ಕೆಎಸ್‌ಪಿ-ಪೋಸ್ಟಲ್ ಪಂದ್ಯ ಡ್ರಾ

7
ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್

ಕೆಎಸ್‌ಪಿ-ಪೋಸ್ಟಲ್ ಪಂದ್ಯ ಡ್ರಾ

Published:
Updated:
ಕೆಎಸ್‌ಪಿ-ಪೋಸ್ಟಲ್ ಪಂದ್ಯ ಡ್ರಾ

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಹಾಗೂ ಪೋಸ್ಟಲ್ ತಂಡಗಳ ನಡುವಿನ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯವು 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.ಬಿಡಿಎಫ್‌ಎ ಆಶ್ರಯದಲ್ಲಿ ಅಶೋಕ ನಗರದಲ್ಲಿರುವ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಎಸ್‌ಪಿಯ ಅರುಣ್ ಕುಮಾರ್ 32ನೇ ನಿಮಿಷದಲ್ಲಿ ಗೋಲು ಗಳಿಸಿದ್ದರು. ಇದರಿಂದ ಪೊಲೀಸ್ ತಂಡವೇ ಗೆಲುವು ಪಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪೋಸ್ಟಲ್‌ನ ಶ್ರೀನಿವಾಸ್ 74ನೇ ನಿಮಿಷದಲ್ಲಿ ಗೋಲು ತಂದಿತ್ತು ಕೆಎಸ್‌ಪಿ ಗೆಲುವಿನ ಆಸೆಗೆ ಅಡ್ಡಿಯಾದರಲ್ಲದೇ, ತಮ್ಮ ತಂಡವನ್ನು ಸೋಲಿನ ಅಪಾಯದಿಂದ ಪಾರು ಮಾಡಿದರು.ಆರ್‌ಡಬ್ಲ್ಯುಎಫ್ ತಂಡಕ್ಕೆ ಗೆಲುವು: ರೈಲು ಗಾಲಿ ಕಾರ್ಖಾನೆ (ಆರ್‌ಡಬ್ಲ್ಯುಎಫ್)  `ಎ' ಡಿವಿಷನ್ ಫುಟ್‌ಬಾಲ್‌ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2-1ಗೋಲುಗಳಿಂದ ಡಿವೈಎಸ್‌ಎಸ್ ತಂಡವನ್ನು ಮಣಿಸಿತು.ವಿಜಯಿ ತಂಡದ ನವೀನ್ 61 ಹಾಗೂ 78ನೇ ನಿಮಿಷದಲ್ಲಿ ಎರಡು ಗೋಲುಗಳನ್ನು ಗಳಿಸಿ ಗೆಲುವಿನ ರೂವಾರಿ ಎನಿಸಿದರು.ಶುಕ್ರವಾರದ ಪಂದ್ಯಗಳು: ಸ್ಟೂಡೆಂಟ್ ಯೂನಿಯನ್-ಸೌತ್ ಯುನೈಟೆಡ್ (ಸೂಪರ್ ಡಿವಿಷನ್), ಬೆಮೆಲ್-ಡಿವೈಎಸ್‌ಎಸ್.(ಎ ಡಿವಿಷನ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry