ಕೆಎಲ್‌ಇ ಟಿ-20 ಕ್ರಿಕೆಟ್: ಆತಿಥೇಯರಿಗೆ ಜಯ

7

ಕೆಎಲ್‌ಇ ಟಿ-20 ಕ್ರಿಕೆಟ್: ಆತಿಥೇಯರಿಗೆ ಜಯ

Published:
Updated:

ಹುಬ್ಬಳ್ಳಿ: ಪಂದ್ಯದ ಪುರುಷೋತ್ತಮ ಶಶಾಂಕ ಹುಲಮನಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಬಿ.ವಿ.ಬಿ. ಕಾಲೇಜು ತಂಡ, ಕೆ.ಎಲ್.ಇ. ಟಿ-20 ಕ್ರಿಕೆಟ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.

ನಗರದ ಬಿ.ವಿ.ಬಿ. ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಅದು ಹಾವೇರಿಯ ಕೊಲ್ಲಿ ಪಾಲಿಟೆಕ್ನಿಕ್ ಕಾಲೇಜು ತಂಡವನ್ನು ಏಳು ವಿಕೆಟ್ ಅಂತರದಿಂದ ಸೋಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೊಲ್ಲಿ ಕಾಲೇಜು ತಂಡ 19.3 ಓವರ್‌ಗಳಲ್ಲಿ 104 ಗಳಿಸಿ ಆಲೌಟಾ ಯಿತು. ಈ ಗುರಿಯನ್ನು  ಬಿ.ವಿ.ಬಿ. ಕಾಲೇಜು 13.4 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಶಶಾಂಕ ಹುಲಮನಿ 34 ಎಸೆತಗಳಲ್ಲಿ 43 ರನ್ (6 ಬೌಂಡರಿ) ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜು ತಂಡ, ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜು ತಂಡದ ವಿರುದ್ಧ ಒಂಭತ್ತು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು.

ಸಂಕ್ಷಿಪ್ತ ಸ್ಕೋರು: ಕೊಲ್ಲಿ ಪಾಲಿಟೆಕ್ನಿಕ್ ಕಾಲೇಜು: 19.3 ಓವರ್‌ಗಳಲ್ಲಿ 104ಕ್ಕೆ ಆಲೌಟ್ (ಭರತ್ 37; ಕಿರಣ 14ಕ್ಕೆ 3, ಸಾಗರ್ ಆರ್.ವಿ. 20ಕ್ಕೆ 2); ಬಿ.ವಿ.ಬಿ. ಕಾಲೇಜು: 13.4 ಓವರ್‌ಗಳಲ್ಲಿ 3 ವಿಕೆಟ್‌ಗೆ 105 (ಶಶಾಂಕ ಹುಲಮನಿ 43; ಅರುಣ 26ಕ್ಕೆ 2).

ಪಿ.ಸಿ. ಜಾಬಿನ್ ಕಾಲೇಜು: 13.2 ಓವರ್‌ಗಳಲ್ಲಿ 45ಕ್ಕೆ ಆಲೌಟ್ (ಶಶಿಧರ 9ಕ್ಕೆ 5, ಆಖಿಬ್ 17ಕ್ಕೆ 2); ಲಿಂಗರಾಜ ಕಾಲೇಜು: 8.4 ಓವರ್‌ಗಳಲ್ಲಿ 1 ವಿಕೆಟ್‌ಗೆ 46 (ಬಸವರಾಜ 18).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry