ಬುಧವಾರ, ಮೇ 18, 2022
25 °C

ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟ ಸ್ಪರ್ಧೆ ಜುಲೈ 1ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯ ಮಟ್ಟದ ರಸ್ತೆ ಓಟ ಸ್ಪರ್ಧೆ ಜುಲೈ 1ರಂದು ಬಾಗಲಕೋಟೆ ನಗರದಲ್ಲಿ ನಡೆಯಲಿದೆ.ಪುರುಷರು, ಮಹಿಳೆಯರು ಮತ್ತು 16 ವರ್ಷ ವಯಸ್ಸಿದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಪುರುಷರಿಗೆ 12 ಕಿ.ಮೀ, ಮಹಿಳೆಯರಿಗೆ 6 ಕಿ.ಮೀ ಮತ್ತು ಬಾಲಕ, ಬಾಲಕಿಯರಿಗೆ 2.5 ಕಿ.ಮೀ. ದೂರದ ಓಟ ಏರ್ಪಡಿಸಲಾಗಿದೆ.ನಗದು ಬಹುಮಾನ:

ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಪಡೆಯುವವರಿಗೆ ಕ್ರಮವಾಗಿ ರೂ. 5 ಸಾವಿರ, ರೂ. 3.500 ಮತ್ತು ರೂ. 2.500 ನಗದು ಬಹುಮಾನ ನೀಡಲಾಗುತ್ತದೆ. 4, 5 ಮತ್ತು 6ನೇ ಸ್ಥಾನ ಗಳಿಸುವ ಅಥ್ಲೀಟ್‌ಗಳಿಗೆ ರೂ. 1500, ರೂ.600 ಮತ್ತು ರೂ. 500 ದೊರೆಯಲಿದೆ. ಏಳರಿಂದ ಹತ್ತರ ವರೆಗಿನ ಸ್ಥಾನ ಪಡೆಯುವವರು ತಲಾ ರೂ.350 ಗಳಿಸಲಿದ್ದಾರೆ.ಬಾಲಕ ಮತ್ತು ಬಾಲಿಕಯರ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವವರಿಗೆ ಕ್ರಮವಾಗಿ ರೂ.1.500, ರೂ. 1 ಸಾವಿರ ಹಾಗೂ ರೂ.750 ನಗದು ಬಹುಮಾನ ಸಿಗಲಿದೆ (ಬಾಲಕ ಬಾಲಕಿಯರ ವಿಭಾಗದ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಜನ್ಮ ದಿನಾಂಕದ ದಾಖಲೆಯೊಂದಿಗೆ ಆಗಮಿಸಬೇಕು).ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ರಾಜ್ಯದ ಇತರೆ ಭಾಗಗಳಿಂದ ಆಗಮಿಸುವ ಅಥ್ಲೀಟ್‌ಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲಾಗುವುದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳಿಗೆ ಜೂನ್ 30ರಂದು ಮಧ್ಯಾಹ್ನ 3 ಗಂಟೆಯಿಂದ ನಗರದ ಬಿವಿವಿ ಸಂಘದ ಮುಖ್ಯ ಪ್ರವೇಶ ದ್ವಾರದ ಬಳಿ `ಚೆಸ್ಟ್ ನಂಬರ್~ ವಿತರಿಸಲಾಗುತ್ತದೆ.ರಸ್ತೆ ಓಟ ಮಾರ್ಗ:

ಪುರುಷರ ಓಟದ ಸ್ಪರ್ಧೆ ನಗರದ ಬಿವಿವಿ ಸಂಘದ ಮುಖ್ಯ ಪ್ರವೇಶದ್ವಾರದಿಂದ ಆರಂಭಗೊಂಡು ಸ್ಟೇಷನ್ ರೋಡ್ ಮೂಲಕ ದಡ್ಡೇನವರ ಆಸ್ಪತ್ರೆ ಕ್ರಾಸ್, ವಿದ್ಯಾಗಿರಿ ರಸ್ತೆ, ಮಹಾರಾಜ ಗಾರ್ಡನ್ ಮಾರ್ಗವಾಗಿ ವಿದ್ಯಾಗಿರಿ ಎಂಜಿನಿಯರಿಂಗ್ ವೃತ್ತ ಸುತ್ತಿಕೊಂಡು ಮರಳಿ ಅದೇ ಮಾರ್ಗವಾಗಿ ಬಿವಿವಿ ಸಂಘದ ಮುಖ್ಯ ಪ್ರವೇಶದ್ವಾರಕ್ಕೆ ತಲುಪುವ ಮೂಲಕ ಸ್ಪರ್ಧೆ ಕೊನೆಗೊಳ್ಳಲಿದೆ.ಮಹಿಳೆಯರ ಓಟದ ಸ್ಪರ್ಧೆಯು ವಿದ್ಯಾಗಿರಿ ಎಂಜಿನಿಯರಿಂಗ್ ಕಾಲೇಜು ವೃತ್ತದಿಂದ ಆರಂಭಗೊಂಡು ಬಿವಿವಿ ಸಂಘದ ಮುಖ್ಯಪ್ರವೇಶದ್ವಾರದ ಬಳಿ ಕೊನೆಗೊಳ್ಳಲಿದೆ ಹಾಗೂ ಬಾಲಕ -ಬಾಲಕಿಯರ ಓಟದ ಸ್ಪರ್ಧೆಯು ದಡ್ಡೇನವರ ಆಸ್ಪತ್ರೆ ಕ್ರಾಸ್‌ನಿಂದ ಆರಂಭಗೊಂಡು ಬಿವಿವಿ ಸಂಘದ ಮುಖ್ಯ ಪ್ರವೇಶದ್ವಾರದ ಬಳಿ ಕೊನೆಗೊಳ್ಳಲಿದೆ.ಉದ್ಘಾಟನೆ:

ಓಟದ ಸ್ಪರ್ಧೆಗೆ ಅಂದು ಬೆಳಿಗ್ಗೆ 6.30ಕ್ಕೆ ನಗರದ ಬಸವೇಶ್ವರ ವಿದ್ಯಾವರ್ದಕ ಸಂಘದ ಮುಖ್ಯ ಪ್ರವೇಶದ್ವಾರದ ಬಳಿ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಚಾಲನೆ ನೀಡಲಿದ್ದಾರೆ.ಬಹುಮಾನ ವಿತರಣೆ:

ಬಳಿಕ ಬೆಳಿಗ್ಗೆ 9 ಗಂಟೆಗೆ ನಗರದ ಬಿವಿವಿ ಸಂಘದ ಮಿನಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ ಮತ್ತು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಬಹುಮಾನ ವಿತರಣೆ ಮಾಡಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಗುಂಡಪ್ಪ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಕೆ.ನಂದನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಡೆಕ್ಕನ್ ಅಥ್ಲೇಟಿಕ್ ಕ್ಲಬ್‌ನ ಸಂಘಟನಾ ಕಾರ್ಯದರ್ಶಿ ಅನಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರವೇಶ ಪತ್ರಗಳನ್ನು ಅನಂತರಾಜು, ಸಂಘಟನಾ ಕಾರ್ಯದರ್ಶಿ, ಡೆಕ್ಕನ್ ಅಥ್ಲೇಟಿಕ್ ಕ್ಲಬ್, `ಪ್ರಗತಿ~, ನಂ. 39/137, 1 ಡಿ ಕ್ರಾಸ್, 6ನೇ ಮೇನ್, ರೆಮ್ಕೊ ಲೇಔಟ್, ವಿಜಯನಗರ, ಬೆಂಗಳೂರು -560040(ದೂರವಾಣಿ ಸಂಖ್ಯೆ 080-22275656) ವಿಳಾಸಕ್ಕೆ ಜೂನ್ 29ರೊಳಗೆ ತಲುಪುವಂತೆ ಕಳುಹಿಸಿಕೊಡಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.