ಕೆಎಸ್‌ಆರ್‌ಟಿಸಿ ಪ್ರಯಾಣೋತ್ಸವ

7

ಕೆಎಸ್‌ಆರ್‌ಟಿಸಿ ಪ್ರಯಾಣೋತ್ಸವ

Published:
Updated:

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಇದೇ ಏಪ್ರಿಲ್ 30ರೊಳಗೆ ಮೂರು ಬಾರಿ ಪ್ರಯಾಣಿಸಿದರೆ, ನಾಲ್ಕನೆಯ ಟಿಕೆಟ್‌ಗೆ ಶೇಕಡ 30ರಷ್ಟು ರಿಯಾಯಿತಿ ನೀಡುವುದಾಗಿ ನಿಗಮ ಘೋಷಿಸಿದೆ.ಈ ಸೌಲಭ್ಯವನ್ನು ಬಳಸಿಕೊಳ್ಳಲು ಪ್ರಯಾಣಿಕರು ಮೊಬೈಲ್ ಅಥವಾ ಇಂಟರ್ನೆಟ್ ಮೂಲಕ ಟಿಕೆಟ್ ಕಾಯ್ದಿರಿಸಬೇಕು. ಮೂರು ಬಾರಿಯ ನಂತರ ನಾಲ್ಕನೆ ಸಲ ಟಿಕೆಟ್ ಕಾಯ್ದಿರಿಸುವಾಗ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆಯಲಿದೆ. ಏಪ್ರಿಲ್ 30ರ ನಂತರ ಟಿಕೆಟ್ ಕಾಯ್ದಿರಿಸುವವರಿಗೆ ಈ ಸೌಲಭ್ಯ ದೊರೆಯುವುದಿಲ್ಲ.

ನಿಗಮವು ಈ ಕೊಡುಗೆಗೆ `ಪ್ರಯಾಣೋತ್ಸವ~ ಎಂದು ಹೆಸರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry