ಕೆಎಂಫ್‌ಗೆ 35 ಲಕ್ಷ ಲಾಭ: ವಾಡಪ್ಪಿ

7

ಕೆಎಂಫ್‌ಗೆ 35 ಲಕ್ಷ ಲಾಭ: ವಾಡಪ್ಪಿ

Published:
Updated:

ಗದಗ: ಧಾರವಾಡ ಹಾಲು ಒಕ್ಕೂಟ ಕಳೆದ ವರ್ಷ ರೂ. 35 ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ಡಾ.ಬಿ.ಬಿ.ವಾಡಪ್ಪಿ ಹೇಳಿದರು.ತಾಲ್ಲೂಕಿನ ಹುಯಿಲ ಗೋಳ ದಲ್ಲಿ ಸೋಮವಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಹಾಲು ಒಕ್ಕೂಟಕ್ಕೆ ಪ್ರತಿದಿನ 1.40 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ.  ಗದಗ ಜಿಲ್ಲೆಯಿಂದ 25 ಸಾವಿರ, ಹಾವೇರಿ 60 ಸಾವಿರ ಧಾರವಾಡ ಮತ್ತು ಉತ್ತರ ಕನ್ನಡದಿಂದ 50 ಸಾವಿರ ಲೀಟರ್ ಹಾಲು ಶೇಖರಣೆ ಮಾಡ ಲಾಗುತ್ತಿದೆ. ಹೆಚ್ಚುವರಿ ಹಾಲಿನಿಂದ ತುಪ್ಪ, ಬೆಣ್ಣೆ, ಪೇಡ, ಮೈಸೂರು ಪಾಕ್ ಮಾಡಲಾಗುತ್ತಿದ್ದು, ಈ ವರ್ಷ ಒಂದು ಕೋಟಿ ರೂಪಾಯಿ ಲಾಭ ನಿರೀಕ್ಷಿಸ ಲಾಗಿದೆ ಎಂದರು.ಅಮೃತ ಯೋಜನೆಯಲ್ಲಿ ಮಿಶ್ರತಳಿ ರಾಸುಗಳನ್ನು ಸಬ್ಸಿಡಿ ದರದಲ್ಲಿ ನೀಡಲಾ ಗುವುದು.  ಹಾಲು ಉತ್ಪಾದಕರಿಗೆ  2008ರಿಂದ ಈವರೆಗೆ 6 ಕೋಟಿ ರೂಪಾಯಿ ಪ್ರೋತ್ಸಾಹ ಧನ ನೀಡಲಾಗಿದೆ. 140 ಮೆಟ್ರಿಕ್ ಟನ್ ಪಶು ಆಹಾರ ಗದಗ ಜಿಲ್ಲೆಗೆ ಪೂರೈಕೆ ಆಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೆಎಂಎಫ್ 14ಲಕ್ಷ ರೂಪಾಯಿ ಒಪ್ಪಂದ ಮಾಡಿಕೊಂಡು ಕೃಷಿ ವಿಶ್ವವಿದ್ಯಾನಿಲಯದಿಂದ ಹಸಿರು ಮೇವು ಖರೀದಿಸಿ ರೈತರಿಗೆ ನೀಡಲಾ ಗುವುದು ಎಂದು ವಿವರಿಸಿದರು.ರೈತರು ರೂ.100 ಪಾವತಿಸಿ ಅಜೀವ ಸದಸ್ಯತ್ವ ಪಡೆಯಬೇಕು. ಮರಣ ಹೊಂದಿದ ರೈತರಿಗೆ 5 ಸಾವಿರ ಸಹಾಯ ಧನ, ಅಪಘಾತಕ್ಕೀಡಾದರೆ ರೂ. 55 ಸಾವಿರ ಮತ್ತು ಹಾಲು ಉತ್ಪಾದಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ರೂ. 5 ಸಾವಿರ ಮತ್ತು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸುವ ಕ್ರೀಡಾ ಪಟುಗಳಿಗೆ ರೂ.10 ಸಾವಿರ ಸಹಾಯ ಧನ ನೀಡಲಾಗುತ್ತಿದೆ ಎಂದು ತಿಳಿಸಿದರು.   ಅಹವಾಲು ಸ್ವೀಕಾರ

ಗದಗ: ಲೋಕಾಯುಕ್ತ ಗದಗ ಘಟಕದ ಅಧಿಕಾರಿಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ನಿಗದಿಪಡಿಸಿದ ದಿನದಂದು ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ದೂರು ಅರ್ಜಿ ಅಹವಾಲು ಸ್ವೀಕರಿಸಲಿದ್ದಾರೆ.ಪೊಲೀಸ್ ಉಪಾಧೀಕ್ಷಕ ಜಿ.ಆರ್. ಪಾಟೀಲ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಐ. ನಡುವಿನಮನಿ ಅವರು ಅ. 10ರಂದು ಬೆಳಿಗ್ಗೆ 11 ಗಂಟೆಗೆ ಮುಂಡರಗಿ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಹಾಗೂ ಅ. 11ರಂದು ಶಿರಹಟ್ಟಿಯ ಬೇಂದ್ರೆ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಅಹವಾಲು ಸ್ವೀಕರಿಸುವರು.ಅ. 16ರಂದು ಪೊಲೀಸ್ ಉಪಾ ಧೀಕ್ಷಕ ಜಿ.ಆರ್. ಪಾಟೀಲ ಹಾಗೂ ಪೊಲೀಸ್ ಇನ್ಸಪೆಕ್ಟರ್ ಸಂಗನಗೌಡರ ಅವರು ನರಗುಂದ ತಾಲ್ಲೂಕು ಪಂಚಾ ಯಿತಿ ಸಭಾ ಭವನ ಹಾಗೂ ಅ. 17 ರಂದು ರೋಣ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.ಗದಗ ತಾಲ್ಲೂಕಿಗೆ ಸಂಬಂಧಿಸಿದ ದೂರು, ಅರ್ಜಿಗಳಿದ್ದಲ್ಲಿ ಜಿಲ್ಲಾ ಕೇಂದ್ರ ದಲ್ಲಿರುವ ಪೊಲೀಸ್ ಉಪಾಧೀಕ್ಷಕರು ಮತ್ತು ಪೊಲೀಸ್ ಇನ್ಸಪೆಕ್ಟರ್ ಲೋಕಾಯುಕ್ತ ಕಚೇರಿ ಯಲ್ಲಿ ದೂರು ಸಲ್ಲಿಸಬಹುದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry