ಮಂಗಳವಾರ, ನವೆಂಬರ್ 12, 2019
28 °C

ಕೆಎಎಸ್: ಸೂಪರ್ ಟೈಂ ಶ್ರೇಣಿಗೆ ಬಡ್ತಿ

Published:
Updated:

ಬೆಂಗಳೂರು:  ಆಯ್ಕೆ ಶ್ರೇಣಿಯ 37 ಮಂದಿ ಕೆ.ಎ.ಎಸ್ ಅಧಿಕಾರಿಗಳಿಗೆ ಸೂಪರ್ ಟೈಂ ಸ್ಕೇಲ್‌ಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಎಲ್ಲ ಅಧಿಕಾರಿಗಳು ಹಾಲಿ ಇರುವ ಹುದ್ದೆಗಳಲ್ಲೇ ಮುಂದುವರಿಯಲಿದ್ದಾರೆ.ಜಿತೇಂದ್ರ ಸಿಂಗ್ (ವಿಶೇಷ ಕರ್ತವ್ಯಾಧಿಕಾರಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಬೆಂಗಳೂರು), ಬಿ.ಬಿ.ಕಾವೇರಿ (ನಿರ್ದೇಶಕರು, ಯೋಜನೆ ಮತ್ತು ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಇಲಾಖೆ), ಸುಷ್ಮಾ ಗೋಡಬೋಲೆ (ಹೆಚ್ಚುವರಿ ಕಾರ್ಯದರ್ಶಿ, ಗೃಹ ಇಲಾಖೆ), ಎನ್.ಟಿ. ಅಬ್ರು (ನಿರ್ದೇಶಕರು, ಖಜಾನೆ ಇಲಾಖೆ), ಡಾ. ವಿಜಯಕುಮಾರ್ ಎನ್.ತೋರಗಲ್ (ಮುಖ್ಯಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ), ಟಿ.ಎಚ್.ಎಂ. ಕುಮಾರ್ (ಮುಖ್ಯ ಆಡಳಿತಾಧಿಕಾರಿ, ಸಂಜಯ ಗಾಂಧಿ ಅಪಘಾತ ಚಿಕಿತ್ಸಾ ಆಸ್ಪತ್ರೆ, ಬೆಂಗಳೂರು).ಡಾ.ಎಚ್.ಆರ್.ಮಹದೇವ್ (ಮುಖ್ಯಮಂತ್ರಿಗಳ ಹೆಚ್ಚುವರಿ ಕಾರ್ಯದರ್ಶಿ), ಜಿಯಾವುಲ್ಲಾ. ಎಸ್ (ವಿಶೇಷ ಅಧಿಕಾರಿ- ತರಬೇತಿ, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ), ಎಸ್.ಬಿ.ಶೆಟ್ಟಣ್ಣವರ (ಉಪ ಆಡಳಿತಾಧಿಕಾರಿ, ಕಾಡಾ, ಬೆಳಗಾವಿ), ಕೆ.ಆರ್.ಜಯಪ್ರಕಾಶ ರಾವ್ (ಹೆಚ್ಚುವರಿ ನಿರ್ದೇಶಕರು-ತರಬೇತಿ, ಮೈಸೂರು ಜಿಲ್ಲಾ ತರಬೇತಿ ಸಂಸ್ಥೆ), ಎಂ.ಪಿ.ಬಳಿಗಾರ್ (ನಿರ್ದೇಶಕರು, ಸಾಮಾಜಿಕ ಭದ್ರತೆ ಹಾಗೂ ನಿವೃತ್ತಿ ವೇತನ, ಕಂದಾಯ ಇಲಾಖೆ), ಕೆ.ಎಸ್.ವೆಂಕಟೇಶಪ್ಪ (ಹೆಚ್ಚುವರಿ ಆಯುಕ್ತರು, ಬಿಬಿಎಂಪಿ ಪೂರ್ವ ವಲಯ), ಪಿ.ಕೆ.ಸುಬ್ಬಯ್ಯ (ಕ್ರೀಡಾ ಸಚಿವರ ಆಪ್ತ ಕಾರ್ಯದರ್ಶಿ), ಎಸ್.ಜಿ.ಪಾಟೀಲ (ಸಿಇಒ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ), ಎನ್. ಬಾಬಣ್ಣ (ಹೆಚ್ಚುವರಿ ಆಯುಕ್ತರು, ರಾಜರಾಜೇಶ್ವರಿ ನಗರ ವಲಯ, ಬಿಬಿಎಂಪಿ).

