವರದಿ ಮಾಡಿದೆ’ ಎಂದರು.‘ರಾಗಿಣಿ ದ್ವಿವೇದಿ ಅವರು ಮನೆಯಲ್ಲಿ ಸಾಕಲು ಹಸುವೊಂದನ್ನು ಕೇಳಿದ್ದು, ಸಂಸ್ಥೆಯ ಪ್ರಚಾರ ರಾಯಭಾರಿಯೂ ಆಗಿರುವ ಅವರಿಗೆ ಮಂಡಳಿಯಿಂದಲೇ ಹಸುವೊಂದನ್ನು ನೀಡಲಾಗುವುದು’ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಎಸ್‌ಒಎಸ್ ಅನಾಥಾಲಯದ ಮಕ್ಕಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಿದರು.ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎ.ಎಸ್.ಪ್ರೇಮನಾಥ್ ಮಾತನಾಡಿ, ‘ಕ್ಯಾಂಪ್ಕೊ ಸಂಸ್ಥೆಯೊಂದಿಗೆ ಇತ್ತೀಚೆಗೆ ಮಾಡಿಕೊಂಡ ಒಪ್ಪಂದದ ಫಲವಾಗಿ ಸಂಸ್ಥೆಯು ಚಾಕೊಲೇಟ್‌ಗಳನ್ನು ತಯಾರಿಸಿ ಕೊಡುತ್ತಿದೆ. ನಂದಿನಿ ಚಾಕೊಲೇಟ್‌ಗಳಲ್ಲದೇ ಕ್ಯಾಂಪ್ಕೊ ಉತ್ಪಾದಿಸಿದ ಎಲ್ಲ ಬಗೆಯ ಚಾಕೊಲೇಟ್‌ಗಳನ್ನು ನಂದಿನಿಯ ಎಲ್ಲ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ಪರಸ್ಪರ ಸಹಕಾರಿ ತತ್ವದ ಆಧಾರದ ಮೇಲೆ ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.‘ಬೆಲೆ ಏರಿಕೆಯ ದಿನಗಳಲ್ಲೂ ಸಹ ರೈತರಿಗೆ ಹಸು ಸಾಕಣೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಮಂಡಳಿಯ ಸದಸ್ಯತ್ವ ಪಡೆದ ರೈತರಿಗೆ ಪ್ರತಿ ಟನ್‌ಗೆ ಐದು ನೂರು ರೂಪಾಯಿ ಕಡಿತ ಮಾಡಿ ಮೇವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಚಾಕೊಲೇಟ್ ತಯಾರಿಕಾ ಕ್ಷೇತ್ರಕ್ಕೆ ಇದೀಗ ಪ್ರವೇಶಿದ್ದು, ಬರುವ ದಿನಗಳಲ್ಲಿ ಅಧಿಕ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ’  ಎಂದರು.ಕ್ಯಾಂಪ್ಕೊ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ‘ಖಾಸಗಿ ಚಾಕೊಲೇಟ್ ತಯಾರಿಕೆ ಕಂಪೆನಿಗಳು ಇಡೀ   ದೇಶವನ್ನು ಆವರಿಸಿರುವ ಈ ಸಂದರ್ಭದಲ್ಲಿ ಅವುಗಳನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ಸಹಕಾರಿ ಸಂಸ್ಥೆಗಳು ಒಂದಾಗಬೇಕಾಗಿದೆ. ಆ ಹಿನ್ನೆಲೆಯಲ್ಲಿ ಈ ಎರಡು ಸಂಸ್ಥೆಗಳ ಮಧ್ಯೆ ಒಪ್ಪಂದ ಏರ್ಪಟ್ಟಿದೆ. ಪ್ರಸ್ತುತ ನಂದಿನಿಯ ಚಾಕೊಲೇಟ್‌ಗಳನ್ನು ಉತ್ಪಾದನೆ ಮಾಡಲಿಕ್ಕಾಗಿಯೇ    1.50 ಕೋಟಿ ವೆಚ್ಚದಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಸಂಸ್ಥೆಯ ಒಟ್ಟು ಉತ್ಪಾದನಾ ಸಾಮರ್ಥ್ಯ 13,000 ಟನ್‌ಗಳಿದ್ದು, ಬರುವ ಐದು ವರ್ಷಗಳಲ್ಲಿ 01,000 ಟನ್‌ಗೆ ಏರಿಸಲಾಗುವುದು’ ಎಂದರು.ರಾಗಿಣಿ ದ್ವಿವೇದಿ ಮಾತನಾಡಿ, ‘ಕೆಎಂಎಫ್ ಸಂಸ್ಥೆಯ ಎಲ್ಲ ಸದಸ್ಯರು ತಮ್ಮನ್ನು ಕುಟುಂಬದ ಸದಸ್ಯೆಯಂತೆ ನೋಡಿಕೊಳ್ಳುತ್ತಿದ್ದಾರೆ. ಮಂಡಳಿ ಪ್ರಚಾರ ರಾಯಭಾರಿಯಾಗುವುದು ಖುಷಿಯ ವಿಚಾರ’ ಎಂದು ಸಂತಸ ವ್ಯಕ್ತಪಡಿಸಿದರು.5 ಮಾದರಿ ಚಾಕೊಲೇಟ್ ಬಿಡುಗಡೆ

ಇದೇ ಮೊದಲ ಬಾರಿಗೆ ಚಾಕೊಲೇಟ್ ಪ್ರಪಂಚಕ್ಕೆ ಲಗ್ಗೆಯಿಟ್ಟಿರುವ ಕೆಎಂಎಫ್ ಐದು ಮಾದರಿಯ ಚಾಕೊಲೇಟ್‌ಗಳನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ಪ್ರಚಾರ ರಾಯಭಾರಿಯಾಗಿರುವ ಚಿತ್ರನಟಿ ರಾಗಿಣಿ ದ್ವಿವೇದಿ ಎಸ್‌ಒಎಸ್ ಅನಾಥಾಲಯದ ಮಕ್ಕಳಿಗೆ ಈ ಚಾಕೊಲೇಟ್‌ಗಳನ್ನು ಹಂಚುವ ಮೂಲಕ ಬಿಡುಗಡೆ ಮಾಡಿದರು.ನಂದಿನಿ ಎಕ್ಲೇರ್ಸ್‌ ಮಾದರಿಯಲ್ಲಿ ಎರಡು ಉತ್ಪನ್ನಗಳಿದ್ದು, ‘ವೈಟ್ ಸೆಂಟರ್ ಎಕ್ಲೇರ್ಸ್‌’ನ ಬೆಲೆ 1. ಇದೇ ಬಗೆಯ ಇನ್ನೊಂದು ಉತ್ಪನ್ನ 50 ಪೈಸೆಯಲ್ಲಿ ದೊರೆಯಲಿದೆ. ಎನ್‌ರೋಬ್ ಮಾದರಿಯಲ್ಲಿ ಎರಡು ಉತ್ಪನ್ನಗಳಿದ್ದು, ‘ನಂದಿನಿ ಗುಡ್‌ಲೈಫ್’ ಮತ್ತು ‘ನಂದಿನಿ ಚಿಟ್‌ಚಾಟ್’ ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿವೆ. ಬೆಲೆ ತಲಾ ್ಙ 5. ‘ನಂದಿನಿ ಕ್ರೀಮಿ ಬೈಟ್’ ಎಂಬುದು ಮೋಲ್ಡೆಡ್ ಮಾದರಿಯಲ್ಲಿದ್ದು, ಬೆಲೆ ್ಙ 10. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry