ಮಂಗಳವಾರ, ಮೇ 11, 2021
25 °C

ಕೆಐಡಿಬಿಗೆ ಜಮೀನು ನೀಡುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯ ಸರ್ಕಾರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ನೆಲಮಂಗಲ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಶಪಡಿಸಿಕೊಳ್ಳಲಿರುವ 1080 ಎಕರೆ ಜಮೀನನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ~ ಎಂದು `ಸೋಂಪುರ ಹೋಬಳಿ ರೈತ ಹಿತರಕ್ಷಣಾ ವೇದಿಕೆ~ ಪಟ್ಟು ಹಿಡಿದಿದೆ.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಬಿ.ಎನ್.ಪರಮೇಶ್, `ಜಮೀನು ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ಮೊದಲು ಜಂಟಿ ಅಳತೆ ಕಾರ್ಯವನ್ನು ಮಾಡಬೇಕಾಗುತ್ತದೆ. ಆದರೆ ಅಧಿಸೂಚನೆ ನಂತರ ಅಳತೆ ಕಾರ್ಯ ನಡೆಸಲಾಗಿದೆ.ಅಲ್ಲದೇ ತಾಲ್ಲೂಕಿನ ಲಕ್ಷ್ಮಣಪುರ, ಬೀರಗೊಂಡನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮಗಳು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ ಆಸುಪಾಸುನಲ್ಲಿದ್ದರೂ ಆ ಭೂಮಿಗೆ ಕಡಿಮೆ ಬೆಲೆ ನಮೂದಿಸಲಾಗಿದೆ.

 

ಸ್ಮಶಾನ, ವಾಸದ ಮನೆ, ಶಾಲೆಗಳನ್ನು ಸರ್ವೆಯಲ್ಲಿ ಒಳಪಡಿಸಬಾರದು ಎಂಬ ಸೂಚನೆ ಇದ್ದರೂ ಸಹ ಇವುಗಳನ್ನು ಸರ್ವೆ ಸಂದರ್ಭದಲ್ಲಿ ಸೇರಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇಷ್ಟೆಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಿದ ಕೆಐಎಡಿಬಿಯು ರೈತರನ್ನು ಕೇಳದೇ ಈ ನಿರ್ಧಾರ ಕೈಗೊಂಡಿದೆ~ ಎಂದು ಆರೋಪಿಸಿದರು.ವೇದಿಕೆಯ ಮುಖಂಡ, ಬಿಜೆಪಿ ಕಾರ್ಯಕರ್ತ ಎಸ್.ಸಿ.ಸುರೇಶ್ ಮಾತನಾಡಿ, `ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ರೈತರನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ರೈತರಕ್ಷಣೆಯ ಬದಲು ಬಂಡವಾಳಶಾಹಿ ಸರ್ಕಾರವಾಗಿ ಪರಿವರ್ತನೆ ಹೊಂದಿದೆ. ಆ ಪಕ್ಷದ ಕಾರ್ಯಕರ್ತನೆಂದು ಹೇಳಿಕೊಳ್ಳಲು ವಿಷಾದವೆನಿಸುತ್ತದೆ.ಭೂಸ್ವಾಧೀನ ನಿರ್ಧಾರವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಲು ಪ್ರತಿದಿನ ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಕೆ.ರಾಜು ಅವರ ಕಚೇರಿಗೆ ಹೋದರು ಅವರು ಸಿಗುತ್ತಿಲ್ಲ~ ಎಂದು ವಿಷಾದಿಸಿದರು.ಶಿವಗಂಗೆಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, `ರೈತರ ಜಮೀನನ್ನು ಬಲವಂತವಾಗಿ ಕಿತ್ತುಕೊಳ್ಳಲು ಹೊರಟಿರುವ ಸರ್ಕಾರದ ನೀತಿಯ ವಿರುದ್ಧ ಮಠಾಧೀಶರು ಒಂದಾಗಿ ರೈತರನ್ನು ಬೆಂಬಲಿಸಲಿದ್ದಾರೆ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.