ತೇಜಸ್ವಿನಿ ಸದಾನಂದ ನಾಯಕ್ (ಪ್ರಾದೇಶಿಕ ವ್ಯವಸ್ಥಾಪಕರು, ಕೆಯುಐಡಿಎಫ್‌ಸಿ, ಹುಬ್ಬಳ್ಳಿ), ಸದಿಯಾ ಸುಲ್ತಾನ (ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ), ಟಿ.ಎಂ.ಪ್ರಭಾಕರ್ (ಹೆಚ್ಚುವರಿ ನಿರ್ದೇಶಕರು- ಆಡಳಿತ, ತೋಟಗಾರಿಕೆ ಇಲಾಖೆ), ಬಿ.ಎಸ್. ಪತ್ರಿ (ಕಾರ್ಯದರ್ಶಿ, ಕರ್ನಾಟಕ ಗೃಹ ಮಂಡಳಿ), ಎಂ.ಆರ್.ಸೋಮಶೇಖರಪ್ಪ (ಸಿಇಒ, ಚಾಮರಾಜನಗರ ಜಿಲ್ಲಾ ಪಂಚಾಯಿತಿ), ಎಚ್.ಆರ್.ಜಗದೀಶ (ಸಿಇಒ, ರೋರಿಚ್ ಎಸ್ಟೇಟ್ ಮಂಡಳಿ, ಬೆಂಗಳೂರು), ಎಸ್.ಎ.ಪ್ರಭಾಕರ ಶರ್ಮ (ಸಿಇಒ, ಉಡುಪಿ ಜಿಲ್ಲಾ ಪಂಚಾಯಿತಿ), ಟಿ.ಶಾಮಯ್ಯ (ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳು), ಸಿ.ಎಂ.ರಾಜೇಂದ್ರ (ನಿರ್ದೇಶಕರು, ಲೋಕ ಶಿಕ್ಷಣ ನಿರ್ದೇಶನಾಲಯ).ಬಿ.ರಾಜಣ್ಣ (ಹೆಚ್ಚುವರಿ ಆಯುಕ್ತರು, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ), ಡಾ.ಸಿ.ಜಿ.ಬೆಟಸೂರಮಠ (ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ), ಕೆ.ಎಂ.ಚಂದ್ರೇಗೌಡ (ಹೆಚ್ಚುವರಿ ಆಯುಕ್ತರು- ಆಡಳಿತ ಮತ್ತು ಅಭಿವೃದ್ಧಿ, ಪ್ರಾದೇಶಿಕ ಆಯುಕ್ತರ ಕಚೇರಿ, ಮೈಸೂರು), ಎಸ್.ಆರ್. ವೆಂಕಟೇಶ (ಹೆಚ್ಚುವರಿ ಮಹಾನಗರ ಆಯುಕ್ತರು, ಬಿಎಂಆರ್‌ಡಿಎ), ನಾಗಾ ನಾಯಕ್ (ಹೆಚ್ಚುವರಿ ಜಿಲ್ಲಾಧಿಕಾರಿಗಳು, ಮೈಸೂರು), ಜಿ.ಎಸ್.ಜಿದ್ದಿಮನಿ (ಹೆಚ್ಚುವರಿ ಆಯುಕ್ತರು- ಭೂಮಿ ನಿರ್ವಹಣೆ ಯೋಜನೆ ಮತ್ತು ಇತರೆ, ಪ್ರಾದೇಶಿಕ ಆಯುಕ್ತರ ಕಚೇರಿ, ಮೈಸೂರು), ಎಸ್.ಪಿ.ಷಡಕ್ಷರಿಸ್ವಾಮಿ (ನಿರ್ದೇೀಶಕರು, ಮಾನವ ಸಂಪನ್ಮೂಲ, ಕೆಪಿಸಿ), ಎನ್.ಸಿ. ಸೀತಮ್ಮ (ಯೋಜನಾ ನಿರ್ದೇಶಕರು, ಡಿಆರ್‌ಡಿಎ ಕೋಶ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ), ಎಸ್. ಎನ್. ಗಂಗಾಧರಯ್ಯ (ವಿಶೇಷ ಜಿಲ್ಲಾಧಿಕಾರಿ, ಬೆಂಗಳೂರು ಉತ್ತರ ಮತ್ತು ಉತ್ತರ- ಹೆಚ್ಚುವರಿ, ಬೆಂಗಳೂರು).

ಕೆ.ಎಸ್.ಮಂಜುನಾಥ (ಮುಖ್ಯ ಆಡಳಿತಾಧಿಕಾರಿ, ಬೆಂಗಳೂರು ಜಲಮಂಡಳಿ), ಕೆ.ಸುಬ್ರಾಯ ಕಾಮತ್ (ಸಿಇಒ, ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ), ಎಚ್.ಟಿ.ಚಂದ್ರಶೇಖರ (ಸಿಇಒ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು), ಡಿ.ಬಸವರಾಜು (ನಿರ್ದೇಶಕರು, ಸರ್ವ ಶಿಕ್ಷಣ ಅಭಿಯಾನ).

ಐಎಫ್‌ಎಸ್ ಅಧಿಕಾರಿಗಳಿಗೆ ಬಡ್ತಿ

ಬೆಂಗಳೂರು: ನಾಲ್ಕು ಮಂದಿ ಐ.ಎಫ್.ಎಸ್ ಅಧಿಕಾರಿಗಳಿಗೆ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೆ.ಎಚ್.ವಿನಯಕುಮಾರ್- ನಿರ್ದೇಶಕರು, ಪರಿಸರ ನಿರ್ವಹಣೆ ಮತ್ತು ನೀತಿ ನಿರೂಪಣಾ ಸಂಶೋಧನಾ ಸಂಸ್ಥೆ (ಸಂಶೋಧನೆ), ಬೆಂಗಳೂರು, ವಿಜಯಕುಮಾರ್ (ಅರಣ್ಯ ಸಂರಕ್ಷಣಾಧಿಕಾರಿ- ಕಾರ್ಯ ಯೋಜನೆ, ಚಿಕ್ಕಮಗಳೂರು), ಪಿ.ಬಿ.ಕರುಣಾಕರ (ಅರಣ್ಯ ಸಂರಕ್ಷಣಾಧಿಕಾರಿ- ಕಾರ್ಯ ಯೋಜನೆ, ಧಾರವಾಡ), ಬಿ.ಬಿ.ಮಲ್ಲೇಶ (ನಿರ್ದೇಶಕರು, ಅಣಶಿ ದಾಂಡೇಲಿ ರಾಷ್ಟ್ರೀಯ ಉದ್ಯಾನವನ).

 

ಪ್ರತಿಕ್ರಿಯಿಸಿ (+)