ಕೆಎಸ್‌ಆರ್‌ಟಿಸಿಗೆ ಪ್ರಶಸ್ತಿ

7

ಕೆಎಸ್‌ಆರ್‌ಟಿಸಿಗೆ ಪ್ರಶಸ್ತಿ

Published:
Updated:
ಕೆಎಸ್‌ಆರ್‌ಟಿಸಿಗೆ ಪ್ರಶಸ್ತಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ 50 ವರ್ಷಗಳ ಸಾಧನೆ ಬಿಂಬಿಸುವ `ಸಾರಿಗೆಯ 50 ವರ್ಷಗಳು~ ಕೈಪಿಡಿಗೆ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ನೀಡುವ ಚಿನ್ನದ ಪ್ರಶಸ್ತಿ ಲಭಿಸಿದೆ.  ಅಲ್ಲದೆ, ನಿಗಮದ ನಿಯತಕಾಲಿಕೆ `ಸಾರಿಗೆ ಸಂಪದ~ ಮತ್ತು ಕಾರ್ಪೊರೆಟ್ ಚಲನಚಿತ್ರಕ್ಕೆ ಬೆಳ್ಳಿ ಪ್ರಶಸ್ತಿ ಲಭಿಸಿದೆ.

ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು ಮುಂಬೈನಲ್ಲಿ ಏರ್ಪಡಿಸಿದ್ದ ಆರನೇ ವಿಶ್ವ ಸಮ್ಮೇಳನದಲ್ಲಿ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್. ಲತಾ ಅವರು ಪಾಕಿಸ್ತಾನದ ಮಾಜಿ ಕಾನೂನು ಸಚಿವ ಇಕ್ಬಾಲ್ ಹೈದರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry