ಶನಿವಾರ, ಮೇ 8, 2021
18 °C
3,500 ಉದ್ಯೋಗ ಸೃಷ್ಟಿ

ಕೆಐಒಸಿಎಲ್: ಆಂಧ್ರದಲ್ಲಿ ಅದಿರು ಸಂಸ್ಕರಣೆ ಘಟಕಕ್ಕೆ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಐಒಸಿಎಲ್: ಆಂಧ್ರದಲ್ಲಿ ಅದಿರು ಸಂಸ್ಕರಣೆ ಘಟಕಕ್ಕೆ ಒಪ್ಪಂದ

ಬೆಂಗಳೂರು: ಕಬ್ಬಿಣದ ಅದಿರು ಸಂಸ್ಕರಿಸಿ ಸಣ್ಣ ಉಂಡೆಗಳನ್ನಾಗಿ (ಪೆಲೆಟ್) ಮಾಡುವ ಘಟಕ ಸ್ಥಾಪಿಸಲು ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (ಕೆಐಒಸಿಎಲ್) ಆಂಧ್ರಪ್ರದೇಶದ ಖನಿಜ ಅಭಿವೃದ್ಧಿ ನಿಗಮ (ಎಪಿಎಂಡಿಸಿ) ಮತ್ತು ರಾಷ್ಟ್ರೀಯ ಇಸ್ಪತ್ ನಿಗಮ್ ಲಿ. (ಆರ್‌ಐಎನ್‌ಎಲ್) ಜತೆ ಒಪ್ಪಂದ ಮಾಡಿಕೊಂಡಿದೆ.ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ರೂ.1,000 ಕೋಟಿಯಿಂದ ರೂ.1,500 ಕೋಟಿವರೆಗೆ ಹೂಡಿಕೆ ಮಾಡಿ ಈ ಘಟಕ ಸ್ಥಾಪಿಸಲಾಗುತ್ತಿದೆ. ಘಟಕದ ವಾರ್ಷಿಕ ತಯಾರಿಕಾ ಸಾಮರ್ಥ್ಯ 12ಲಕ್ಷ ಟನ್ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿವೆ.

ಅನಂತಪುರ ಜಿಲ್ಲೆಯ ನೇಮಕಲ್ ಮತ್ತು ಹಿರದಹಾಳು ಗ್ರಾಮಗಳಲ್ಲಿ `ಕೆಐಒಸಿಎಲ್' ಈ ಕಂಪೆನಿಗಳ ಸಹಭಾಗಿತ್ವದಲ್ಲಿ ಕಬ್ಬಿಣ ಅದಿರು ಶೋಧ ನಡೆಸಲಿದೆ. ಈ ಪಾಲುದಾರಿಕೆ ಸಂಸ್ಥೆಯಲ್ಲಿ `ಕೆಐಒಸಿಎಲ್' ಶೇ 51ರಷ್ಟು ಮತ್ತು `ಎಪಿಎಂಡಿಸಿ' ಶೇ 49ರಷ್ಟು ಪಾಲು ಹೊಂದಿವೆ.

ಇಲ್ಲಿ ಸಂಸ್ಕರಿಸುವ ಅದಿರನ್ನು `ಆರ್‌ಎನ್‌ಐಎಲ್'ಗೆ ಪೂರೈಸಲಾಗುತ್ತದೆ. ಘಟಕ ಆರಂಭವಾಗಲು  ಇನ್ನೂ 36 ತಿಂಗಳು ಬೇಕಾಗುತ್ತದೆ, ಇದರಿಂದ 3,500 ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದೂ ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.