ಕೆಎಸ್ಆರ್ಟಿಸಿ ಸಂಚಾರ ನಿಯಮ ಬದಲಾಗಲಿ
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಸಿದ್ಧವಾಗುತ್ತಿದೆ. ಇನ್ನೊಂದು ಸ್ಮಾರಕಕ್ಕೂ ಅಡಿಗಲ್ಲು ಬಿದ್ದಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಬರಲು ವೋಲ್ವೋ, ರಾಜಹಂಸ ಅಥವಾ ಹೆಚ್ಚಾಗಿ ರಾತ್ರಿ ಆರಂಭವಾಗುವ ಖಾಸಗಿ, ಸುವಿಹಾರಿ ಬಸ್ಗಳಲ್ಲಿ ಬರಲಾಗದವರು, ಇರುವ ಎರಡು ರೈಲುಗಳಲ್ಲಿ ಜಾಗ ಸಿಗದವರು ಏನು ಮಾಡಬೇಕು? ನನ್ನ ಸ್ವಂತ ಅನುಭವ ಹೀಗಿದೆ.
ಈ ತಿಂಗಳ 17ರಂದು ಬೆಳಗಾವಿ ಬಸ್ಸ್ಟಾಂಡ್ನಲ್ಲಿ ಎಕ್ಸ್ಪ್ರೆಸ್ನಲ್ಲಿ ಬೆಂಗಳೂರು ತಲುಪಲು ಎಷ್ಟು ಗಂಟೆ ಹಿಡಿಯುತ್ತದೆ ಎಂದು ಕೇಳಿದಾಗ ಸುಮಾರು 11-12 ತಾಸು ಎಂದರು. ಆ ವೇಗದೂತ ಬಸ್ಸು ಯಶವಂತಪುರದಲ್ಲಿ ನಿಂತಾಗ ರಾತ್ರಿ 9-45. ಬೆಳಿಗ್ಗೆ ಹೊರಟಾಗ 8 ಗಂಟೆ. 517 ಕಿ.ಮೀ.ಗೆ 14 ತಾಸು. ಇದರಲ್ಲಿ 2 ತಾಸು ಊಟ, ಚಹ, ಸ್ಟಾಪ್ ಎಂದು ಕಳೆದರೂ ಗಂಟೆಗೆ ಸರಾಸರಿ 43 ಕಿ.ಮೀ. ವೇಗ (?!) ಆಯಿತು.
ಆ ಟ್ರಿಪ್ನ ಕಲೆಕ್ಷನ್ ರೂ. 6500 ಇದ್ದೀತು. ಟೋಲ್ ಟ್ಯಾಕ್ಸ್ಗೆ 2000 ರೂ. ಹೋಗುತ್ತದೆ. ಡೀಸೆಲ್, ಸಿಬ್ಬಂದಿ ವೆಚ್ಚ ಲೆಕ್ಕಹಾಕಿದರೆ ನಷ್ಟವೇ (ಟ್ರಿಪ್ಗೆ 2000 ರೂ. !)
ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಕೆಲವು ಬದಲಾವಣೆಗಳನ್ನು ತರಲು ಯೋಚಿಸಬೇಕು.
1) ವೇಗ ನಿಯಂತ್ರಕ ಅಳವಡಿಸಿದ್ದನ್ನು ಎಕ್ಸ್ಪ್ರೆಸ್ ಎಂದು ಹೆಸರಿಸಬಾರದು.
2) ಲಾಂಗ್ ರೂಟ್ ಬಸ್ಗಳಿಗೆ ಪ್ರತಿಯೊಂದು ಬಸ್ ನಿಲ್ದಾಣಕ್ಕೂ ಹೋಗಬೇಕೆಂಬ ನಿಯಮದಿಂದ ಸಡಿಲಿಕೆ ಅಥವಾ ವಿನಾಯಿತಿ ನೀಡಬೇಕು. (ಕೆಲವೆಡೆ ಬಸ್ ನಿಲ್ದಾಣಗಳು ಹೆದ್ದಾರಿಯಿಂದ ದೂರ ಇದೆ. ಹೊಸ ಮತ್ತು ಹಳೆ ಎಂದು ಎರಡೆರಡು ಕೂಡ).
3) ಕೊನೆಯ ಸ್ಥಳ ರಾತ್ರಿ 9-9.30 ಗಿಂತ ತಡವಾಗಬಾರದಂತೆ ಹೊರಡುವ ಸಮಯ ಹೊಂದಿಸಬೇಕು.
4) ರಸ್ತೆ ಚೆನ್ನಾಗಿರುವಾಗ, ಸ್ಟಾಪ್ಗಳು ಇರದಾಗ ಉತ್ತಮ ವೇಗ ಸಾಧಿಸಲಾಗಿದೆಯೆ ಎಂಬ ನಿಯಂತ್ರಣ ಇರಬೇಕು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.