ಭಾನುವಾರ, ಮೇ 16, 2021
26 °C

ಕೆಎಸ್‌ಡಿಎಲ್ ಸಂಸ್ಥೆ ಏಳಿಗೆಗೆ ಶ್ರಮಿಸಬೇಕಿದೆ: ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಸಾಲದ ಸುಳಿಯಲ್ಲಿ ರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯನ್ನು (ಕೆಎಸ್‌ಡಿ ಎಲ್) ಲಾಭದ ಮುಂಚೂಣಿಯಲ್ಲಿ ತರಲು ಎಲ್ಲರು ಸಹಕರಿಸಬೇಕು. ಸರ್ಕಾರದ ಪ್ರತಿಷ್ಠಿತ ಮತ್ತು ಹೆಮ್ಮಯ ಸಾಬೂನು ತಯಾರಿಕಾ ಸಂಸ್ಥೆಯ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಬೇಕು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.ನಗರದ ಒಕ್ಕಲಿಗರ ಭವನದಲ್ಲಿ ಗುರುವಾರ ಕೆಎಸ್‌ಡಿಎಲ್ ಸಂಸ್ಥೆಯ `ಸೋಪ್ ಸಂತೆ~ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಕೆಎಸ್‌ಡಿಎಲ್ ಸಂಸ್ಥೆಯನ್ನು ಉಳಿಸಿ, ಬೆಳೆಸುವಲ್ಲಿ ಸರ್ಕಾರವು ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಜನರು ಸಹ ಸಂಸ್ಥೆಯ ಏಳಿಗೆಗೆ ಕೈಜೋಡಿಸಬೇಕು~ ಎಂದರು.`ಸಂಸ್ಥೆಯ ಕೆಲ ಉತ್ಪನ್ನಗಳಿಗೆ ಭಾರಿ ಬೇಡಿಕೆಯಿದ್ದು, ಇನ್ನೂ ಕೆಲ ಉತ್ಪನ್ನಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರ ಸಿಕ್ಕಿಲ್ಲ. ಪ್ರಚಾರದ ಕೊರತೆ ಮತ್ತು ಇತರ ಕಾರಣಗಳಿಂದ ಕೆಲ ಉತ್ಪನ್ನಗಳು ಬೆಳಕಿಗೆ ಬಂದಿಲ್ಲ. ಸಂಸ್ಥೆಯ ಉತ್ಪನ್ನಗಳನ್ನು ಪ್ರದರ್ಶಿಸು ವಲ್ಲಿ ಮತ್ತು ಮಾರಾಟ ಮಾಡುವಲ್ಲಿ ಸೋಪ್ ಸಂತೆಯೂ ಸಹಕಾರಿಯಾಗ ಲಿದೆ. ಸೋಪ್ ಸಂತೆಯಲ್ಲಿ ಉತ್ಪನ್ನ ಗಳು ರಿಯಾಯಿತಿ ದರಕ್ಕೆ ದೊರೆಯುವ ಕಾರಣ ಜನರು ಹೆಚ್ಚಿನ ವೆಚ್ಚವಿಲ್ಲದೇ ಖರೀದಿಸಬಹುದು~ ಎಂದು ಅವರು ತಿಳಿಸಿದರು.ಕೆಎಸ್‌ಡಿಎಲ್ ಸಂಸ್ಥೆಯ ಅಧ್ಯಕ್ಷ ಶಿವಾನಂದ ನಾಯಕ್ ಮಾತನಾಡಿ, `ಉತ್ಪನ್ನಗಳ ಕುರಿತು ಪ್ರಚಾರದ ಜೊತೆಗೆ ಮಾರಾಟ ಮಾಡುವುದು ಮತ್ತು ಹೆಚ್ಚಿನ ಜನರಿಗೆ ತಲುಪುವುದು ಸೋಪ್ ಸಂತೆಯ ಮುಖ್ಯ ಉದ್ದೇಶ ವಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿರುವ ಸೋಪ್ ಸಂತೆಯನ್ನು ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ನಡೆಸ ಲಾಗು ವುದು. ಉತ್ಪನ್ನಗಳು ಗ್ರಾಮಸ್ಥರಿಗೆ ತಲುಪುವಂತೆ ಮಾಡಲಾಗುವುದು~ ಎಂದರು.

`ಮೈಸೂರು ಸ್ಯಾಂಡಲ್ ಸಾಬೂನನ್ನು ಅಪ್ಪಟ ಶ್ರೀಗಂಧ ಎಣ್ಣೆ ಯಿಂದ ತಯಾರಿಸಲಾಗುತ್ತಿದೆ. ಇದಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಂಧ ಬೆಳೆಯನ್ನು ಬೆಳೆಸುವಂತೆ ಕೃಷಿಕರಿಗೆ ಪ್ರೋತ್ಸಾಹಿಸ ಲಾಗುತ್ತಿದೆ. ಶ್ರೀಗಂಧ ಸಸಿಗಳನ್ನು ಮನೆ ಆವರಣ ದಲ್ಲಿ ಮತ್ತು ತೋಟದಲ್ಲಿ ಬೆಳೆಯು ವಂತೆ ಉತ್ತೇಜನ ನೀಡ ಲಾಗುತ್ತಿದೆ~ ಎಂದರು. ಶಾಸಕ ಕೆ.ಪಿ.ಬಚ್ಚೇಗೌಡ, ವಿಧಾನ ಪರಿಷತ್ತಿನ ಸದಸ್ಯ ವೈ.ಎ. ನಾರಾಯಣ ಸ್ವಾಮಿ, ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಬಲದೇವಕೃಷ್ಣ, ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪಯ್ಯ, ಉಪಾಧ್ಯಕ್ಷೆ ಬಿ.ಸಾವಿತ್ರಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.